ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಸಿನಿಮಾಗಾಗಿ ಮಹೇಶ್ ಬಾಬು ಸಜ್ಜಾಗುತ್ತಿದ್ದಾರೆ. ಚಿತ್ರದ ಹೊಸ ಲುಕ್ಸ್‌ಗಾಗಿ ಪ್ರಯೋಗಗಳು ನಡೆಯುತ್ತಿವೆ. ಫೈನಲ್ ಲುಕ್ ಇನ್ನೂ ಖಚಿತವಾಗಿಲ್ಲ. ಶೂಟಿಂಗ್ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ತಿಳಿದು ಬಂದಿದೆ.
ಜನವರಿ 2025 ರಲ್ಲಿ ಹೊಸ ಚಿತ್ರದ ಶೂಟಿಂಗ್ ಆರಂಭವಾಗಲಿದೆ ಎನ್ನಲಾಗಿದೆ. ಎರಡು ಭಾಗಗಳಲ್ಲಿ ಚಿತ್ರ ಬರಲಿದ್ದು, ಮೊದಲ ಭಾಗ 2027 ರಲ್ಲಿ ಮತ್ತು ಎರಡನೇ ಭಾಗ 2029 ರಲ್ಲಿ ತೆರೆಗೆ ಬರಲಿದೆ. 1200 ಕೋಟಿ ಬಜೆಟ್‌ನ ಈ ಆಕ್ಷನ್-ಅಡ್ವೆಂಚರ್ ಸಿನಿಮಾದ ಮಹೇಶ್ ಬಾಬು ಅವರ ಲುಕ್ ಫೈನಲ್ ಆಗಿದೆ ಎನ್ನಲಾಗಿದೆ.
ಮಹೇಶ್ ಬಾಬು ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಿದೆ. ಮಹೇಶ್ ಬಾಬು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಶೂಟಿಂಗ್‌ಗೆ ಸಿನಿಮಾ ತಂಡ ಸಜ್ಜಾಗುತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನೂ ಮೂರು-ನಾಲ್ಕು ವರ್ಷ ಬೇಕಾಗಬಹುದು ಎಂಬ ಸುದ್ದಿ ಫ್ಯಾನ್ಸ್‌ಗೆ ಬೇಸರ ತರಿಸಿದೆ. ಆದರೆ ಮಹೇಶ್ ಬಾಬು ವರ್ಲ್ಡ್ ಸ್ಟಾರ್ ಆಗಲಿದ್ದಾರೆ ಎಂಬ ಸುದ್ದಿ ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.
ಸದ್ಯ ಮಹೇಶ್ ಬಾಬು ಅವರ ಬಗ್ಗೆ ಸುದ್ದಿಯೊಂದು ಭಾರೀ ವೈರಲ್ ಆಗುತ್ತಿದೆ. ಹೌದು, ಸ್ಟಾರ್ ಹೀರೋ ಮಹೇಶ್ ಬಾಬು ಯಾವುದಕ್ಕೆ ಹೆದರುತ್ತಾರೆ ಗೊತ್ತಾ? ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ, ಮಹೇಶ್ ಬಾಬು ನೀರಿಗೆ ಹೆದರುತ್ತಾರಂತೆ.
ಎತ್ತರದ ಜಲಪಾತಗಳು, ತುಂಬಿ ಹರಿಯುವ ನದಿಗಳು ಮತ್ತು ಸರೋವರಗಳ ಬಗ್ಗೆ ಮಹೇಶ್ ಬಾಬುಗೆ ಭಯ ಇದೆಯಂತೆ. ಅದಕ್ಕೆ ಅಂತಹ ಸ್ಥಳಗಳಲ್ಲಿ ಶೂಟಿಂಗ್ ಇಡಬೇಡಿ ಎಂದು ಡೈರೆಕ್ಟರ್‌ಗಳಿಗೆ ಹೇಳುತ್ತಾರಂತೆ. ಆದರೆ ಈ ಸುದ್ದಿಯಲ್ಲಿ ಎಷ್ಟು ಸತ್ಯಾಂಶವಿದೆ ಎಂಬುದು ತಿಳಿದಿಲ್ಲ. ಅನೇಕರು ಈ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ.
Rajamouli, mahesh babu,AI
ಮಹೇಶ್ ಬಾಬು ಈಗಾಗಲೇ ನೀರಿನಲ್ಲಿ ಅನೇಕ ಸನ್ನಿವೇಶಗಳಲ್ಲಿ ನಟಿಸಿದ್ದಾರೆ. ನೀರಿನಲ್ಲಿ ಡ್ಯಾನ್ಸ್ ಮಾಡಿರುವ ಹಾಡುಗಳೂ ಇವೆ. ಅವರ ಮನೆಯಲ್ಲಿ ಈಜುಕೊಳವಿದ್ದು, ಮಕ್ಕಳ ಜೊತೆ ಈಜುತ್ತಾರೆ. ಹಾಗಾಗಿ ನೀರಿನ ಭಯ ಇದೆ ಎಂಬ ಸುದ್ದಿಯನ್ನು ಅನೇಕರು ನಂಬುತ್ತಿಲ್ಲ.