ಮುಂಬೈ: ಪ್ರೇಮಿಗಳಾದ ತಮನ್ನಾ ಮತ್ತು ವಿಜಯ್ ವರ್ಮಾ ಮದುವೆ ಆಗ್ತಿದ್ದಾರೆ. ಕೆಲವು ಮಾಧ್ಯಮ ವರದಿಗಳ ಪ್ರಕಾರ, ಇಬ್ಬರೂ ಶೀಘ್ರದಲ್ಲೇ ಮದುವೆ ದಿನಾಂಕ ಘೋಷಿಸಬಹುದು. ಮುಂದಿನ ವರ್ಷ ಇಬ್ಬರ ಮದುವೆ ಆಗಬಹುದು ಅಂತ ಗುಸುಗುಸು.
29
ಹೊಸ ಜೀವನಕ್ಕೆ ಕಾಲಿಡುತ್ತಿರುವ ಇವರು ಕಳೆದ ಎರಡು ವರ್ಷಗಳಿಂದ ಡೇಟಿಂಗ್ ನಲ್ಲಿದ್ದಾರೆ. ತಮನ್ನಾ ಮತ್ತು ವಿಜಯ್ ವರ್ಮಾ ಹೊಸ ಮನೆ ಹುಡುಕ್ತಿದ್ದಾರೆ ಅಂತ ಹಲವು ವರದಿಗಳು ಬಂದಿವೆ.
39
ಮುಂದಿನ ವರ್ಷ ತಮನ್ನಾ ಹಾಗೂ ವಿಜಯ್ ಮದುವೆ ಆಗೋಕೆ ನಿರ್ಧರಿಸಿದ್ದಾರೆ, ಅದಕ್ಕೆ ತಯಾರಿ ಶುರು ಮಾಡಿದ್ದಾರೆ ಅಂತ ತಿಳಿದುಬಂದಿದೆ.
49
ಆದರೆ ತಮ್ಮ ಪ್ರೀತಿ ಬಗ್ಗೆ ಸೈಲೆಂಟ್ ಆಗಿರೋ ಹಾಗೆ, ಮದುವೆ ಬಗ್ಗೆನೂ ಏನೂ ಹೇಳಿಲ್ಲ. ಮಿಲ್ಕಿ ಬ್ಯೂಟಿ ಎಂದೇ ಕರೆಸಿಕೊಳ್ಳುವ ತಮನ್ನಾ ಅವರ ಒಂದು ಸ್ಟೇಟಸ್ ಇದೀಗ ಸದ್ದು ಮಾಡುತ್ತಿದೆ.
59
ಸಿನಿಮಾ ತಾರೆಯಾದ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ತಮ್ಮ ಮದುವೆ ಬಗ್ಗೆ ಸೀರಿಯಸ್ ಆಗಿ ಮಾತಾಡ್ತಿದ್ದಾರೆ ಅಂತ ಇ ಟೈಮ್ಸ್ ವರದಿ ಮಾಡಿದೆ.
69
2023 ರಲ್ಲಿ 'ಲಸ್ಟ್ ಸ್ಟೋರೀಸ್ 2' ರಿಲೀಸ್ ಸಮಯದಲ್ಲಿ ತಮನ್ನಾ ಭಾಟಿಯಾ ಮತ್ತು ವಿಜಯ್ ವರ್ಮಾ ತಮ್ಮ ಸಂಬಂಧ ಖಚಿತಪಡಿಸಿದ್ರು.
79
'ಲಸ್ಟ್ ಸ್ಟೋರೀಸ್ 2' ಇಬ್ಬರೂ ಒಟ್ಟಿಗೆ ನಟಿಸಿದ ಮೊದಲ ಚಿತ್ರ ಇದು. ಖಾಸಗಿತನ ಕಾಪಾಡ್ಕೊಳ್ತಿದ್ದೀವಿ ಅಂತ ವಿಜಯ್ ವರ್ಮಾ ಹೇಳಿದ್ದರು.
89
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಹಾಗೂ ವಿಜಯ್ ವರ್ಮಾ ಇಬ್ಬರೂ ಮುಂಬೈನ ಪಾಲಿ ಹಿಲ್ಸ್ ನಲ್ಲಿ ಹೊಸ ಮನೆ ಹುಡುಕ್ತಿದ್ದಾರಂತೆ.
99
'ಸಿಕಂದರ್ ಕಾ ಮುಖಂದರ್' ತಮನ್ನಾ ಭಾಟಿಯಾ ಅವರ ಮುಂದಿನ ಚಿತ್ರ. ನೆಟ್‌ಪ್ಲಿಕ್ಸ್‌ನಲ್ಲಿ ಬಿಡುಗಡೆ ಆಗುತ್ತೆ. ಈ ಸಿನಿಮಾದ ನಿರ್ದೇಶಕರು ನೀರಜ್ ಪಾಂಡೆ.