ಝೆರೋಧಾ ಸಂಸ್ಥಾಪಕ ನಿಖಿಲ್ ಕಾಮತ್ ಜೊತೆ ಸುಶಾಂತ್ ಸಿಂಗ್ ಗರ್ಲ್‌ಫ್ರೆಂಡ್ ರಿಯಾ ಡೇಟಿಂಗ್ ರೂಮರ್!

Published : Aug 30, 2023, 11:55 AM ISTUpdated : Aug 30, 2023, 11:58 AM IST

ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿ ಒಂಟಿಯಾದ ರಿಯಾ ಚಕ್ರವರ್ತಿ ಇದೀಗ ಭಾರತದ ಉದಯೋನ್ಮುಖ ಹಾಗೂ ಶ್ರೀಮಂತ ಉದ್ಯಮಿ ನಿಖಿಲ್ ಕಾಮತ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದೆ.   

PREV
18
ಝೆರೋಧಾ ಸಂಸ್ಥಾಪಕ ನಿಖಿಲ್ ಕಾಮತ್ ಜೊತೆ ಸುಶಾಂತ್ ಸಿಂಗ್ ಗರ್ಲ್‌ಫ್ರೆಂಡ್ ರಿಯಾ ಡೇಟಿಂಗ್ ರೂಮರ್!

ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಹಲವು ಬಾರಿ ಸುದ್ದಿಯಾಗಿದ್ದಾರೆ, ವಿವಾದಕ್ಕೂ ಗುರಿಯಾಗಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಶಾಕ್‌ನಲ್ಲಿದ್ದ ರಿಯಾ ಇದೀಗ ಮೆಲ್ಲನೆ ಸಹಜ ಬದುಕಿನತ್ತ ಸಾಗಿದ್ದಾರೆ.

28

ಸುಶಾಂತ್ ಸಿಂಗ್ ರಜಪೂತ್ ನಿಧನದ ಬಳಿಕ ಒಂಟಿಯಾಗಿದ್ದ ರಿಯಾ ಚಕ್ರವರ್ತಿ ಇದೀಗ ಭಾರತದ ಶ್ರೀಮಂತ ಉದ್ಯಮಿ, ಝೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಸುದ್ದಿಗಳು ಹರಿದಾಡುತ್ತಿದೆ.

38

31 ವರ್ಷದ ರಿಯಾ ಚಕ್ರವರ್ತಿ ಹಾಗೂ 36 ವರ್ಷದ ನಿಖಿಲ್ ಕಾಮತ್ ರಿಲೇಶನ್‌ಶಿಪ್‌ನಲ್ಲಿದ್ದಾರೆ ಅನ್ನೋ ಮಾಹಿತಿಯನ್ನು ರೆಡ್ಡಿಟ್ ಸೇರಿದಂತೆ ಇತರ ಕೆಲ ಮಾಧ್ಯಮಗಳು ವರದಿ ಮಾಡಿದೆ.

48

ರಿಯಾ ಚಕ್ರವರ್ತಿ ಹಾಗೂ ನಿಖಿಲ್ ಕಾಮತ್ ಡೇಟಿಂಗ್ ನಡೆಸುತ್ತಿರುವ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಆದರೆ ಉಹಾಪೋಹಗಳು ಹರಿದಾಡುತ್ತಿದೆ. 
 

58

ರಿಯಾ ಚಕ್ರವರ್ತಿ ಈ ಹಿಂದೆ ಕಾರ್ನರ್‌ಸ್ಟೋನ್ ಸ್ಪೋರ್ಟ್ಸ್ ಮ್ಯಾನೇಜ್ಮೆಂಟ್ ಕಂಪನಿ ಮಾಲಕಿ ಸೀಮಾ ಸಜ್ದೆ ಸಹೋದರ ಬಂಟಿ ಸಜ್ದೆ ಜೊತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಅನ್ನೋ ಸುದ್ದಿ ಹರಿದಾಡಿತ್ತು. ಆದರೆ ಯಾವುದೇ ಅಧೀಕೃತ ಮಾಹಿತಿ ಹೊರಬಿದ್ದಿಲ್ಲ.
 

68

ಸುಶಾಂತ್ ಸಾವಿನ ಬಳಿಕ ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿದ ರಿಯಾ ಚಕ್ರವರ್ತಿಗೆ ಇತ್ತೀಚೆಗೆ ನ್ಯಾಯಾಲಯ ಜಾಮೀನು ನೀಡಿತ್ತು. ರಿಯಾ ಚಕ್ರವರ್ತಿ, ಗೆಳೆಯ ಸುಶಾಂತ್ ಸಿಂಗ್‌ ಡ್ರಗ್ಸ್ ನೀಡುತ್ತಿದ್ದರು ಅನ್ನೋ ಗಂಭೀರ ಆರೋಪ ರಿಯಾ ಮೇಲಿದೆ.

78

ಇತ್ತ ನಿಖಿಲ್ ಕಾಮತ್ ಝೆರೋಧ ಕಂಪನಿ ಹುಟ್ಟು ಹಾಕಿ ಭಾರತದ ಶ್ರೀಮಂತ ಉದ್ಯಮಿಯಾಗಿ ಬೆಳೆದಿದ್ದಾರೆ. ಇತ್ತೀಚೆಗೆ ಸ್ಟಾರ್ಟ್ ಆಪ್ ಕಂಪನಿಗಳಿಗೆ ನೆರವು ನೀಡಲು 1000 ಕೋಟಿ ರೂಪಾಯಿ ಮೀಸಲಿಟ್ಟು ಭಾರಿ ಸುದ್ದಿಯಾಗಿದ್ದರು.
 

88

ಇತ್ತೀಚೆಗೆ ನಿಖಿಲ್ ಕಾಮತ್ ತಮ್ಮ ಆದಾಯದ ಬಹುಪಾಲ ದಾನ ಮಾಡುವ ನಿರ್ಧಾರ ಘೋಷಿಸಿದ್ದರು. ಬರೋಬ್ಬರಿ 28,000 ಕೋಟಿ ರೂಪಾಯಿಗೂ ಹೆಚ್ಚು ಆಸ್ತಿ ಹೊಂದಿರುವ ನಿಖಿಲ್ ಕಾಮತ್ ಸದ್ಯ ಭಾರತದ ಉದಯೋನ್ಮುಖ ಉದ್ಯಮಿ ಮಾತ್ರವಲ್ಲ, ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲೂ ಕಾಣಿಸಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories