ಹೇಮಾ ಮಾಲಿನಿ ಅವರ 1974ರಲ್ಲಿ ಬಿಡುಗಡೆಯಾದ 'ಧರ್ಮಾತ್ಮ' ಚಿತ್ರವನ್ನು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಶೂಟ್ ಮಾಡಲಾಗಿತ್ತು. ಸಿನಿಮಾದ ನಾಯಕ ನಟ ಫಿರೋಜ್ ಖಾನ್. ಇದು ಅಫ್ಘಾನಿಸ್ತಾನದಲ್ಲಿ ಶೂಟಿಂಗ್ ಮಾಡಿದ ಮೊದಲ ಬಾಲಿವುಡ್ ಸಿನಿಮಾ.
ಇತ್ತೀಚಿನ ಅಫ್ಘಾನಿಸ್ತಾನದ ಪರಿಸ್ಥಿತಿ ನಂತರ ಹೇಮಾಮಾಲಿನಿ ಮಾತಾನಾಡಿದ್ದಾರೆ. ಅವರು ಸಂದರ್ಶನದಲ್ಲಿ ಶೂಟಿಂಗ್ ವೇಳೆಯ ತಮ್ಮ ಭಯಾನಕ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಆಫ್ಘಾನಿಸ್ತಾನದಲ್ಲಿ ಮೊದಲಿಂದಲೂ ತಾಲಿಬಾನಿಗಳು ಉಪಟಳವಿದೆ. ಆ ಬಗ್ಗೆ ಸಂದರ್ಶನವೊಂದರಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
'ಅಲ್ಲಿ ಏನಾಗುತ್ತಿದೆ ಮತ್ತು ಜನರು ದೇಶದಿಂದ ಪಲಾಯನ ಮಾಡುವ ಚಿತ್ರಗಳನ್ನು ನೋಡುವುದು ತುಂಬಾದುಃಖಕರವಾಗಿದೆ. ವಿಮಾನ ನಿಲ್ದಾಣದಲ್ಲಿ ಆ ಜನಸಂದಣಿ ನಿಜವಾಗಿಯೂ ಭಯ ಹುಟ್ಟಿಸುತ್ತದೆ ನಾವು ಚಿತ್ರೀಕರಣಕ್ಕಾಗಿ ಕಾಬೂಲ್‌ಗೆ ಹೋದಾಗ, ಅದು ತುಂಬಾ ಸುಂದರವಾಗಿತ್ತು 'ಎಂದು ಹೇಳಿದ್ದಾರೆ ಹೇಮಾ.
ನಾವು ಕಾಬೂಲ್ ವಿಮಾನ ನಿಲ್ದಾಣ ಹತ್ತಿರದ ಹೋಟೆಲ್‌ನಲ್ಲಿ ತಂಗಿದ್ದೆವು. ನಾವು ಬಾಮಿಯಾನ್ ಮತ್ತು ಬ್ಯಾಂಡ್-ಇ-ಅಮೀರ್ ನಂತಹ ಸ್ಥಳಗಳಲ್ಲಿ ಚಿತ್ರೀಕರಣ ಮಾಡಿದೆವು. ಅಲ್ಲಿಂದ ಹಿಂದಿರುಗುವಾಗ, ಅನೇಕ ಸಲ ಉದ್ದ ಕುರ್ತಾ ಮತ್ತು ಗಡ್ಡವನ್ನು ಹೊಂದಿರುವ ಜನರನ್ನು ನೋಡುತ್ತಿದ್ದೇವು. ಅವರು ಈ ತಾಲಿಬಾನಿಗಳಂತೆ ಕಾಣುತ್ತಿದ್ದರು. ಆ ಸಮಯದಲ್ಲಿ ಸೋವಿಯತ್ ರಷ್ಯಾ ಕೂಡ ಅಫ್ಘಾನಿಸ್ತಾನದಲ್ಲಿ ಅಧಿಕಾರದಲ್ಲಿತ್ತು ಎಂದು ತಮ್ಮ ಅನುಭವ ಬಿಚ್ಚಿಟ್ಟರು ನಟಿ .
ಒಂದು ದಿನ ಚಿತ್ರೀಕರಣದ ನಂತರ, ಖೈಬರ್ ಪಾಸ್ ಮೂಲಕ ಹಾದು ಹೋಗುತ್ತಿದ್ದಾಗ, ಜೊತೆಯಲ್ಲಿ ಇದ್ದ ತಮ್ಮ ತಂದೆ, ಇವುಗಳ ಬಗ್ಗೆ ನಾವು ಇತಿಹಾಸ ಪುಸ್ತಕಗಳಲ್ಲಿ ಓದಿದ್ದೇವೆ ಎಂದು ನನಗೆ ಹೇಳುತ್ತಿದ್ದರು. ಆ ಸಮಯದಲ್ಲಿ ಯಾವುದೇ ಭಯದ ವಾತಾವರಣ ಇರಲಿಲ್ಲ ಎಂದು ಹೇಮಾ ಮಾಲಿನಿ ಹೇಳಿದರು.
ಒಮ್ಮೆ ನಾವು ಶೂಟಿಂಗ್ ಮುಗಿಸಿಕೊಂಡು ಬರುವಾಗ ನಾನು ತುಂಬಾ ಹಸಿದಿದ್ದೆ. ಊಟಕ್ಕಾಗಿ ರಸ್ತೆಯ ಬದಿಯ ಒಂದು ಢಾಬಾದ ಬಳಿ ನಿಲ್ಲಿಸಿದರು. ಅದು ಮಾಂಸಾಹಾರಿ ಢಾಬಾ ಆಗಿದ್ದ ಕಾರಣ ಸಸ್ಯಾಹಾರಿಗಳಾಗಿದ್ದರಿಂದ, ನಾವು ರೊಟ್ಟಿಯನ್ನು ಈರುಳ್ಳಿಯೊಂದಿಗೆ ಸೇವಿಸಿದೆವು ಎಂದು ತಮ್ಮ ಅನುಭವ ಹೇಳಿಕೊಂಡಿದ್ದಾರೆ.
ಈ ಸಮಯದಲ್ಲಿ ಮತ್ತೆ ನಾನು ಅಲ್ಲಿ ಉದ್ದ ಕುರ್ತಾ ಮತ್ತು ಗಡ್ಡ ಹೊಂದಿರುವ ಜನರನ್ನು ನೋಡುತ್ತಿದ್ದೇನೆ. ಆಗ ಅವರ ಗಡ್ಡ ಮತ್ತು ಉದ್ದ ಬಟ್ಟೆಯ ಲುಕ್ ನನಗೆ ಭಯವಾಗುತ್ತಿತ್ತು. ಅವರಲ್ಲಿ ಹೆಚ್ಚಿನವರು ಕಾಬೂಲಿವಾಲಾ ಅವರಂತೆ ಕಾಣುತ್ತಾರೆ ಎಂದ ಹೇಮಾಮಾಲಿನಿ.
ಜುಲೈ 25, 1975 ರಂದು ಬಿಡುಗಡೆಯಾದ ಹೇಮಾ ಮಾಲಿನಿ ಅವರ 'ಧರ್ಮಾತ್ಮ' ಸಿನಿಮಾ ಸುಮಾರು 2.5 ಕೋಟಿ ಗಳಿಸಿತ್ತು. ಈ ಚಿತ್ರದ ಕ್ಯಾ ಖೂಬ್ ಲಗ್ತಿ ಹೋ, ತೇರೆ ಚೆಹ್ರೆ ಮೇ ವೋಹ್ ಜಾದು ಹೈ ಮತ್ತು ಆಪ್ನೆ ಕಿಸಿ ಸೆ ಕಭಿ ಪ್ಯಾರ್ ಕಿಯಾ ಹೈ ಹಾಡುಗಳು ದೊಡ್ಡ ಹಿಟ್ ಆಗಿದ್ದವು.