ಪತ್ನಿ ಡಿವೋರ್ಸ್ ಅರ್ಜಿ ಬಳಿಕ ಮೊದಲ ಬಾರಿಗೆ ಮೌನ ಮುರಿದ ನಟ ವಿಜಯ್, ಮತ್ತೆ ಕೋಲಾಹಲ ಶುರುವಾಗಿದೆ. ಪತ್ನಿ ಸಂಗೀತಾ ಡಿವೋರ್ಸ್ ಅರ್ಜಿ ಬಳಿಕ ನಟಿ ತ್ರಿಶಾ ಜೊತೆ ಕಾಣಿಸಿಕೊಂಡ ವಿಜಯ್ ಇದೀಗ ಈ ಕುರಿತು ಮಾತನಾಡಿದ್ದಾರೆ.
ತಮಿಳು ನಟ ವಿಜಯ್ ಜೊಸೆಫ್ ಟಿವಿಕೆ ರಾಜಕೀಯ ಪಕ್ಷ ಸ್ಥಾಪಿಸಿ ತಮಿಳುನಾಡಿನಲ್ಲಿ ಭಾರಿ ಕ್ರಾಂತಿ ಮಾಡಿದ್ದಾರೆ. ರಾಜಕೀಯದಲ್ಲಿ ಮಾತ್ರವಲ್ಲ ವೈಯುಕ್ತಿಕ ಬದುಕಿನಲ್ಲಿ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ನಟ ವಿಜಯ್ ಜೊಸೆಫ್‌ಗೆ ನಟಿಯೊಂದಿಗೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸಿ ಪತ್ನಿ ಸಂಗೀತಾ ಸ್ವರ್ಣಲಿಂಗಮ್ ವಿಚ್ಚೇದನ ಅರ್ಜಿ ಸಲ್ಲಿಸಿದ ಬಳಿಕ ಕೋಲಾಹಲವೇ ಸೃಷ್ಟಿಯಾಗಿದೆ. ಇದೀಗ ನಟ ವಿಜಯ್ ಈ ಡಿವೋರ್ಸ್ ಅರ್ಜಿ ಕುರಿತು ಮೌನ ಮುರಿದಿದ್ದಾರೆ.
26
ಅಭಿಮಾನಿಗಳು, ಪಾರ್ಟಿ ಕಾರ್ಯಕರ್ತರ ಮುಂದೆ ಮೌನ ಮುರಿದ ನಟ
ಪತ್ನಿ ವಿಚ್ಚೇದನ ಅರ್ಜಿ ಬೆನ್ನಲ್ಲೇ ನಟ ವಿಜಯ್ ಜೊಸೆಫ್ ನಟಿ ತ್ರಿಶಾ ಜೊತೆ ಸಾರ್ವಜನಿಕ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಮತ್ತೊಂದು ಸುತ್ತಿನ ಜಟಾಪಟಿಗೆ ಕಾರಣವಾಗಿತ್ತು. ಈ ಎಲ್ಲಾ ಬೆಳವಣಿಗೆ ನಡುವೆ ನಟ ವಿಜಯ್ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾರ್ಟಿಯ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಮುಂದೆ ಮೌನ ಮುರಿದಿದ್ದಾರೆ.
36
ನಟ ವಿಜಯ್ ಜೊಸೆಫ್ ಹೇಳಿದ್ದೇನು
ಅಭಿಮಾನಿಗಳು ಯಾವುದೇ ವಿಚಾರಕ್ಕೂ ಸಂಕಟ ಪಡಬೇಕಿಲ್ಲ. ವೈಯುಕ್ತಿಕ ವಿಚಾರಗಳ ಕುರಿತು ನೋವು ಅನುಭವಿಸಬೇಕಿಲ್ಲ. ಅದರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ , ಕಾರಣ ಇದು ಯೋಗ್ಯವಲ್ಲದ ವಿಚಾರ. ನನ್ನ ವೈಯುಕ್ತಿಕ ವಿಚಾರಗಳನ್ನು ನಾನು ನಿರ್ವಹಣೆ ಮಾಡುತ್ತೇನೆ. ನಾವು ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಬೇಕಿದೆ ಎಂದು ವಿಜಯ್ ಜೊಸೆಫ್ ಹೇಳಿದ್ದಾರೆ.
ಪಕ್ಷದ ಕಾರ್ಯಕರ್ತರು ವೈಯುಕ್ತಿಕ ವಿಚಾರಗಳಿಗೆ ಕಿವಿಗೊಡಬೇಡಿ, ವದಂತಿಗಳಿಗೆ ಹೆದರಬೇಡಿ ಎಂದಿದ್ದಾರೆ. ನಾವು ಜನರ ಕಷ್ಟಗಳನ್ನು ಕೇಲಲು ಅದಕ್ಕೆ ಪರಿಹಾರ ಸೂಚಿಸಲು ಬಂದಿದ್ದೇವೆ. ನಮ್ಮ ಉದ್ದೇಶದ ಜೊತೆ ಮುಂದೆ ಸಾಗೋಣ ಎಂದು ವಿಜಯ್ ಹೇಳಿದ್ದಾರೆ. ಪತ್ನಿ ಸಂಗೀತಾ ಡಿವೋರ್ಸ್ ಬೆನ್ನಲ್ಲೇ ಪಿಟೀಶನ್ ಒಂದನ್ನು ಸಲ್ಲಿಕೆ ಮಾಡಿದ್ದಾರೆ. ಇದರ ಬೆನ್ನಲ್ಲೇ ವಿಜಯ್ ಮೌನ ಮುರಿದಿದ್ದಾರೆ.
56
ಮನೆಯಲ್ಲಿರಲು ಪಿಟೀಶನ್
ವಿಜಯ್ ಜೊಸೆಫ್ ಜೊತೆಗಿನ ವಿವಾಹ ವಿಚ್ಚೇದನ ಪ್ರಕ್ರಿಯ ಪೂರ್ಣಗೊಳ್ಳುವವರೆಗೆ ಮನೆಯಲ್ಲಿ ಇರಲು ಅವಕಾಶ ನೀಡಬೇಕು ಎಂದು ಸಂಗೀತಾ ಸ್ವರ್ಣಲಿಂಗಮ್ ಪಿಟೀಶನ್ ಸಲ್ಲಿಸಿದ್ದಾರೆ. ಈ ನಡೆ ಮತಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇತ್ತ ವಿಜಯ್ ಕೂಡ ವದಂತಿಗಳಿಗೆ ಕಿವಿಗೊಡಬೇಡಿ ಎಂದಿದ್ದಾರೆ. ಹೀಗಾಗಿ ಈ ಜೋಡಿ ಮತ್ತೆ ಒಂದಾಗುತ್ತಾ ಅನ್ನೋ ಚರ್ಚೆಗಳು ನಡೆಯುತ್ತಿದೆ.
66
ಭಾರತದಲ್ಲಿ ಸಂಗೀತಾಗೆ ಪ್ರತ್ಯೇಕ ಮನೆಯಿಲ್ಲ
ನಟ ವಿಜಯ್ ಪತ್ನಿಗೆ ಭಾರತದಲ್ಲಿ ಪ್ರತ್ಯೇಕ ಮನೆ ಇಲ್ಲ. ಸದ್ಯ ಮಕ್ಕಳ ಜೊತೆ ಲಂಡನ್‌ನಲ್ಲಿ ನೆಲೆಸಿರುವ ಸಂಗೀತಾ,ಈ ಪಿಟೀಶನ್ ಸಲ್ಲಿಸಿದ್ದಾರೆ. ಹೀಗಾಗಿ ವಿಜಯ್ ಮನೆ ಅಥವಾ ಪ್ರತ್ಯೇಕ ಮನೆಯ ವ್ಯವಸ್ಥೆ ಮಾಡಿಕೊಡುವಂತೆ ಪಿಟೀಶನ್‌ನಲ್ಲಿ ಮನವಿ ಮಾಡಿದ್ದಾರೆ.
ಭಾರತದಲ್ಲಿ ಸಂಗೀತಾಗೆ ಪ್ರತ್ಯೇಕ ಮನೆಯಿಲ್ಲ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.