ಪತಿ ಅಭಿಷೇಕ್‌ರ ಈ ಗುಣ ಐಶ್ವರ್ಯಾ ರೈಗೆ ಇಷ್ಟವಂತೆ!

Suvarna News   | Asianet News
Published : Aug 11, 2021, 04:45 PM IST

ಬಾಲಿವುಡ್‌ನ ಮೋಸ್ಟ್‌ ಅಡೋರಬಲ್‌ ಹಾಗೂ ಪವರ್‌ಫುಲ್‌ ಕಪಲ್‌ಗಳಲ್ಲಿ ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಒಬ್ಬರು. ಐಶ್ವರ್ಯಾ ಒಮ್ಮೆ ತನ್ನ ಪತಿ ಅಭಿಷೇಕ್ ಬಚ್ಚನ್ ಬಗ್ಗೆ ತಾನು ಹೆಚ್ಚು ಇಷ್ಟಪಡುವ ಗುಣಗಳನ್ನು ಬಹಿರಂಗಪಡಿಸಿದ್ದಾರೆ. 

PREV
19
ಪತಿ ಅಭಿಷೇಕ್‌ರ ಈ ಗುಣ ಐಶ್ವರ್ಯಾ ರೈಗೆ ಇಷ್ಟವಂತೆ!

ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ಎಲ್ಲರ ಗಮನ ಸೆಳೆಯುವ ಅಪರೂಪದ ಜೋಡಿ. ಮಗಳಾದರೂ ಈ ಜೋಡಿಯ ಚಾರ್ಮ್ ಮಾತ್ರ ಕಡಿಮೆಯಾಗಿಲ್ಲ. ಲವಲವಿಕೆಯ ಈ ಜೋಡಿಗೆ ಫಿದಾ ಆಗದವರು ಯಾರು ಹೇಳಿ? 

29

ಇವರ ಕೆಮಿಸ್ಟ್ರಿ ಹಾಗೂ ಸುಂದರ ಬಾಂಡಿಗ್‌ ಮಾದರಿ. ಎಲ್ಲಿಯೋ ಒಂದು ಕಾರ್ಯಕ್ರಮದಲ್ಲಿ ಅಭಿಷೇಕ್ ನಡೆ ಈ ಜೋಡಿಯ ಸಂಬಂಧದ ಬಗ್ಗೆ ಅನುಮಾನ ಮೂಡುವಂತೆ ಮಾಡಿದರೆ, ಮತ್ಯಾವತ್ತೂ ಬಹಿರಂಗವಾಗಿ ಈ ಜೋಡಿ ಅನ್ ಯಶ್ಯೂಯಲ್ ಆಗಿ ಬಿಹೇವ್ ಮಾಡಿದ್ದೇ ಇಲ್ಲ. 

39

ಐಶ್ವರ್ಯಾ ಒಮ್ಮೆ ತನ್ನ ಪತಿ ಅಭಿಷೇಕ್ ಬಚ್ಚನ್ ಬಗ್ಗೆ ತಾನು ಹೆಚ್ಚು ಇಷ್ಟಪಡುವ ವಿಷಯಗಳನ್ನು ಬಹಿರಂಗಪಡಿಸಿದರು. ಸಹಜವಾಗಿಯೇ ಅಭಿಮಾನಿಗಳಿಗೆ ಈ ಜೋಡಿಯ ಪರ್ಸನಲ್ ವಿಷಯಗಳು ತಿಳಿಯುವ ಕುತೂಹಲ. 

49

ದಕ್ಷಿಣ ಭಾರತಯವರಾದ ಐಶ್ವರ್ಯಾ ಬಗ್ಗೆ ಬಾಲಿವುಡ್‌ನಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಇವರು ಬಚ್ಚನ್ ಕುಟುಂಬದ ಸೊಸೆಯಾದಾಗಲೂ ಅಭಿಮಾನಿಗಳು ಸಂಭ್ರಮಿಸಿದ್ದರು.  ಅಭಿಷೇಕ್ ಬಚ್ಚನ್ ಅವರ ಈ ಗುಣಗಳು ರೈ ಅವರನ್ನು ಹೆಚ್ಚು ಆಕರ್ಷಿಸುತ್ತವಂತೆ.  

59

ಫಿಲ್ಮ್‌ಫೇರ್‌ನೊಂದಿಗಿನ ಸಂವಾದದಲ್ಲಿ, ನಟಿ ತಾನು ಹೆಚ್ಚು ಪ್ರೀತಿಸುವ ತನ್ನ ಪತಿಯ ಗುಣಗಳನ್ನು ಬಹಿರಂಗಪಡಿಸಿದರು.


 

69

ಅಭಿ, ತುಂಬಾ  ಸಾಮಾನ್ಯ ವ್ಯಕ್ತಿ  ಎಂದು  ಪತಿಯ ಮೆಚ್ಚಗೆ ಸೂಚಿಸಿದ ಐಶ್ವರ್ಯಾ  ಅಭಿಷೇಕ್ ಯಾವತ್ತೂ  ಶೋ ಆಫ್‌ ಮಾಡುವುದಿಲ್ಲ. ಅದು ಅವರ ಬಗ್ಗೆಯ ಬೆಸ್ಟ್‌ ಪಾರ್ಟ್ ಎಂದು ಐಶ್ವರ್ಯಾ ಹೇಳಿದರು. 

79

ನೀವು ಮಾತಾನಾಡಲು ಇಷ್ಟಪಡುವಂತಹ  ವ್ಯಕ್ತಿ ಆತ. ಅವರು ತುಂಬಾ ಆಕರ್ಷಕ. ಅವರ ಈ ಗುಣಗಳನ್ನು ನಾನು ಹೆಚ್ಚು ಪ್ರೀತಿಸುತ್ತೇನೆ ಎಂದು ಇನ್ನಷ್ಟು ಪತಿಯ ಬಗ್ಗೆ ಹೇಳಿಕೊಂಡರು.

89

ಸುದೀರ್ಘ ವಿರಾಮದ ನಂತರ, ಐಶ್ವರ್ಯಾ ರೈ ಮಣಿರತ್ನಂ ಅವರ ಚಿತ್ರ  ಪೊನ್ನಿನ್ ಸೆಲ್ವನ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

99

ಕಲ್ಕಿ ಕೃಷ್ಣಮೂರ್ತಿಯವರ 1995 ರ ಕಾದಂಬರಿಯನ್ನು ಆಧರಿಸಿದ  ಈ ತಮಿಳು ಸಿನಿಮಾದಲ್ಲಿ ನಟಿ ಮೊದಲ ಬಾರಿಗೆ ಡಬಲ್‌ ಹಾಗೂ ನೆಗೆಟಿವ್‌ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

click me!

Recommended Stories