ಕಳೆದ ತಿಂಗಳು, ಸ್ವರಾ ಭಾಸ್ಕರ್ ಅವರು ತಮ್ಮ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ನ್ಯಾಯಾಲಯದ ವಿವಾಹದಲ್ಲಿ ತಮ್ಮ ದೀರ್ಘಕಾಲದ ಗೆಳೆಯ ಫಹಾದ್ ಅಹ್ಮದ್ ಅವರೊಂದಿಗೆ ಮದುವೆಯಾದರು.
ಕೋರ್ಟ್ ಮ್ಯಾರೇಜ್ ನಂತರ ಸ್ವರಾ ದಂಪತಿಗಳು ಸಾಂಪ್ರದಾಯಿಕ ರೀತಿಯಲ್ಲಿ ಮತ್ತೆ ಮದುವೆಯಯಾಗಲು ನಿರ್ಧರಿಸಿದ್ದು ಕಳೆದ ಕೆಲವು ದಿನಗಳಿಂದ ಹಲ್ದಿ, ಮೆಹೆಂದಿ ಮತ್ತು ಸಂಗೀತದಂತಹ ಮದುವೆಯ ಪೂರ್ವ ಸಂಭ್ರಮವನ್ನು ಆನಂದಿಸಿದ್ದಾರೆ.
ಈಗ, ನಿನ್ನೆ ಅಂದರೆ ಮಾರ್ಚ್ 16, 2023 ರಂದು ದೆಹಲಿಯ ಏರ್ ಫೋರ್ಸ್ ಆಡಿಟೋರಿಯಂನಲ್ಲಿ ಮದುವೆಯ ಆರತಕ್ಷತೆ ನಡೆದಿದ್ದು ಈ ಸಮಯದ ಪೋಟೋಗಳು ಸಖತ್ ವೈರಲ್ ಆಗಿವೆ.
ನಟಿ ಸ್ವರಾ ಭಾಸ್ಕರ್ ಅವರು ಆರತಕ್ಷತೆಯಲ್ಲಿ ಪಿಂಕ್ ಕಲರ್ ಲೆಹೆಂಗಾ ಧರಿಸಿದ್ದರು. ಅದೇ ಸಮಯದಲ್ಲಿ ಆಕೆಯ ಪತಿ ಫಹಾದ್ ಅಹ್ಮದ್ ಬಿಳಿ ಶೇರ್ವಾನಿಯಲ್ಲಿ ಕಾಣಿಸಿಕೊಂಡರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ನಾಯಕಿ ಜಯಾ ಬಚ್ಚನ್, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಕಾಂಗ್ರೆಸ್ ಸಂಸದ ಶಶಿ ತರೂರ್, ಮಹಾರಾಷ್ಟ್ರದ ಮಾಜಿ ಗವರ್ನರ್ ಭಗತ್ ಸಿಂಗ್ ಕೊಶ್ಯಾರಿ ಸೇರಿದಂತೆ ಹಲವಾರು ದೊಡ್ಡ ರಾಜಕಾರಣಿಗಳು ನವ ದಂಪತಿಗಳಿಗೆ ಆಶೀರ್ವದಿಸಲು ಹಾಜರಾಗಿದ್ದರು.
ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ ನಾಯಕಿ ಮತ್ತು ಸಂಸದೆ ಸುಪ್ರಿಯಾ ಸುಲೇ ಕೂಡ ಸ್ವರಾ ಭಾಸ್ಕರ್-ಫಹಾದ್ ಅಹ್ಮದ್ ಅವರ ಮದುವೆ ರಿಸೆಪ್ಷನ್‌ಗೆ ಆಗಮಿಸಿದರು.
ವರದಿಗಳ ಪ್ರಕಾರ, ಸ್ವರಾ ಭಾಸ್ಕರ್ ದೆಹಲಿಯಲ್ಲಿರುವ ತನ್ನ ಅಜ್ಜನ ಫಾರ್ಮ್‌ಹೌಸ್‌ನಲ್ಲಿ ವಿವಾಹವಾದರು. ತಮ್ಮ ಮನೆಯಲ್ಲಿ ಮೊಮ್ಮಗಳ ಮದುವೆಯಾಗಬೇಕೆಂದು ಸ್ವರಾ ಅವರ ತಾಯಿಯ ತಂದೆ ಅಂದರೆ ಅಜ್ಜನ ಆಸೆಯಾಗಿತ್ತು ಎಂದು ಹೇಳಲಾಗಿದೆ.
ರಿಸೆಪ್ಷನ್ ಮುನ್ನ ಸ್ವರಾ ಭಾಸ್ಕರ್ ಅವರು ಕವ್ವಾಲಿ ನೈಟ್ಸ್ ಆಯೋಜಿಸಿದ್ದು, ಅದರಲ್ಲಿ ಎಸ್‌ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಭಾಗವಹಿಸಿದ್ದರು.
ಬಾಲಿವುಡ್ ಹಿರಿಯ ನಟಿ ಹಾಗೂ ಸಮಾಜವಾದಿ ಪಕ್ಷದ ನಾಯಕಿ ಜಯಾ ಬಚ್ಚನ್ ಸ್ವರಾ ಭಾಸ್ಕರ್ ಅವರ ಮದುವೆಯ ರಿಸೆಪ್ಷನ್‌ಲ್ಲಿ ಕಾಣಿಕೊಂಡಿದ್ದು ಹೀಗೆ.