ತಮಿಳು ಕುಟುಂಬದ ಹುಡುಗಿ ನಿವೇತಾ ಬೆಳೆದದ್ದು ದುಬೈನಲ್ಲಿ.
ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ.
2015ರಲ್ಲಿ ಮಿಸ್ ಇಂಡಿಯಾ UAE ಪೇಜೆಂಟ್ ವಿಜೇತೆ.
2016ರಲ್ಲಿ 'ಒರು ನಾಲ್ ಕೂತು' ಚಿತ್ರದ ಮೂಲಕ ಕಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು.
9 ಸಿನಿಮಾಗಳಲ್ಲಿ ಅಭಿನಯಿಸಿರುವ ನಿವೇತಾ ಈಗ ನಾಲ್ಕು ಪ್ರಾಜೆಕ್ಟ್‌ನಲ್ಲಿ ಬ್ಯುಸಿಯಾಗಿದ್ದಾರೆ.
ಅಲ್ಲಾ ವೈಕುಂಟಪುರಮುಲೋ ಸಿನಿಮಾದಲ್ಲಿ ನಂದಿನಿಯಾಗಿ ಅಭಿನಯಿಸಿದ್ದಾರೆ.
ವೃತ್ತಿ ಜೀವನದಲ್ಲಿ ಅತ್ಯಂತ ಜನಪ್ರಿಯತೆ ತಂದುಕೊಟ್ಟ ಪಾತ್ರ ನಂದಿನಿ ಇದು.
2.1 ಮಿಲಿಯನ್ ಪಾಲೋವರ್ಸ್ ಹೊಂದಿರುವ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿರುವ ಫೋಟೋಗಳಿವು.
ಅನೇಕ ಟಿವಿ ಹಾಗೂ ಪ್ರಿಂಟ್ ಜಾಹಿರಾತಿನಲ್ಲಿ ಕಾಣಿಸಿಕೊಂಡಿದ್ದಾರೆ.
ಸದ್ಯಕ್ಕೆ 'ರೆಡ್' ಎಂಬ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
Suvarna News