ಆದರೆ, ಕೆಲವೊಮ್ಮೆ ಮಾಜಿಯೊಂದಿಗೆ ಹೇಗೆ ಸ್ನೇಹ ಹೊಂದಬೇಕು, ಎಲ್ಲಿ ರೇಖೆಯನ್ನು ಎಳೆಯಬೇಕೆಂಬುದನ್ನು ಡಿಸೈಡ್ ಮಾಡುವುದು ಕಷ್ಟ. ಅಲ್ಲೊಂದು ಸಣ್ಣ ಗೆರೆ ಎಳೆದುಕೊಳ್ಳುವುದು ಅನಿವಾರ್ಯ. ಹಾಗಂಥ ಮುರಿದು ಹೋದ ಸಂಬಂಧವನ್ನು ಸರಿ ಮಾಡಿಕೊಳ್ಳುವದು ಕಷ್ಟವೆಂದಲ್ಲ. ಇದು ಪ್ರತಿಯೊಬ್ಬ ವೈಯಕ್ತಿಕ ಬದುಕಿನ ಮೇಲೆ ಡಿಪೆಂಡ್ ಆಗಿರುತ್ತದೆ ಎಂದ ಸುಶ್ಮಿತಾ ಸೇನ್‌ಗೆ ಮದುವೆಯಾಗುತ್ತೀರಾ ಎಂದು ಕೇಳಿದಾಗ ಖಂಡಿತಾ ಆಗುತ್ತೇನೆಂದು ಉತ್ತರಿಸಿದ್ದಾರೆ. ಆದರೆ, ಯಾರೊಟ್ಟಿಗೆ, ಯಾವಾಗ ಅನ್ನೊದಕ್ಕಿಂತ ನಮ್ಮ ವಯಸ್ಸು ಹಾಗೂ ಸಾಮಾಜಿಕ ಕಟ್ಟುಪಾಡುಗಳನ್ನು ಗಮನದಲ್ಲಿಟ್ಟುಕೊಂಡು, ದಾಂಪತ್ಯಕ್ಕೆ ಕಾಲಿಡಬೇಕೆಂದು ಪ್ರಬುದ್ಧವಾದ ಉತ್ತರ ನೀಡಿದ್ದಾರೆ.