ನಾನಾ ಪಾಟೇಕರ್ ಮತ್ತು ಬಾಲಿವುಡ್ ನಟಿ ತನುಶ್ರೀ ದತ್ತಾ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗಿತ್ತು. ಈ ವಿವಾದ 2018 ರಲ್ಲಿ ಸಿನಿಮಾ ಚಿತ್ರೀಕರಣದ ವೇಳೆ ಕಿರುಕುಳದ ಆರೋಪಗಳೊಂದಿಗೆ ಪ್ರಾರಂಭವಾಯಿತು. ಆದರೆ, ನಾನಾ ಪಾಟೇಕರ್ ಈ ಆರೋಪಗಳನ್ನು ಆಧಾರರಹಿತ ಎಂದು ಕರೆದಿದ್ದಾರೆ.
ನಟಿ ತನುಶ್ರೀ ದತ್ತಾ ಬಾಲಿವುಡ್ ಹಿರಿಯ ನಟ ನಾನಾ ಪಾಟೇಕರ್ ಮತ್ತು ನೃತ್ಯ ಸಂಯೋಜಕ ಗಣೇಶ್ ಆಚಾರ್ಯ ಅವರು ಹಾರ್ನ್ ಓಕೆ ಪ್ಲೀಸ್ (2008) ಚಿತ್ರದಲ್ಲಿ ಒಂದು ಇಂಟಿಮೇಟ್ ಸೀನ್ ಮತ್ತು ಡಾನ್ಸ್ ಮಾಡಲು ಒತ್ತಡ ಹೇರಿದ್ದಾರೆ ಎಂದು ಆರೋಪಿಸಿದ್ದಾರೆ. ತನುಶ್ರೀ ಪ್ರಕಾರ, ಈ ಡಾನ್ಸ್ ಅವರ ಕರಾರಿನಲ್ಲಿ ಸೇರಿರಲಿಲ್ಲ. ಅವರು ಇಂತಹ ಅಶ್ಲೀಲ ಡಾನ್ಸ್ ಮಾಡಲು ಸಿದ್ಧರಿರಲಿಲ್ಲ.