ಯಾವ್ದೇ ಸಿನಿಮಾ ಬ್ಯಾಕ್ ಗ್ರೌಂಡ್ ಇಲ್ಲ, ಆಸ್ತಿ ಅಂತಸ್ತು ಕೂಡ ಇಲ್ಲ. ಆಕ್ಟ್ ಮಾಡ್ಬೇಕು ಅನ್ನೋ ಹುಚ್ಚು, ಬೆಳ್ಳಿ ತೆರೆ ಮೇಲೆ ಕಾಣ್ಬೇಕು ಅನ್ನೋ ಆಸೆಯಿಂದ ಕಷ್ಟಪಟ್ಟು ಮೇಲೆ ಬಂದ ಹೀರೋ. ಮೊದಲು ಸಣ್ಣ ಪುಟ್ಟ ಪಾತ್ರ ಮಾಡ್ತಾ, ಆಮೇಲೆ ಕಾಮಿಡಿಯನ್ ಆಗಿ, ಆಮೇಲೆ ಸ್ಟಾರ್ ಹೀರೋಗಳ ಪಕ್ಕದಲ್ಲಿ ಫ್ರೆಂಡ್ ಆಗಿ ಆಕ್ಟ್ ಮಾಡ್ತಾ ಹೀರೋ ಆದ. ಈಗ ಟಾಲಿವುಡ್ ಅಲ್ಲಿ ಸಖತ್ ಫೇಮಸ್ ಆಗ್ತಿದ್ದಾನೆ. ಅಕ್ಕಿನೇನಿ ನಾಗಚೈತನ್ಯಗೆ ಫ್ರೆಂಡ್ ತರ ಕಾಣ್ತಿದ್ದ ಒಬ್ಬ ಸಾಮಾನ್ಯ ಹುಡುಗ ಈಗ ಹೀರೋ ಆಗಿ ಬ್ಯಾಕ್ ಟು ಬ್ಯಾಕ್ ಹಿಟ್ಸ್ ಕೊಡ್ತಿದ್ದಾನೆ. ಇವನ್ಯಾರು ಅಂತೀರಾ?