ಬಾಬಿ ಡಿಯೋಲ್, ವಿಕ್ಕಿ ಕೌಶಲ್‌, ಕೊಹ್ಲಿ ಫೇವರಿಟ್‌ ಸೆಲೆಬ್ರಿಟಿ ಹೇರ್ ಸ್ಟೈಲ್‌ ಕನಿಷ್ಠ ಮೊತ್ತ ಕೇಳಿದ್ರೆ ದಿಗ್ಭ್ರಮೆ!

First Published | Apr 7, 2024, 10:51 AM IST

ಬಾಲಿವುಡ್ ನಟರು ವಿಭಿನ್ನವಾದ ಫ್ಯಾಷನ್ ಆಯ್ಕೆಗಳೊಂದಿಗೆ ತಮ್ಮ ಅಭಿಮಾನಿಗಳ ಹೃದಯ ಗೆಲ್ಲುತ್ತಾರೆ. ಅವರ ಸಾಂದರ್ಭಿಕ, ಸಾಂಪ್ರದಾಯಿಕ ಉಡುಗೆ, ಶೂಗಳ ಆಯ್ಕೆ, ಕೇಶವಿನ್ಯಾಸ ಮತ್ತು ಗಡ್ಡದ ಶೈಲಿಯೊಂದಿಗೆ ಹೊಸ ಟ್ರೆಂಡ್‌ಸೆಟರ್‌ಗಳಾಗಿರುತ್ತಾರೆ. ಬಾಲಿವುಡ್‌ನ ನಟರು, ಕ್ರಿಕೆಟ್‌ ತಾರೆಯರು ವಿಶಿಷ್ಟವಾದ ಕೇಶವಿನ್ಯಾಸಕ್ಕಾಗಿ ಪಾವತಿಸುವ ಕಡಿಮೆ ಮೊತ್ತ  ಎಷ್ಟೆಂದರೆ ದಿಗ್ಭ್ರಮೆ ಆಗೋದು ಸಹಜ.

ಸೆಲೆಬ್ರಿಟಿ ಹೇರ್ ಸ್ಟೈಲಿಸ್ಟ್  ಆಲಿಮ್ ಹಕೀಮ್  ಅವರು ತಮ್ಮ ಇತ್ತೀಚಿನ ಸಂದರ್ಶನದಲ್ಲಿ, ವಿಶಿಷ್ಟವಾದ ಕೇಶವಿನ್ಯಾಸವನ್ನು ಪಡೆಯಲು ನಟರು ಪಾವತಿಸುವ ಕನಿಷ್ಠ ಮೊತ್ತವನ್ನು ಬಹಿರಂಗಪಡಿಸಿದ್ದಾರೆ. ಇದರ ಜೊತೆಗೆ ಮಾತನಾಡುತ್ತಾ, ಆಲಿಮ್ ಅವರು ಇತ್ತೀಚೆಗೆ  ಅನಿಮಲ್ ಚಿತ್ರಕ್ಕಾಗಿ ರಣಬೀರ್ ಕಪೂರ್ ಮತ್ತು ಬಾಬಿ ಡಿಯೋಲ್ ಅವರಿಗೆ ವಿಶಿಷ್ಟವಾದ ಹೇರ್ಕ ಕಟ್‌ ಮಾಡಿರುವುದರ ಬಗ್ಗೆ  ಹಂಚಿಕೊಂಡಿದ್ದಾರೆ.

 ಸ್ಯಾಮ್ ಬಹದ್ದೂರ್‌ಗಾಗಿ ವಿಕ್ಕಿ ಕೌಶಲ್ ಅವರ ಕೇಶವಿನ್ಯಾಸ ಮತ್ತು ಜೈಲರ್‌ನಲ್ಲಿ ರಜನಿಕಾಂತ್ ಅವರ ಲುಕ್‌ ಮಾಡಿರುವುದು ಕೂಡ ಇದೇ    ಆಲಿಮ್ ಹಕೀಮ್. ಇದಲ್ಲದೆ, ಬಾಹುಬಲಿಯಲ್ಲಿನ ಪ್ರಭಾಸ್ ಅವರ ಹೇರ್ ಸ್ಟೈಲ್ ಮತ್ತು ಕಬೀರ್ ಸಿಂಗ್‌ಗಾಗಿ ಶಾಹಿದ್ ಕಪೂರ್ ಅವರ ಹೇರ್ ಸ್ಟೈಲ್  ಕೂಡ ಇವರದ್ದೇ ಕೈಚಳಕವಾಗಿದ್ದು, ಸಿನಿ ಪ್ರಿಯರು ಈ ಹೇರ್  ಸ್ಟೈಲ್ ಅನ್ನ ನಿಜವಾಗಿಯೂ ಇಷ್ಟಪಟ್ಟಿದ್ದಾರೆ.

Tap to resize

ಸುಮಾರು 98% ಭಾರತೀಯ ಚಲನಚಿತ್ರಗಳು  ಆಲಿಮ್ ಅವರ ಶೈಲಿಯಲ್ಲಿಯಲ್ಲಿದೆಯಂತೆ ಏಕೆಂದರೆ ಉತ್ತರ ಮತ್ತು ದಕ್ಷಿಣದ ನಟರೆಲ್ಲರೂ ಕೂಡ ಇವರಿಂದಲೇ ತಮ್ಮ ಕೇಶ ವಿನ್ಯಾಸ ಮಾಡಿಕೊಳ್ಳುತ್ತಾರೆ. ಈ ನಟರ  ವಿಶಿಷ್ಟ ಕೇಶವಿನ್ಯಾಸಗಳ ಕನಿಷ್ಠ ಮೊತ್ತವು ರೂ. 1 ಲಕ್ಷದಿಂದ ಆರಂಭ ಎಂದು ಸ್ವತಃ ಆಲಿಮ್ ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ, ವಿರಾಟ್ ಕೊಹ್ಲಿಯ ಫೋಟೋ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿತು, ಅದರಲ್ಲಿ ಅವರು ಐಪಿಎಲ್ 2024 ಕ್ಕೆ ಮುಂಚಿತವಾಗಿ ತಮ್ಮ ಹೊಸ ಕೇಶವಿನ್ಯಾಸದಲ್ಲಿ ಮಿಂಚಿದ್ದರು. ಈ ಫೋಟೋ ಸಖತ್ ವೈರಲ್ ಆಗಿತ್ತು.  ಗಮನ ಸೆಳೆಯುವ ಕೇಶವಿನ್ಯಾಸ ಮತ್ತು ಅವರ ಹುಬ್ಬಿನ ಮೇಲೆ ಒಂದು ಸೀಳು ಆಗಿತ್ತು. ಈ ಕುರಿತು ಮಾತನಾಡಿದ ಆಲಿಮ್ ಹಕೀಮ್, ಇದು ಐಪಿಎಲ್‌ನ ಅಧಿಕೃತ ಸೀಸನ್ ಆಗಿರುವುದರಿಂದ, ಅವರು ಏನನ್ನಾದರೂ ಹೊಸತನ ಮಾಡಲು ಬಯಸಿದ್ದರು ಮತ್ತು ವಿರಾಟ್‌ಗೆ  ಹಲವಾರು ಆಯ್ಕೆಗಳಿವೆ ಮತ್ತು ಈ ವರ್ಷ ಅವರು ಸ್ಲಿಟ್ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಿದ್ದಾರೆ.  

ಸಲ್ಮಾನ್ ಖಾನ್, ಅಜಯ್ ದೇವಗನ್, ಫರ್ದೀನ್ ಖಾನ್ ಮತ್ತು ಸುನೀಲ್ ಶೆಟ್ಟಿ ಅವರು 20 ವರ್ಷಗಳಿಂದ ತಮ್ಮ ಗ್ರಾಹಕರಾಗಿದ್ದಾರೆ ಮತ್ತು ಅವರು ತಮ್ಮ ಕೇಶವಿನ್ಯಾಸವನ್ನು ಮಾಡಲು ಬೇರೆಲ್ಲಿಯೂ ಹೋಗುವುದಿಲ್ಲ ಎಂದು ಆಲಿಮ್ ಹಕೀಮ್ ಬಹಿರಂಗಪಡಿಸಿದರು. ಇದನ್ನು ನಿಷ್ಠೆಯ ಸಂಬಂಧ ಎಂದು  ಆಲಿಮ್ ಬಣ್ಣಿಸಿದ್ದಾರೆ. 

ಅದೇ ಸಂದರ್ಶನದಲ್ಲಿ, ಆಲಿಮ್ ಹಕೀಮ್ ತಮ್ಮ ಕೇಶವಿನ್ಯಾಸವನ್ನು ಮಾಡುವ ಭಾರತೀಯ ಕ್ರಿಕೆಟಿಗರ ಹೆಸರನ್ನು ಸಹ ಬಹಿರಂಗಪಡಿಸಿದ್ದಾರೆ. ನಟರಂತೆಯೇ, ಕ್ರಿಕೆಟಿಗರು ಸಹ ತಮ್ಮ ಫಿಟ್ನೆಸ್ ಅಥವಾ ಫ್ಯಾಷನ್ ಕಟ್ಟುಪಾಡುಗಳೊಂದಿಗೆ  ಟ್ರೆಂಡ್ಗಳನ್ನು ಹೊಂದಿಸುತ್ತಾರೆ.  ಕೊಹ್ಲಿ ರೋಹಿತ್ ಶರ್ಮಾ, ಮಹೇಂದ್ರ ಸಿಂಗ್ ಧೋನಿ, ಜಸ್ಪ್ರೀತ್ ಬುಮ್ರಾ ಮತ್ತು ಸಚಿನ್ ತೆಂಡೂಲ್ಕರ್ ಅವರಂತಹ ಕ್ರಿಕೆಟ್ ದಿಗ್ಗಜರು ತಮ್ಮ ಗ್ರಾಹಕರು ಎಂದು ಹಂಚಿಕೊಂಡಿದ್ದಾರೆ. ಕೆಲ ದಿನಗಳ ಹಿಂದೆ ಮಹೇಂದ್ರ ಸಿಂಗ್ ಧೋನಿ ಆಲಿಂ ಜೊತೆ ಇರುವ ಫೋಟೋ ಅಂತರ್ಜಾಲದಲ್ಲಿ ಹರಿದಾಡಿತ್ತು.  
 

ಕ್ರಿಕೆಟಿಗರು ಮತ್ತು ನಟರು ತಮ್ಮ ಹೇರ್ ಸ್ಟೈಲ್‌ಗಾಗಿ ಪಾವತಿಸುವ ದೊಡ್ಡ ಮೊತ್ತದ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ. 

Latest Videos

click me!