ಈ ಸ್ಟಾರ್ ನಟನಿಗೆ ಭಾರತದಲ್ಲಿ 60 ಕೋಟಿ ಬಂಗಲೆ, ವಿದೇಶದಲ್ಲಿ ಐಷಾರಾಮಿ ವಿಲ್ಲಾ ಇದೆ… ಯಾರು ಗೆಸ್ ಮಾಡಿ

Published : May 14, 2025, 01:40 PM ISTUpdated : May 14, 2025, 02:32 PM IST

ಈ ಸೂಪರ್‌ಸ್ಟಾರ್ ಭಾರತದಲ್ಲಿ ಮಾತ್ರವಲ್ಲದೆ ಇಟಲಿಯಲ್ಲಿಯೂ ಅನೇಕ ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ. ಇದಲ್ಲದೆ, ಅವರು ಅನೇಕ ಲಕ್ಸುರಿ ಕಾರುಗಳನ್ನು ಸಹ ಹೊಂದಿದ್ದಾರೆ. ಆ ನಟ ಯಾರೆಂದು ಗುರುತಿಸಬಲ್ಲಿರಾ?   

PREV
19
ಈ ಸ್ಟಾರ್ ನಟನಿಗೆ ಭಾರತದಲ್ಲಿ 60 ಕೋಟಿ ಬಂಗಲೆ, ವಿದೇಶದಲ್ಲಿ ಐಷಾರಾಮಿ ವಿಲ್ಲಾ ಇದೆ… ಯಾರು ಗೆಸ್ ಮಾಡಿ

ಇವರು ಭಾರತವಷ್ಟೇ ಅಲ್ಲ, ವಿಶ್ವವೇ ಭಾರತದತ್ತ ನೋಡುವಂತೆ ಮಾಡಿದ ಸೂಪರ್ ಸ್ಟಾರ್ (Super Star). ತಮ್ಮ ಒಂದೇ ಸಿನಿಮಾ ಮೂಲಕ ಜಗತ್ತಿನ ಮೂಲೆ ಮೂಲೆಯಿಂದ ಅಭಿಮಾನಿಗಳನ್ನು ಪಡೆದಿದ್ದಾರೆ. ಈ ನಟನಿಗೆ ಭಾರತದಲ್ಲಿ 60 ಕೋಟಿಯ ಬಂಗಲೆ, ಇಟಲಿಯಲ್ಲಿ 40 ಕೋಟಿಯ ವಿಲ್ಲಾ ಕೂಡ ಇದೆ. ಇವರು ಯಾರು ಗೊತ್ತಾಯ್ತ? 
 

29

ಜನಪ್ರಿಯ ನಟ
ನಟ ಪ್ರಭಾಸ್ (Prabhas) ಚಲನಚಿತ್ರೋದ್ಯಮದ ಅತಿದೊಡ್ಡ ತಾರೆಗಳಲ್ಲಿ ಒಬ್ಬರು. ಬಾಹುಬಲಿ ಚಿತ್ರವು ಅವರಿಗೆ ಭಾರತದಾದ್ಯಂತ ಜನಪ್ರಿಯತೆಯನ್ನು ತಂದುಕೊಟ್ಟಿತು ಮಾತ್ರವಲ್ಲದೆ ಇತರ ದೇಶಗಳಲ್ಲಿಯೂ ಅವರಿಗೆ ಜನಪ್ರಿಯತೆ ಸಿಗುವಂತೆ ಮಾಡಿತು. ಚಲನಚಿತ್ರಗಳ ಹೊರತಾಗಿ, ಬಾಹುಬಲಿ ಪ್ರಭಾಸ್  ಅನೇಕ ಐಷಾರಾಮಿ ಆಸ್ತಿಗಳನ್ನು ಹೊಂದಿದ್ದಾರೆ.

39

ಕೋಟಿಗಟ್ಟಲೆ ಮೌಲ್ಯದ ಮನೆಗಳ ಮಾಲೀಕರು
ಹೈದರಾಬಾದ್‌ನ ಪ್ರಸಿದ್ಧ ಜುಬಿಲಿ ಹಿಲ್ಸ್ ಪ್ರದೇಶದಲ್ಲಿ ನಟನಿಗೆ ಹಲವಾರು ಕೋಟಿಗಳ ಐಷಾರಾಮಿ ಬಂಗಲೆ (Luxury bunglow) ಇದೆ, ಅಲ್ಲಿ ಅವರ ಅಭಿಮಾನಿಗಳು ಸೇರುತ್ತಾರೆ. ಈ ಮನೆಯ ಬೆಲೆ 60 ಕೋಟಿ ಎನ್ನಲಾಗುತ್ತೆ. 

49

60 ಕೋಟಿ ಮನೆ
ಪ್ರಭಾಸ್ ಜುಬಿಲಿ ಹಿಲ್ಸ್‌ನಲ್ಲಿ ಖರೀದಿಸಿರುವ ಮನೆ 60 ಕೋಟಿ ರೂಪಾಯಿ ಮೌಲ್ಯದ್ದಾಗಿದೆ ಎಂದು ಹೇಳಲಾಗುತ್ತದೆ ಮತ್ತು ಅವರು ಅದನ್ನು 2014 ರಲ್ಲಿ ಖರೀದಿಸಿದರು ಮತ್ತು ಪ್ರಭಾಸ್ ಅವರ ಮನೆಯಲ್ಲಿ ಈಜುಕೊಳದಿಂದ ಹಿಡಿದು ಉತ್ತಮ ಜಿಮ್‌ವರೆಗೆ ಎಲ್ಲವೂ ಇದೆ. ಜಿಮ್ ಗೆ ಬೇಕಾದ ಉಪಕರಣಗಳನ್ನು ಪ್ರಭಾಸ್ 1 ಕೋಟಿ ಕೊಟ್ಟು ವಿದೇಶದಿಂದ ತರಿಸಿದ್ದಾರೆ. 

59

ಇಟಲಿಯಲ್ಲಿ ಐಷಾರಾಮಿ ವಿಲ್ಲಾ
 ಸ್ಥಳೀಯ ಮಾಧ್ಯಮಗಳ ಪ್ರಕಾರ, ನಟ ಪ್ರಭಾಸ್ ಇಟಲಿಯಲ್ಲಿ ಐಷಾರಾಮಿ ವಿಲ್ಲಾವನ್ನು ಹೊಂದಿದ್ದಾರೆ, ಅದು ನಿಜಕ್ಕೂ ತುಂಬಾ ಸುಂದರವಾಗಿದೆ. ತಮ್ಮ ರಜೆಯನ್ನು ಹೆಚ್ಚಾಗಿ ನಟ ಅಲ್ಲಿಯೇ ಕಳೆಯುತ್ತಾರೆ. ಈ ವಿಲ್ಲಾಗೆ 40 ಕೋಟಿ ಎನ್ನಲಾಗುತ್ತೆ. 
 

69

ವೆಕೇಶನ್ ಎಂಜಾಯ್ ಮಾಡ್ತಾರೆ
ವರದಿಗಳ ಪ್ರಕಾರ, ಶೂಟಿಂಗ್‌ನಿಂದ ಬ್ರೇಕ್ ಸಿಕ್ಕಾಗಲೆಲ್ಲಾ, ಪ್ರಭಾಸ್ ತನ್ನ ವಿಶೇಷ ಮತ್ತು ಆಪ್ತ ಸ್ನೇಹಿತರೊಂದಿಗೆ ಅಲ್ಲಿಗೆ ತೆರಳಿ ಎಂಜಾಯ್ ಮಾಡ್ತಾರೆ. ಅಲ್ಲದೆ, ಇಟಲಿಯಲ್ಲಿ ಅವರು ಇಲ್ಲದ ಸಮಯದಲ್ಲಿ ಅದನ್ನು ಬಾಡಿಗೆ ನೀಡಲಾಗುತ್ತೆ. 

79

80 ಕೋಟಿ ಮೌಲ್ಯದ ಮನೆ
ಪ್ರಸ್ತುತ ಇದರ ಬೆಲೆ 80-85 ಕೋಟಿ ಎಂದು ಹೇಳಲಾಗುತ್ತಿದೆ. ಬಾಹುಬಲಿಯ ನಾಯಕ ಪ್ರಭಾಸ್ ಬಳಿ ಹಲವು ಐಷಾರಾಮಿ ಕಾರುಗಳು (luxury cars) ಸಹ ಇವೆ. ಇದರ ಜೊತೆ20 ಕೋಟಿಯ ಫಾರ್ಮ್ ಹೌಸ್ ಕೂಡ ಇವರಿಗಿದೆ. 

89

ಮನೆಯಿಂದ ಹಣ ಸಂಪಾದಿಸುತ್ತಾರೆ.
ಪ್ರಭಾಸ್ ತಮ್ಮ ಮನೆಯಲ್ಲಿ ಇಲ್ಲದಿದ್ದಾಗ, ಅದನ್ನು ಬಾಡಿಗೆಗೆ ನೀಡುತ್ತಾರೆ. ಈ ಐಷಾರಾಮಿ ಆಸ್ತಿಯಿಂದ ಪ್ರಭಾಸ್ ಪ್ರತಿ ತಿಂಗಳು 40 ಲಕ್ಷ ಗಳಿಸುತ್ತಾರೆ ಎಂದು ಹೇಳಲಾಗುತ್ತಿದೆ.

99

ಅವರ ನೆಟ್ ವರ್ತ್ ಎಷ್ಟು?
ಪ್ರಭಾಸ್ ಹೆಚ್ಚು ಚಿತ್ರಗಳಲ್ಲಿ ನಟಿಸುವುದಿಲ್ಲ, ಆದರೆ ಅವರ ನೆಟ್ ವರ್ತ್  (net wirth)ಏನು ಕಡಿಮೆ ಏನಲ್ಲ. ನಟ ಪ್ರಭಾಸ್ ಪ್ರಸ್ತುತ ಸುಮಾರು 250 ಕೋಟಿ ರೂ.ಗಳ ಮಾಲೀಕರಾಗಿದ್ದಾರೆ.
 

Read more Photos on
click me!

Recommended Stories