Published : Mar 14, 2025, 06:00 PM ISTUpdated : Mar 14, 2025, 08:52 PM IST
ಭಾರತದ ಈ ಜನಪ್ರಿಯ ನಟ -ನಟಿಯರು ಕೇವಲ ತಮ್ಮ ನಟನೆಯಲ್ಲಿ ಮಾತ್ರವಲ್ಲ, ಅಡುಗೆ ಮಾಡೋದ್ರಲ್ಲಿ ಕೂಡ ದಿ ಬೆಸ್ಟ್. ಅಡುಗೆ ಅಂದ್ರೆನೆ ದೂರ ಓಡುವ ಸೆಲೆಬ್ರಿಟಿಗಳ ಮಧ್ಯೆ, ಯಾರು ಅಡುಗೆ ಅಂದ್ರೆ ಆರ್ಟ್ ಎನ್ನೋ ಥರ ಅಡುಗೆ ಮಾಡ್ತಾರೆ ನೋಡೋಣ.
ಸೆಲೆಬ್ರಿಟಿಗಳು ಅಂದ್ರೆ ಅವರು ಹೆಚ್ಚಾಗಿ ತಾವೇ ಅಡುಗೆ ಮಾಡೊದೆ ಇಲ್ಲ. ಅವರಿಗೆ ಎಲ್ಲವನ್ನೂ ಮಾಡೋದಕ್ಕೆ ಕೈಗೆ ಕಾಲಿಗೆ ಆಳುಕಾಳುಗಳು ಇರುತ್ತಾರೆ. ಆದರೆ ಈ ಜನಪ್ರಿಯ ಸೆಲೆಬ್ರಿಟಿಗಳು ಸಿನಿಮಾಗಳಲ್ಲಿ ಎಷ್ಟೆ ಬ್ಯುಸಿ ಆಗಿದ್ದರೂ ಅಡುಗೆ ಮಾಡೋದ್ರಲ್ಲಿ ಇವರು ಬೆಸ್ಟ್. ಅಂತಹ ನಟ-ನಟಿಯರು ಯಾರ್ಯಾರಿದ್ದಾರೆ ನೋಡೋಣ.
213
ಕಿಚ್ಚ ಸುದೀಪ್ (Kiccha Sudeep) ಅದ್ಭುತ ನಟ ಹೌದು, ಜೊತೆಗೆ ಇವರು ಅತ್ಯದ್ಭುತವಾದ ಚೆಫ್ ಅನ್ನೋದು ಕೂಡ ಕನ್ನಡಿಗರಿಗೆ ಗೊತ್ತೇ ಇದೆ. ನಟ ಆಗದೇ ಇರದಿದ್ದರೇ ಅವರು ಚೆಫ್ ಆಗುತ್ತಿದ್ದರು. ಬಿಗ್ ಬಾಸ್ ಸ್ಪರ್ಧಿಗಳಿಗೆ ಪ್ರತಿ ವರ್ಷವು ಕಿಚ್ಚ ಸುದೀಪ್ ಕೈ ರುಚಿ ಸವಿಯೋ ಭಾಗ್ಯ ಕೂಡ ಸಿಗುತ್ತಿತ್ತು.
313
ದೀಪಿಕಾ ಪಡುಕೋಣೆ (Deepika Padukone) ದಕ್ಷಿಣ ಭಾರತದ ಆಹಾರವನ್ನು ತುಂಬಾ ಇಷ್ಟಪಡುತ್ತಾರೆ , ಅಷ್ಟೇ ಅಲ್ಲ ಅವರು ಸ್ವತಃ ರಸಂ-ರೈಸ್ ಮತ್ತು ಇಡ್ಲಿ ಮಾಡೋದನ್ನು ಇಷ್ಟಪಡುತ್ತಾರಂತೆ. ತಾನು ಅಡುಗೆಯಲ್ಲಿಯೂ ಸಂತೋಷವನ್ನು ಕಂಡು ಕೊಳ್ಳುತ್ತೇನೆ ಎನ್ನುತ್ತಾರೆ ದೀಪಿಕಾ.
413
ಮಲೈಕಾ ಅರೋರಾ (Malaika Arora) ಸಂದರ್ಶನವೊಂದರಲ್ಲಿ ತಮ್ಮ ಮಗನಿಗಾಗಿ ತಾವು ಅಡುಗೆ ಮಾಡೋದಾಗಿ ತಿಳಿಸಿದ್ದಾರೆ. ಅಷ್ಟೇ ಅಲ್ಲ ಅಡುಗೆಮನೆಯಲ್ಲಿ ಸಮಯ ಕಳೆಯುವುದನ್ನು ಅಂದ್ರೆ ತುಂಬಾನೆ ಇಷ್ಟ ಅಂತಾನೂ ಹೇಳಿದ್ದಾರೆ.
513
ಶಿಲ್ಪಾ ಶೆಟ್ಟಿ (Shilpa Shetty) ಕೇವಲ ಆಹಾರ ಪ್ರಿಯೆ ಮಾತ್ರವಲ್ಲ, ಇವರು ಉತ್ತಮ ಚೆಫ್ ಕೂಡ ಹೌದು; ಶಿಲ್ಪಾ ಸೋಶಿಯಲ್ ಮೀಡಿಯಾ ನೋಡಿದ್ರೆ ಅವರು ಎಷ್ಟೊಂದು ಅಡುಗೆಗಳನ್ನು ತಯಾರಿಸೋದನ್ನು ಸಹ ನೀವು ನೋಡಬಹುದು.
613
ಅಭಿಷೇಕ್ ಬಚ್ಚನ್ (Abhishek Bachchan) ಕೂಡ ಅಡುಗೆಯ ಬಗ್ಗೆ ಉತ್ಸಾಹವನ್ನು ಹೊಂದಿದ್ದಾರೆ . ವಿಶೇಷವಾಗಿ ಚಿಕನ್ ಕರಿ ತಯಾರಿಸಲು ತುಂಬಾನೆ ಇಷ್ಟಪಡುತ್ತಾರೆ, ಇವರು ಮಾಡುವ ಚಿಕನ್ ಕರಿಯನ್ನು ಕುಟುಂಬದ ಸದಸ್ಯರು ಇಷ್ಟ ಪಟ್ಟು ತಿನ್ನುತ್ತಾರೆ.
713
ಅಕ್ಷಯ್ ಕುಮಾರ್ ಅವರನ್ನು ಅಡುಗೆಮನೆಯ ರಾಜ ಎಂದು ಕರೆದ್ರೂ ತಪ್ಪಲ್ಲ, ಯಾಕಂದ್ರೆ ಅಕ್ಷಯ್ ಕುಮಾರ್ ಗೆ ಅಡುಗೆ ಮಾಡೋದು ಅಂದ್ರೆ ಅಷ್ಟೊಂದು ಇಷ್ಟ. ಥಾಯ್ ಆಹಾರವನ್ನು ತಯಾರಿಸುವಲ್ಲಿ ಎಕ್ಸ್ ಪರ್ಟ್ ಆಗಿರುವ ಅಕ್ಷಯ್, ಸಿನಿಮಾಗೂ ಬರೋದಕ್ಕೂ ಮುನ್ನ ರೆಸ್ಟೋರೆಂಟ್ ನಲ್ಲಿ ಕೆಲಸ ಮಾಡುತ್ತಿದ್ದರು.
813
ಮಾಧುರಿ ದೀಕ್ಷಿತ್ ಅಡುಗೆಯ ಬಗ್ಗೆ ಕ್ರೇಜ್ ಹೊಂದಿದ್ದಾರೆ. ಅವರು ನಿಯಮಿತವಾಗಿ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಡುಗೆ ಸಂಬಂಧಿತ ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ, ಇದು ಅವರ ಅಭಿಮಾನಿಗಳಿಗೆ ಮಾಧುರಿ ಎಂತಹ ಬಾಣಸಿಗಳು ಅನ್ನೋದನ್ನು ತಿಳಿಸಿದೆ.
913
ಕಂಗನಾ ರನೌತ್ (Kangana Ranaut) ತನ್ನ ಬಿಡುವಿನ ವೇಳೆಯಲ್ಲಿ ಅಡುಗೆ ಮಾಡಲು ಇಷ್ಟಪಡುತ್ತಾರೆ, ಮತ್ತು ಅವರು ಆಗಾಗ್ಗೆ ತಮ್ಮ ಕುಟುಂಬ ಮತ್ತು ಸ್ನೇಹಿತರಿಗೆ ತಾವೇ ತಮ್ಮ ಕೈಯಾರೆ ಅಡುಗೆ ತಯಾರಿಸಿ ಬಡಿಸೋದನ್ನು ಇಷ್ಟ ಪಡ್ತಾರೆ.
1013
ಅಜಯ್ ದೇವಗನ್ (Ajay Devgan)ಕೂಡ ಅಡುಗೆ ಮಾಡಲು ಇಷ್ಟಪಡುತ್ತಾರೆ. ಅಜಯ್ ಅಡುಗೆಮನೆಗೆ ಹೋದಾಗ, ಎಲ್ಲಾ ಡೋರ್ ಕ್ಲೋಸ್ ಮಾಡಿ, ತಮಗೆ ಇಷ್ಟವಾದ ಅಡುಗೆ ತಯಾರಿಸುತ್ತಾರೆ ಅನ್ನೋದನ್ನು ಕಾಜಲ್ ಹೇಳಿದ್ದಾರೆ. ಅಂದಹಾಗೆ ಕಾಜಲ್ ಗೆ ಅಡುಗೆ ಮಾಡೋದಕ್ಕೆ ಬರೋದಿಲ್ವಂತೆ.
1113
ಆಲಿಯಾ ಭಟ್ ಕೂಡ ಅಡುಗೆ ಮಾಡೋದರ ಕುರಿತು ಆಸಕ್ತಿ ಹೊಂದಿದ್ದಾರೆ. ಅವರು ಚಾಕೊಲೇಟ್ ಕೇಕ್ ತಯಾರಿಸಲು ಇಷ್ಟಪಡುತ್ತಾರೆ ಮತ್ತು ಆಗಾಗ್ಗೆ ತಮ್ಮ ಮಗಳು ರಾಹಾಗಾಗಿ ವಿಶೇಷವಾದದ್ದನ್ನು ಬೇಕ್ ಮಾಡುತ್ತಲೇ ಇರುತ್ತಾರೆ.
1213
ರಾಧಿಕಾ ಪಂಡಿತ್ ಗೆ (Radhika Pandit) ಆರಂಭದಿಂದಲೇ ಬೇಕ್ ಮಾಡೋದು ಅಂದ್ರೆ ಇಷ್ಟ. ವಿಶೇಷ ಸಂದರ್ಭಗಳಲ್ಲಿ ನಟಿ ಕೇಕ್ ತಮ್ಮ ಕೈಯಾರೆ ತಯಾರಿಸುತ್ತಿದ್ದರು. ಈಗ ಇಬ್ಬರು ಮಕ್ಕಳು ಸಹ ಕೇಕ್ ತಯಾರಿಸುತ್ತಾರೆ.
1313
ಕರಿಷ್ಮಾ ಕಪೂರ್ ಆರೋಗ್ಯಕರ ಆಹಾರವನ್ನು ತಯಾರಿಸಲು ಇಷ್ಟಪಡುತ್ತಾರೆ, ಅವರು ಮನೆಯಲ್ಲಿ ತಯಾರಿಸಿದ ಊಟವನ್ನು ತುಂಬಾ ಆನಂದಿಸುತ್ತಾರೆ ಮತ್ತು ಅವರು ಸ್ವತಃ ಅನೇಕ ರೀತಿಯ ಆರೋಗ್ಯಕರ ಭಕ್ಷ್ಯಗಳನ್ನು ತಯಾರಿಸುತ್ತಾರೆ.