18 ವರ್ಷ ಪೂರೈಸಿದ ದೇವದಾಸ್‌ ಸಿನಿಮಾದ ಇಂಟರೆಸ್ಟಿಂಗ್‌ facts

Suvarna News   | Asianet News
Published : Jul 15, 2020, 06:58 PM ISTUpdated : Jul 15, 2020, 07:30 PM IST

ಬರಹಗಾರ ಮತ್ತು ಕಾದಂಬರಿಕಾರ ಶರತ್ ಚಂದ್ರ ಚಟ್ಟೋಪಾಧ್ಯಾಯ ಅವರ ಜನಪ್ರಿಯ ಕಾದಂಬರಗಳಲ್ಲಿ ಒಂದು ದೇವದಾಸ್. ಈ ಕಾದಂಬರಿಯನ್ನು ಬಾಲಿವುಡ್‌ನಲ್ಲಿ ಹಲವಾರು ಬಾರಿ ಸಿನಿಮಾ ಮಾಡಲಾಗಿದೆ. ಕೆ.ಎಲ್ ಸೆಹಗಲ್, ದಿಲೀಪ್ ಕುಮಾರ್  ನಂತರ, ಸಾಕಷ್ಟು ಸಮಯದ ನಂತರ 2002ರಲ್ಲಿ ಸಂಜಯ್‌ ಲೀಲಾ ಭನ್ಸಾಲಿ ಶಾರುಖ್ ಖಾನ್ ಜೊತೆ ಸೇರಿ 'ದೇವದಾಸ್' ಕಲರ್‌ ಸಿನಿಮಾ ಮಾಡಿದರು. ಈ ಚಿತ್ರ ಸೂಪರ್ ಹಿಟ್ ಆಗಿದ್ದು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ನೀಡಿತು. ಇದರ ಹಾಡುಗಳು ಎವರ್ಗ್ರೀನ್ ಹಿಟ್ಸ್. ಶಾರುಖ್ ಖಾನ್ ಅವರ 'ದೇವದಾಸ್' ಬಿಡುಗಡೆಯಾದ 18 ವರ್ಷಗಳನ್ನು ಪೂರೈಸಿದೆ. ಪಾರು ಪಾತ್ರದಲ್ಲಿ ಐಶ್ವರ್ಯಾ ರೈ ಬಚ್ಚನ್ ಮತ್ತು ಚಂದ್ರಮುಖಿ ಪಾತ್ರದಲ್ಲಿ ಮಾಧುರಿ ದೀಕ್ಷಿತ್ ಈ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಚಿತ್ರಕ್ಕೆ ಸಂಬಂಧಿಸಿದ ಕೆಲವು ಇಂಟರೆಸ್ಟಿಂಗ್‌ ವಿಷಯಗಳು ಇಲ್ಲಿವೆ.

PREV
110
18 ವರ್ಷ ಪೂರೈಸಿದ ದೇವದಾಸ್‌ ಸಿನಿಮಾದ ಇಂಟರೆಸ್ಟಿಂಗ್‌ facts

2002ರಲ್ಲಿ ಸಂಜಯ್‌ ಲೀಲಾ ಭನ್ಸಾಲಿ ನಿರ್ದೇಶನದ ಶಾರುಖ್ ಖಾನ್, ಐಶ್ವರ್ಯಾ ರೈ, ಮಾಧುರಿ ದೀಕ್ಷಿತ್ ನಟಿಸಿದ್ದ ದೇವದಾಸ್‌ ಸಿನಿಮಾಕ್ಕೆ 18 ವರ್ಷ ಪೂರೈಸಿದೆ.

210

ಚಿತ್ರದ ಕಾಸ್ಟಿಂಗ್‌ ಬಗ್ಗೆ ಅನೇಕ ಕಥೆಗಳಿವೆ. ಈ ಚಿತ್ರದಲ್ಲಿ ದೇವದಾಸ್ ಪಾತ್ರಕ್ಕಾಗಿ ಸಲ್ಮಾನ್ ಖಾನ್ ನಟಿಸಲಿದ್ದರು ಆದರೆ ಶಾರುಖ್ ಖಾನ್‌ರನ್ನು ಆ ಪಾತ್ರಕ್ಕಾಗಿ ತೆಗೆದುಕೊಳ್ಳಲಾಯಿತಂತೆ.

310

'ದೇವದಾಸ್' ನಲ್ಲಿ ನಿರ್ವಹಿಸಿದ ಪಾತ್ರ ಶಾರುಖ್ ವೃತ್ತಿ ಜೀವನದ ಅತ್ಯಂತ ಅದ್ಭುತ ಪಾತ್ರಗಳಲ್ಲಿ ಒಂದಾಗಿದೆ. 

410

ಚಿತ್ರದ 'ಕಹೆ ಛೊಡ್‌ ಮೋಹೆ' ಹಾಡಿಗೆ ಮಾಧುರಿ ದೀಕ್ಷಿತ್ ಅವರ  ಔಟ್‌ಫಿಟ್‌ 30 ಕೆಜಿ ತೂಕವಿತ್ತು. ಅದರೊಂದಿಗೆ ಡ್ಯಾನ್ಸ್‌ ಮಾಡುವುದು ಆಕೆಗೆ ಸುಲಭವಾಗಿರಲಿಲ್ಲ. ಇದಲ್ಲದೆ,  ನೃತ್ಯ ಸಂಯೋಜನೆ ಮಾಡುವುದು ಸಹ ಕಷ್ಟವಾಗಿತ್ತು. 

510

ಇದರೊಂದಿಗೆ, 'ಡೋಲಾ ರೆ ಡೋಲಾ ರೇ' ಹಾಡಿನ ಸಮಯದಲ್ಲಿ ಭಾರವಾದ ಕಿವಿಯೋಲೆಗಳನ್ನು ಧರಿಸಿದ್ದರಿಂದ ಐಶ್ವರ್ಯಾ ರೈ ಅವರ ಕಿವಿಗಳು ಗಾಯವಾಗಿ ಕಿವಿಯಲ್ಲಿ ರಕ್ತ ಬರುತ್ತಿತ್ತು. ಆದರೂ ಡ್ಯಾನ್ಸ್‌ ನಿಲ್ಲಿಸಲಿಲ್ಲ. ಶೂಟಿಂಗ್‌ ಪೂರ್ಣಗೊಳ್ಳುವವರೆಗೂ ಯಾರಿಗೂ ಹೇಳಲಿಲ್ಲ.

610

ಶಾರುಖ್ ಖಾನ್ ಅವರ ಕುಡುಕನ ಸ್ವಭಾವ ಮತ್ತು ಅವರ ಶೈಲಿಯು ಚಿತ್ರದಲ್ಲಿ ಹೈಲೈಟ್ ಆಯಿತು. ವಾಸ್ತವವಾಗಿ, ಚಿತ್ರೀಕರಣದ ಸಮಯದಲ್ಲಿ ಶಾರುಖ್ ನಿಜವಾಗಿಯೂ ಕುಡಿಯುತ್ತಿದ್ದರು ಎಂದು ಹೇಳಲಾಗುತ್ತದೆ. ಈ ಕಾರಣದಿಂದಾಗಿ, ಅವರು ಸಾಕಷ್ಟು ರಿಟೇಕ್‌ಗಳನ್ನು ಮಾಡಬೇಕಾಗಿತ್ತಂತೆ. 

710

'ದೇವದಾಸ್' ಚಿತ್ರಮಂದಿರಗಳಲ್ಲಿ ಬಿಡುಗಡೆಯಾದಾಗ, ಆ ದಿನಗಳಲ್ಲಿ ಅತ್ಯಂತ ಹೆಚ್ಚು ಬಜೆಟ್ ಚಿತ್ರವಾಗಿತ್ತು. 50 ಕೋಟಿ ಬಜೆಟ್‌ನ ಸಿನಿಮಾ ದೇವದಾಸ್‌. 

810

ಚುನ್ನಿ ಬಾಬು ಪಾತ್ರವನ್ನು ನಟ ಜಾಕಿ ಶ್ರಾಫ್ ನಿರ್ವಹಿಸಿದ್ದಾರೆ. ಆದರೆ, ಅದಕ್ಕೂ ಮೊದಲು ಈ ಪಾತ್ರವನ್ನು ಮನೋಜ್ ಬಾಜಪೇಯಿಗೆ ನೀಡಲಾಗಿತ್ತು.

910

ನಾನು ಮಾಡುತ್ತಿರುವ ಎಲ್ಲಾ ಚಿತ್ರಗಳಲ್ಲಿ ನಾಯಕನಾಗಿ ಮಾತ್ರ ನಟಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ಯಾವುದೇ ಪೋಷಕ ಪಾತ್ರವನ್ನು ಮಾಡಲು ಬಯಸುವುದಿಲ್ಲ ಎಂದು ಮನೋಜ್ ಬಾಜಪೇಯಿ ಹೇಳಿ ರಿಜೆಕ್ಟ್ ಮಾಡಿದ್ದರಂತೆ.

1010

ಬಾಲಿವುಡ್‌ನಲ್ಲಿ ಸಾರ್ವಕಾಲಿಕ ಜನಪ್ರಿಯ ಗಾಯಕಿ ಶ್ರೇಯಾ ಘೋಶಾಲ್ 'ದೇವದಾಸ್' ಚಿತ್ರದ ಮೂಲಕ ತಮ್ಮ ಕೆರಿಯರ್‌ ಪ್ರಾರಂಭಿಸಿದರು. ನಂತರ ಸಂಗೀತ ಜಗತ್ತಿನಲ್ಲಿ ದೊಡ್ಡ ಸ್ಥಾನವನ್ನು ಗಳಿಸಿದರು.

click me!

Recommended Stories