ತಮಿಳು, ತೆಲುಗು, ಮಲಯಾಳಂ, ಹಿಂದಿ ಅಂತ ಬೇರೆ ಬೇರೆ ಭಾಷೆಗಳಲ್ಲಿ ಹಾಡಿ ಭಾರತದ ಫೇಮಸ್ ಸಿಂಗರ್ ಆಗಿ ಮಿಂಚುತ್ತಿರುವವರು ಶ್ರೇಯಾ ಘೋಶಲ್. ಇವರು ತಮಿಳಲ್ಲೂ ಇಳಯರಾಜ, ಯುವನ್ ಶಂಕರ್ ರಾಜ, ಎ.ಆರ್.ರೆಹಮಾನ್ ಅಂತ ತುಂಬಾ ದೊಡ್ಡ ಮ್ಯೂಸಿಕ್ ಡೈರೆಕ್ಟರ್ ಜೊತೆ ಕೆಲಸ ಮಾಡಿದ್ದಾರೆ. ಅದರಲ್ಲೂ ಪಿತಾಮಗನ್ ಸಿನಿಮಾದಲ್ಲಿ ಬರುವ ಇಳಂಗಾತ್ತು ವೀಸುದೇ, ಸಿಲ್ಲುನು ಒರು ಕಾಧಲ್ ಸಿನಿಮಾದಲ್ಲಿರೋ ಮುನ್ಬೇ ವಾ, ವಿಟಿವಿ ಸಿನಿಮಾದಲ್ಲಿ ಬರುವ ಮನ್ನಿಪ್ಪಾಯಾ, ಎದಿರ್ನೀಚಲ್ ಸಿನಿಮಾದಲ್ಲಿ ಬರುವ ವೆಲಿಚಪ್ ಪೂವೇ ಅಂತ ತುಂಬಾ ಹಿಟ್ ಸಾಂಗ್ಸ್ ಇವರ ಲಿಸ್ಟ್ನಲ್ಲಿವೆ.