ಖ್ಯಾತ ನಟಿಯ ಬಾತ್‌ರೂಮ್‌ ಸೀನ್‌ ಗಲಾಟೆ: ಸ್ಟಾರ್‌ ಹೀರೋ ಅಪ್ಪನ ಕೈವಾಡ ಎಂದ ಡೈರೆಕ್ಟರ್‌!

First Published | Nov 3, 2024, 10:59 PM IST

ಚಿತ್ರಗಳಲ್ಲಿ ನಾಯಕಿಗೆ ಸಂಬಂಧಿಸಿದ ಹಲವು ದೃಶ್ಯಗಳು ವಿವಾದಾತ್ಮಕವಾಗಿದ್ದರೆ ಅಂತಹ ಸೀನ್‌ಗಳಿಗೆ ಸೆನ್ಸಾರ್‌ ಮಂಡಳಿ ಕತ್ತರಿ ಹಾಕುತ್ತೆ. 90ರ ದಶಕದ ಸಿನಿಮಾಗಳಲ್ಲಿ ನಾಯಕಿಯರು ಕೇವಲ ಗ್ಲಾಮರ್ ಶೋಗಳಿಗೆ ಮಾತ್ರ ಸೀಮಿತವಾಗಿದ್ದರು. ನಗ್ಮಾ, ರಮ್ಯಾ ಕೃಷ್ಣ ಅವರಂತಹ ನಾಯಕಿಯರು ತಮ್ಮ ಮೈಮಾಟವನ್ನ ಹೆಚ್ಚು ಪ್ರದರ್ಶನ ಮಾಡುತ್ತಿದ್ದರು.

90ರ ದಶಕದಲ್ಲಿ ಖ್ಯಾತ ನಟಿಯಾಗಿದ್ದ ದಿವ್ಯಾ ಭಾರತಿ ಕೂಡ ಗ್ಲಾಮರ್ ಪಾತ್ರಗಳಲ್ಲಿ ಮಿಂಚಿದ್ದರು. ದಿವ್ಯಾ ಭಾರತಿ 19 ನೇ ವಯಸ್ಸಿನಲ್ಲಿ ನಿಧನರಾದರು. ಆದರೆ ಆಕೆ ನಟಿಸಿ ಸಿನಿಮಾಗಳು ಸೂಪರ್‌ ಡೂಪರ್ ಹಿಟ್‌ ಆಗಿ ಅಂದಿನ ಕಾಲದಲ್ಲಿ ಭಾರೀ ಜನಪ್ರಿಯ ನಟಿಯಾಗಿದ್ದರು. ದಿವ್ಯಾ ಭಾರತಿ ಕಾಲ್‌ಶೀಟ್‌ಗಾಗಿ ನಿರ್ದೇಶಕರು ಮತ್ತು ನಿರ್ಮಾಪಕರು ಕಾಯುತ್ತಿದ್ದರು. 1990 ರಲ್ಲಿ, ದಿವ್ಯಾ ಭಾರತಿ, ತೆಲುಗಿನ ವಿಕ್ಟರಿ ವೆಂಕಟೇಶ್ ಅವರ ಬೊಬ್ಬಿಲಿ ರಾಜ ಚಿತ್ರದಲ್ಲಿ ನಾಯಕಿಯಾಗಿ ಟಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದರು. ಆ ಸಿನಿಮಾ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಆ ಚಿತ್ರದಲ್ಲಿ ದಿವ್ಯಾ ಭಾರತಿ ಅವರ ಕ್ಯೂಟ್ ಮತ್ತು ಗ್ಲಾಮರಸ್ ಲುಕ್ ಎಲ್ಲರನ್ನು ಆಕರ್ಷಿಸಿತ್ತು.

ಇದಾದ ನಂತರ ದಿವ್ಯಾ ಭಾರತಿ ಮೋಹನ್ ಬಾಬು ಅವರೊಂದಿಗೆ ಅಸೆಂಬ್ಲಿ ರೌಡಿಯಲ್ಲಿ ನಟಿಸಿದರು. ಇದು ಸೆನ್ಸೇಷನಲ್ ಹಿಟ್ ಕೂಡ ಆಯಿತು. ಮೋಹನ್ ಬಾಬು ಅವರ ವೃತ್ತಿಜೀವನದಲ್ಲಿ ದೊಡ್ಡ ಹಿಟ್ ಚಿತ್ರಗಳಲ್ಲಿ ಒಂದಾಗಿದೆ. ಈ ಎರಡು ಚಿತ್ರಗಳ ನಿರ್ದೇಶಕ ಬಿ ಗೋಪಾಲ್. ಈ ಚಿತ್ರಗಳಲ್ಲಿ ದಿವ್ಯಾ ಭಾರತಿ ಗ್ಲಾಮರಸ್ ಆಗಿ ಕಾಣಿಸಿಕೊಂಡು ಕೆಲವು ದೃಶ್ಯಗಳಲ್ಲಿ ನಟಿಸುತ್ತಿರುವ ಬಗ್ಗೆ ಆಗ ದೊಡ್ಡ ಚರ್ಚೆಯೇ ನಡೆದಿತ್ತು.

Tap to resize

ಬೊಬ್ಬಿಲಿ ರಾಜ ಚಿತ್ರದಲ್ಲಿ ಒಂದು ದೃಶ್ಯವಿದೆ. ಆ ದೃಶ್ಯವನ್ನು ಸೆನ್ಸಾರ್‌ ಮಂಡಳಿಯವರು ಹೇಗೆ ಒಪ್ಪಿಕೊಂಡರು ಎಂದು ಎಲ್ಲರೂ ಬೆಚ್ಚಿಬಿದ್ದರು. ಅಸೆಂಬ್ಲಿ ರೌಡಿ ಚಿತ್ರದಲ್ಲಿ ದಿವ್ಯಾ ಭಾರತಿ ಅವರ ಬಾತ್ ರೂಂ ದೃಶ್ಯ ಕೂಡ ಸಾಕಷ್ಟು ಗಮನ ಸೆಳೆದಿತ್ತು. ಸೆನ್ಸಾರ್‌ ಮಂಡಳಿ ಇಂತಹ ದೃಶ್ಯಗಳಿಗೆ ಹೇಗೆ ಅನುಮತಿ ಕೊಟ್ಟಿದ್ದರು ಎಂಬುದು ದೊಡ್ಡ ನಿಗೂಢವಾಗಿದೆ. ತೆರೆಮರೆಯಲ್ಲಿ ಯಾರೆಲ್ಲಾ ಶಾಮೀಲಾಗಿದ್ದಾರೆ ಎನ್ನುವುದನ್ನು ನಿರ್ದೇಶಕ ಬಿ ಗೋಪಾಲ್ ಕೊನೆಗೂ ಬಹಿರಂಗಪಡಿಸಿದ್ದಾರೆ.

ಸೆನ್ಸಾರ್ ಸಮಸ್ಯೆಗಳಿದ್ದರೆ ವಿಕ್ಟರಿ ವೆಂಕಟೇಶ್‌ ಅವರ ತಂದೆ ರಾಮಾನಾಯ್ಡು ನಿಭಾಯಿಸುತ್ತಿದ್ದರು. ರಾಮಾನಾಯ್ಡು ಅವರು ಬೊಬ್ಬಿಲಿ ರಾಜ ಚಿತ್ರದ ಜಾಕೆಟ್ ದೃಶ್ಯವನ್ನು ಸೆನ್ಸಾರ್‌ಗಳ ಜೊತೆ ಮಾತನಾಡುವ ಮೂಲಕ ನಿರ್ವಹಿಸಿದ್ದಾರೆ. ರಾಮಾನಾಯ್ಡು ಹೇಳಿದ ಮಾತನ್ನು ಸೆನ್ಸಾರ್‌ ಮಂಡಳಿ ಕೇಳುತ್ತಿತ್ತು. ಅದೇ ರೀತಿ ಅಸೆಂಬ್ಲಿ ರೌಡಿ ಚಿತ್ರದಲ್ಲಿ ಮೋಹನ್ ಬಾಬು ಬಾತ್ ರೂಂ ದೃಶ್ಯವನ್ನು ಇರುವಂತೆ ನೋಡಿಕೊಂಡಿದ್ದರು ಎಂದು ನಿರ್ದೇಶಕ ಗೋಪಾಲ್ ಹೇಳಿದ್ದಾರೆ.

Latest Videos

click me!