ಶ್ರೀದೇವಿ ಹೆಸರು ಕೇಳಿದರೆ ಫೈರಿಂಗ್‌ ನಿಲ್ಲಿಸುತ್ತಿದ್ದರಂತೆ ತಾಲಿಬಾನಿಗಳು!

First Published Aug 19, 2021, 5:37 PM IST

ಭಯೋತ್ಪಾದಕ ಸಂಘಟನೆ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದು, ಅಲ್ಲಿನ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಅಧ್ಯಕ್ಷ ಅಶ್ರಫ್ ಘನಿ ಮತ್ತು ಉಪಾಧ್ಯಕ್ಷ ಅಮಿರುಲ್ಲಾ ಸಲೇಹ್ ದೇಶ ಬಿಟ್ಟು ಓಡಿ ಹೋಗಿದ್ದಾರೆ. ಅಲ್ಲಿನ ನಾಗರಿಕರು ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಬಾಲಿವುಡ್‌ನ ಪ್ರಸಿದ್ಧ  'ಖುದಾ ಗವಾ' ಸಿನಿಮಾವನ್ನು ಈ ರಾಷ್ಟ್ರದಲ್ಲಿಯೇ ಚಿತ್ರೀಕರಿಸಲಾಗಿದೆ. ಅಮಿತಾಬ್ ಬಚ್ಚನ್ ಮತ್ತು ಶ್ರೀದೇವಿ ನಟಿಸಿದ  ಖುದಾ ಗವಾ ಅನ್ನು ಅಫ್ಘಾನಿಸ್ತಾನದ ಅನೇಕ ಭಾಗಗಳಲ್ಲಿ  ಚಿತ್ರೀಕರಿಸಲಾಗಿದೆ. ಈ ಸಿನಿಮಾ ಶೂಟಿಂಗ್‌ ವೇಳೆಯ ಕೆಲವು ಇಂಟರೆಸ್ಟಿಂಗ್‌ ಸಂಗತಿಗಳು ಇಲ್ಲಿವೆ. 

ಶ್ರೀದೇವಿ ಜೊತೆ ಅಮಿತಾಬ್ ಬಚ್ಚನ್ ಕೂಡ ಅಫ್ಘಾನಿಸ್ತಾನಕ್ಕೆ ಶೆಲ್ ದಾಳಿ ಸಾಮಾನ್ಯವಾಗಿದ್ದ ಸಮಯದಲ್ಲಿ ಚಿತ್ರದ ಚಿತ್ರೀಕರಣಕ್ಕಾಗಿ ಹೋಗಿದ್ದರು. ಈ ಸಿನಿಮಾವನ್ನು ಕಬೂಲ್‌ನ ಅರ್ಟಲ್‌ ಬ್ರಿಡ್ಜ್‌ನಿಂದ ಹಿಡಿದು ಮಜರ್-ಇ-ಶರೀಫ್ ವರೆಗೆ ಅಫ್ಘಾನಿಸ್ತಾನ ಹಲವು ಭಾಗಗಳಲ್ಲಿ ಚಿತ್ರೀಕರಿಸಲಾಗಿದೆ.

ಅಮಿತಾಬ್ ಮತ್ತು ಶ್ರೀದೇವಿ ಇಲ್ಲಿ ಶೂಟಿಂಗ್ ಮಾಡುತ್ತಿದ್ದಾಗ, ಮಾಜಿ ರಾಷ್ಟ್ರಪತಿ ನಜೀಬುಲ್ಲಾ ಅಹ್ಮದ್‌ಜೈ ಭದ್ರತೆಗಾಗಿ ಹೆಚ್ಚಿನ ವ್ಯವಸ್ಥೆ ಮಾಡಿದ್ದರು. ಮೂಲಗಳ ಪ್ರಕಾರ, ಈ ಸಮಯದಲ್ಲಿ ನಜೀಬುಲ್ಲಾ ದೇಶದ ಸೇನೆಯನ್ನು ಅಮಿತಾಬ್ ಬಚ್ಚನ್ ಭದ್ರತೆಗೆ ನಿಯೋಜಿಸಿದ್ದರು.

ಇದು ಮಾತ್ರವಲ್ಲ, ಶ್ರೀದೇವಿ ಚಿತ್ರೀಕರಣದಲ್ಲಿದ್ದಾಗ, ಆ ಸಮಯದಲ್ಲಿ ಅಫ್ಘಾನಿಸ್ತಾನದಲ್ಲಿ ಶಾಂತಿಯ ಸಂಕೇತವಾಗಿದ್ದರು. ಇಲ್ಲಿನ ಭಯೋತ್ಪಾದಕರು ಕೂಡ ಶ್ರೀದೇವಿಯ ದೊಡ್ಡ ಫ್ಯಾನ್ಸ್ ಆಗಿದ್ದರು. ಆಕೆಯ ಹೆಸರನ್ನು ಕೇಳಿದ ನಂತರ ಅವರು ಗುಂಡು ಹಾರಿಸುವುದನ್ನು ನಿಲ್ಲಿಸುತ್ತಿದ್ದರು.

ಶೂಟಿಂಗ್‌ಗಾಗಿ ಅಮಿತಾಬ್ ಬಚ್ಚನ್ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದಾಗ ಅಧ್ಯಕ್ಷ ನಜೀಬುಲ್ಲಾ ಅಹ್ಮದ್‌ಜೈ ಅವರು ಅಮಿತಾಬ್‌ರನ್ನು ತಮ್ಮ ವೈಯಕ್ತಿಕ ಅತಿಥಿಯಾಗಿ ನೋಡಿಕೊಂಡರು. ಇದರ ಬಗ್ಗೆ ನೆನಪಿಸಿಕೊಂಡು, ಅಮಿತಾಬ್ ಬಚ್ಚನ್ ಕೆಲವು ವರ್ಷಗಳ ಹಿಂದೆ ತಮ್ಮ ಬ್ಲಾಗ್ ನಲ್ಲಿ ಬರೆದಿದ್ದಾರೆ.

'ನನ್ನ ಹೋಸ್ಟ್ ಈಗ ಎಲ್ಲಿದ್ದಾರೆ ಎಂದು ನನಗೆ ಗೊತ್ತಿಲ್ಲ. ಆಗಾಗ ನನಗೆ ಅವರ ನೆನಪು ಕಾಡುತ್ತದೆ ಅವರು ಎಲ್ಲಿದ್ದಾರೆ ಎಂದು ಬಿಗ್‌ ಬಿ ಬರೆದಿದ್ದಾರೆ. ಅಮಿತಾಬ್ ಬಚ್ಚನ್ ಅವರನ್ನು ರಕ್ಷಿಸಲು ಅರ್ಧದಷ್ಟು ಸೈನ್ಯವನ್ನು ಬಳಸಿದ ಅಧ್ಯಕ್ಷ ನಜೀಬುಲ್ಲಾ ಅವರನ್ನು ಸೆಪ್ಟೆಂಬರ್ 1996 ರಲ್ಲಿ ತಾಲಿಬಾನ್ ಕ್ರೂರವಾಗಿ ಹತ್ಯೆ ಮಾಡಿತು.

ಖುದಾ ಗವಾ ಶೂಟಿಂಗ್‌ ಸ್ಥಳಕ್ಕೆ ಕೇವಲ ಕುದುರೆಗಳ ಮೂಲಕ ಮಾತ್ರ ತಲುಪಬಹುದಾಗಿತ್ತು. ಅಮಿತಾಬ್ ಬಚ್ಚನ್ ಮತ್ತು ಅವರ ತಂಡ ಸಣ್ಣ ವಿಮಾನಗಳ ಮೂಲಕ ನೇಪಾಳದ ಗಡಿಗೆ ತಲುಪಿ, ಅಲ್ಲಿಂದ ಇಡೀ ಶೂಟಿಂಗ್‌ ಯೂನಿಟ್‌ ಕುದುರೆಯ ಮೇಲೆ ಲೊಕೇಷನ್‌ಗೆ ತಲುಪಿದ್ದರು, 

ಖುದಾ ಗವಾ ಸಿನಿಮಾವನ್ನು ಅಫ್ಘಾನಿಸ್ತಾನ ಮತ್ತು ಭಾರತದಲ್ಲಿ ಶೂಟ್‌ ಮಾಡಲಾಗಿದೆ. ಶ್ರೀದೇವಿ ಮತ್ತು ಅಮಿತಾಬ್ ಬಚ್ಚನ್ ಅವರ ನಟನೆಯು ಜನರಿಂದ ಮೆಚ್ಚುಗೆ ಪಡೆದಿದೆ. ಶ್ರೀದೇವಿಯೇ ಅಮ್ಮ ಮಗಳು ಎರಡು ಪಾತ್ರದಲ್ಲಿ
ಕಾಣಿಸಿಕೊಂಡಿದ್ದಾರೆ.

click me!