ದೇಶ ಕೊರೋನಾ ಎರಡನೇ ಅಲೆಯ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಒಂದಷ್ಟು ಮಂದಿ ಸೆಲೆಬ್ರಟಿಗಳನ್ನು ಸತತವಾಗಿ ಟೀಕಿಸುತ್ತಲೇ ಇದ್ದಾರೆ.
undefined
ಸಮಾಜಮುಖಿ ಕೆಲಸ ಮಾಡಿಲ್ಲ, ನಿಮ್ಮ ಚಾರಿಟಿ ಕೆಲಸಗಳ ಡೀಟೆಲ್ಸ್ ಹೇಳಿ ಎಂದು ಸಿನಿಮಾ ತಾರೆಗಳ ಮೇಲೆ ಒತ್ತಡ ಹೇರುತ್ತಲೇ ಇದ್ದಾರೆ.
undefined
ಆದರೆ ಸಿನಿಮಾ ತಾರೆಗಳ ಮೇಲೆ ಈ ಅನಗತ್ಯ ಒತ್ತಡ ಹಾಕೋದು ಯಾಕೆ ಅಂತ ಖಡಕ್ ಆಗಿ ಪ್ರಶ್ನಿಸಿದ್ದಾರೆ ಮಿಲ್ಕ್ ಬ್ಯೂಟಿ ನಟಿ ತಮನ್ನಾ.
undefined
ವಾಸ್ತವವಾಗಿ, ಸೋಂಕಿತ ಜನರಿಗೆ ಸಹಾಯ ಮಾಡಲು ಖ್ಯಾತನಾಮರು ತಮ್ಮ ಕೈಲಾದಷ್ಟು ಕೆಲಸ ಮಾಡುತ್ತಿಲ್ಲ ಎಂಬ ಅಭಿಪ್ರಾಯವೂ ತಪ್ಪಾಗಿದೆ ಎಂದಿದ್ದಾರೆ ನಟಿ.
undefined
ಎಲ್ಲರೂ ತಮ್ಮ ಒಳ್ಳೆಯತನದ ಕಾರ್ಯವನ್ನು ಎಲ್ಲರಿಗೂ ತಿಳಿಸಲು ಬಯಸುವುದಿಲ್ಲ ಎಂದಿದ್ದಾರೆ ತಮನ್ನಾ
undefined
ಇದು ಪ್ರತಿಯೊಬ್ಬರಿಗೂ ತನ್ನದೇ ಖಾಸಗಿ ವಿಚಾರ. ನೀವು ನಿಜವಾಗಿಯೂ ಯಾರಿಗಾದರೂ ಸಹಾಯ ಮಾಡಲು ಬಯಸಿದರೆ, ನನ್ನ ನಾನು ಅದರ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ ಎಂದಿದ್ದಾರೆ.
undefined
ಮಾಡಿದ ಸಹಾಯವನ್ನು ಪ್ರದರ್ಶಿಸುವುದು ಸಂದೇಶವನ್ನು ಹರಡುವ ಒಂದು ಮಾರ್ಗವೆಂದು ಭಾವಿಸುವ ಕೆಲವರು ಇದ್ದಾರೆ ಎಂದಿದ್ದಾರೆ ತಮನ್ನಾ.
undefined
ನಿಮ್ಮ ಕೊಡುಗೆಯನ್ನು ತಿಳಿಸುವುದರಲ್ಲಿ ಯಾವುದೇ ತಪ್ಪಿಲ್ಲ, ಆದರೆ ಇದನ್ನು ಎಲ್ಲರಿಗೂ ಅಲಿಖಿತ ನಿಯಮವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದಿದ್ದಾರೆ.
undefined
ನಾನು ಯಾರಿಗಾದರೂ ಸಹಾಯ ಮಾಡುತ್ತಿದ್ದರೆ ಅದನ್ನು ಯಾಕೆ ಪ್ರದರ್ಶಿಸಬೇಕು? ನಾನು ಆ ರೀತಿ ಮಾಡುವುದಿಲ್ಲ ಎಂದಿದ್ದಾರೆ ನಟಿ.
undefined
ನಟರು ಬಹಳಷ್ಟು ಹಣವನ್ನು ಹೊಂದಿದ್ದಾರೆ ಮತ್ತು ನಟರು ಎಲ್ಲ ಸವಲತ್ತುಗಳನ್ನು ಹೊಂದಿದ್ದಾರೆಂದು ಕೆಲವರು ಭಾವಿಸುತ್ತಾರೆ. ನಟ, ನಟಿಯರೂ ಎಲ್ಲರಂತೆಯೇ ಇರುತ್ತಾರೆ ಎಂಬುದನ್ನು ಜನ ಮರೆಯುತ್ತಾರೆ ಎಂದಿದ್ದಾರೆ.
undefined
ಸೆಲೆಬ್ರಿಟಿಗಳು ಸಹ ತಮ್ಮ ಜೀವನವನ್ನು ನಡೆಸಲು ತುಂಬಾ ಶ್ರಮಿಸಬೇಕಾಗಿದೆ ಎಂದು ವಿವರಿಸಿದ್ದಾರೆ ತಮನ್ನಾ.
undefined
ಎಲ್ಲವನ್ನೂ ಯಾರೋ ಒಬ್ಬರು ನಮಗೆ ಕೊಟ್ಟಿಲ್ಲ. ಕೆಲವು ಜನರು ಈ ಎಲ್ಲಾ ಕಲ್ಪನೆಗಳನ್ನು ಹೊಂದಿದ್ದಾರೆ. ಹಾಗಾಗಿಯೇ ಅವರು ಈ ನಿರೀಕ್ಷೆಗಳನ್ನು ಹೊಂದಿದ್ದಾರೆ, ತೆರೆಯ ಮೇಲಿನ ಮತ್ತು ನಿಜ ಜೀವನದವನ್ನು ಅವರು ಒಂದೇ ಎಂದು ಭಾವಿಸುತ್ತಾರೆ ಎಂದಿದ್ದಾರೆ ನಟಿ.
undefined