ದುಃಖಿತರಾಗಿ ಕುಳಿತಿರುವ ಫೋಟೋ ಹಂಚಿಕೊಂಡ Sunny Deol ಫ್ಯಾನ್ಸ್‌ ಆತಂಕ

Published : Apr 26, 2022, 05:41 PM IST

ಹಲವು ವರ್ಷಗಳಿಂದ ಬೆಳ್ಳಿತೆರೆಯಿಂದ ದೂರ ಉಳಿದಿದ್ದ ಸನ್ನಿ ಡಿಯೋಲ್  (Sunny Deol) ತಮ್ಮ ಮುಂಬರುವ ಚಿತ್ರ ಗದರ್ 2 (Gadar 2) ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ. ಈ ಚಿತ್ರದ ಬಹುಭಾಗದ ಚಿತ್ರೀಕರಣ ಮುಗಿದಿದೆ. ಅನಿಲ್ ಶರ್ಮಾ ಅವರ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರವು ಗದರ್ ಏಕ್ ಪ್ರೇಮ್ ಕಥಾ ಚಿತ್ರದ ಮುಂದುವರಿದ ಭಾಗವಾಗಿದೆ. ಈ ನಡುವೆ ಸನ್ನಿ ಡಿಯೋಲ್ ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತುಂಬಾ ಬೇಸರದಲ್ಲಿದ್ದಾರೆ.

PREV
15
ದುಃಖಿತರಾಗಿ ಕುಳಿತಿರುವ ಫೋಟೋ ಹಂಚಿಕೊಂಡ Sunny Deol ಫ್ಯಾನ್ಸ್‌ ಆತಂಕ

Instagramನಲ್ಲಿ ಹಂಚಿಕೊಂಡಿರುವ  ಫೋಟೋದಲ್ಲಿ ಸನ್ನಿ ಡಿಯೋಲ್‌ ಅವರ ಮುಖದಲ್ಲಿ ಸುಕ್ಕುಗಳು ಕಾಣಿಸಿಕೊಂಡಿದ್ದು, ಗಡ್ಡವೂ ಬೆಳೆದಿರುವುದನ್ನು ಕಾಣಬಹುದು. ಸನ್ನಿ ಮನೆಯ ಹೊರಗೆ ಮೆಟ್ಟಿಲುಗಳ ಮೇಲೆ ಕುಳಿತು ದುಃಖಿತರಾಗಿದ್ದಾರೆ. 

25

ಅವರ ಪೋಸ್ಟ್‌ಗೆ ಅಭಿಮಾನಿಗಳು ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ.  ಈ ಸ್ಥಿತಿಯಲ್ಲಿ ಸನ್ನಿ ಡಿಯೋಲ್ ನೋಡಿ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಸರ್, ನಿಮಗೆ ವಯಸ್ಸಾಯಿತು ಎಂದು ಒಬ್ಬರು ಬರೆದಿದ್ದಾರೆ. 'ಏನು ಮೋದಿ ಕಿಕ್‌ ಮಾಡಿ ಹೊರಹಾಕಿದರೇ? ಎಂದು ಮತ್ತೊಬ್ಬರು ಬರೆದಿದ್ದಾರೆ. 

35

ಸನ್ನಿ ಪಾಜಿ ಆಳವಾದ ಆಲೋಚನೆಯಲ್ಲಿದ್ದಾರೆ ಎಂದು  ಒಬ್ಬರು ಕಾಮೆಂಟ್‌ ಮಾಡಿದರೆ, ಏನಾಯಿತು ಸಹೋದರ? ಎಂದು ಇನ್ನೊಬ್ಬರು ಕೇಳಿದರು. ಇದರ ಜೊತೆಗೆ, ಅನೇಕರು ಹೃದಯ ಮತ್ತು ಬೆಂಕಿಯ ಎಮೋಜಿಯನ್ನು ಸಹ ಹಂಚಿಕೊಂಡಿದ್ದಾರೆ

45

ಈ ದಿನಗಳಲ್ಲಿ ಸನ್ನಿ ಡಿಯೋಲ್ ಅವರ ಮುಂಬರುವ ಚಿತ್ರ ಗದರ್ 2 ಸಿನಿಮಾದಲಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಇವರೊಂದಿಗೆ ಅಮಿಷಾ ಪಟೇಲ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹಿಮಾಚಲ ಪ್ರದೇಶದ ವಿವಿಧ ಭಾಗಗಳಲ್ಲಿ ಚಿತ್ರದ ಚಿತ್ರೀಕರಣ ನಡೆದಿದೆ. 

55

ನಿರ್ದೇಶಕ ಅನಿಲ್ ಶರ್ಮಾ ಅವರು ಗದರ್ ಏಕ್ ಪ್ರೇಮ್ ಕಥಾ ಚಿತ್ರದ ಸೀಕ್ವೆಲ್ ಮಾಡಲು ಬಹಳ ದಿನಗಳಿಂದ ಯೋಚಿಸುತ್ತಿದ್ದರು. ಗದರ್ 2 ಚಿತ್ರ ಈ ವರ್ಷದ ಅಂತ್ಯದ ವೇಳೆಗೆ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಬಹುದು ಎನ್ನಲಾಗಿದೆ

Read more Photos on
click me!

Recommended Stories