ದೂರವಾಗಿದ್ದರೂ ಯಾರೂ ಮಾಡದ ದಾಖಲೆ ಬರೆದ ಸುಶಾಂತ್

First Published | Jul 15, 2020, 9:21 PM IST

ಮುಂಬೈ(ಜು.  15)  ಬಾಲಿವುಡ್ ಅಗಲಿದ ನಟ ಸುಶಾಂತ್ ಸಿಂಗ್ ಅಭಿನಯದ ಬಹುನಿರೀಕ್ಷೆಯ ಕೊನೆಯ ಸಿನಿಮಾ ದಿಲ್ ಬೆಚಾರ ಟ್ರೈಲರ್ ರಿಲೀಸ್ ಯೂಟ್ಯೂಬ್ ಹೊಸ ದಾಖಲೆ ನಿರ್ಮಿಸಿದೆ.  ಹಿಂದಿನ ಎಲ್ಲ ದಾಖಲೆಗಳು ಧೂಳೀಪಟವಾಗಿದೆ.

ಸುಶಾಂತ್ ಕೊನೆಯ ಸಿನಿಮಾದ ಟ್ರೈಲರ್ ಅತೀ ಹೆಚ್ಚು ಲೈಕ್ಸ್ ಗಿಟ್ಟಿಸಿಕೊಳ್ಳುವ ಮೂಲಕ ಎಲ್ಲಾ ಸಿನಿಮಾಗಳ ದಾಖಲೆಯನ್ನು ಮುರಿದು ಹಾಕಿದೆ.
ದಿಲ್ ಬೆಚಾರ ಸಿನಿಮಾ ಟ್ರೈಲರ್ ರಿಲೀಸ್ ಆಗಿ 10 ದಿನದಲ್ಲಿಯೇ 10 ಮಿಲಿಯನ್ ಅಧಿಕ ಲೈಕ್ಸ್ ಪಡೆದು ದಾಖಲೆ ನಿರ್ಮಿಸಿದೆ.
Tap to resize

ಈ ವಿಚಾರವನ್ನು ನಿರ್ದೇಶಕ ಮುಖೇಶ್ ಚಾಬ್ರ ಮತ್ತು ನಟಿ ಸಂಜನಾ ಸಾಂಘಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಸುಶಾಂತ್‌ ಸಿಂಗ್‌ ರಜಪೂತ್‌ ಜೊತೆ ನಾಯಕಿಯಾಗಿ ಹೊಸ ನಟಿ ಸಂಜನಾ ಸಂಘಿ ಅಭಿನಯಿಸಿದ್ದಾರೆ.
ಚಿತ್ರದ ಹಾಡುಗಳಿಗೆ ಎ.ಆರ್‌. ರೆಹಮಾನ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. '
ಡಿಸ್ನಿ ಹಾಟ್‌ಸ್ಟಾರ್‌' ಮೂಲಕ ಈ ಸಿನಿಮಾ ವೀಕ್ಷಣೆಗೆ ಲಭ್ಯವಾಗಲಿದೆ ಎನ್ನಲಾಗಿದೆ.
ಯಾವಾಗ ಹುಟ್ಟುತ್ತೇವೆ, ಯಾವಾಗ ಸಾಯುತ್ತೇವೆ ಎಂದು ನಾನು ನಿರ್ಧರಿಸಲು ಸಾಧ್ಯವಿಲ್ಲ. ಆದರೆ, ಹೇಗೆ ಬದುಕಬೇಕೆಂದು ನಾವು ಡಿಸೈಡ್‌ ಮಾಡಬಹುದು’ ಎನ್ನುವ ಸಂಭಾಷಣೆಗಳು ನೋಡುಗರ ಗಮನ ಸೆಳೆಯುತ್ತಿವೆ.
‘ದಿ ಫಾಲ್ಟ್‌ ಇನ್‌ ಅವರ್‌ ಸ್ಟಾರ್ಸ್‌’ ಕಾದಂಬರಿಯನ್ನು ಆಧರಿಸಿ ಮೂಡಿ ಬಂದಿರುವ ಇದು, ಸುಶಾಂತ್‌ಸಿಂಗ್‌ ರಜಪೂತ್‌ ಅವರ ಕೊನೆಯ ಸಿನಿಮಾ.

Latest Videos

click me!