ಇದೆಲ್ಲ ಇರಲಿ, ಅನುಷ್ಕ ಶೆಟ್ಟಿ ಬಗ್ಗೆ ಒಂದು ಆಸಕ್ತಿದಾಯಕ ವಿಷಯ ಹೊರಬಿದ್ದಿದೆ. ಅವರಿಗೆ ಬಂದ ಫಸ್ಟ್ ಪ್ರಪೋಸಲ್ ಬಗ್ಗೆ ಸುದ್ದಿ ಕುತೂಹಲ ಹುಟ್ಟಿಸುತ್ತಿದೆ. ನಿಜ ಜೀವನದಲ್ಲಿ ಅನೇಕರ ಜೊತೆ ಅವರ ಪ್ರೇಮ ಸಂಬಂಧ ಇತ್ತೆಂದು ಗಾಳಿಸುದ್ದಿ ಹಬ್ಬಿತ್ತು. ಪ್ರಭಾಸ್, ಗೋಪಿಚಂದ್, ನಾಗಾರ್ಜುನರ ಜೊತೆ ಪ್ರೀತಿಯಲ್ಲಿದ್ದಾರೆಂಬ ವದಂತಿಗಳು ಹರಿದಾಡಿದ್ದವು. ಆದರೆ ಅವೆಲ್ಲ ಗಾಳಿಸುದ್ದಿಗಳಾಗಿಯೇ ಉಳಿದವು. ಈಗ ಪ್ರಭಾಸ್ ಜೊತೆಗೆ ಪ್ರಧಾನವಾಗಿ ಕೇಳಿಬರುತ್ತಿದೆ.