'ಬಾಹುಬಲಿ'ಯನ್ನ ಕಟ್ಟಪ್ಪ ಕೊಂದಿದ್ದಕ್ಕೆ 10 ವರ್ಷ: 'ದಿ ಎಪಿಕ್' ರೂಪದಲ್ಲಿ ಮತ್ತೆ ತೆರೆ ಮೇಲೆ ಎಂದ ಜಕ್ಕಣ್ಣ

Published : Jul 11, 2025, 06:24 PM IST

ಬಾಹುಬಲಿ ಚಿತ್ರ ಬಿಡುಗಡೆ ಆಗಿ 10 ವರ್ಷ ಆದ ಸಂಭ್ರಮದಲ್ಲಿ ‘ಬಾಹುಬಲಿ’ ಸಿನಿಮಾದ ಎರಡೂ ಭಾಗಗಳನ್ನೂ ಸೇರಿಸಿ ‘ಬಾಹುಬಲಿ : ದಿ ಎಪಿಕ್‌’ ಸಿನಿಮಾ ಹೊರಬರಲಿದೆ.

PREV
16

ಭಾರತೀಯ ಚಿತ್ರರಂಗದ ಅತಿ ಮಹತ್ವದ ಸಿನಿಮಾಗಳಲ್ಲಿ ಒಂದಾದ ‘ಬಾಹುಬಲಿ’ ಸಿನಿಮಾ ಬಿಡುಗಡೆಯಾಗಿ 10 ವರ್ಷ ಸಂದಿದೆ. 2015ರ ಜುಲೈ 10ರಂದು ಮೊದಲ ಭಾಗ ಬಿಡುಗಡೆಯಾಗಿತ್ತು.

26

ಈ ಚಿತ್ರ ಬಿಡುಗಡೆ ಆಗಿ 10 ವರ್ಷ ಆದ ಸಂಭ್ರಮದಲ್ಲಿ ‘ಬಾಹುಬಲಿ’ ಸಿನಿಮಾದ ಎರಡೂ ಭಾಗಗಳನ್ನೂ ಸೇರಿಸಿ ‘ಬಾಹುಬಲಿ : ದಿ ಎಪಿಕ್‌’ ಸಿನಿಮಾ ಹೊರಬರಲಿದೆ.

36

ಈ ಬಗ್ಗೆ ವಿವರ ನೀಡಿದ ನಿರ್ದೇಶಕ ಎಸ್‌ ಎಸ್‌ ರಾಜಮೌಳಿ, ‘ಬಾಹುಬಲಿ: ದಿ ಬಿಗಿನಿಂಗ್‌’ ಹಾಗೂ ‘ಬಾಹುಬಲಿ - ದಿ ಕನ್‌ಕ್ಲೂಷನ್‌’ ಭಾಗಗಳನ್ನು ಅ.31ಕ್ಕೆ ಒಟ್ಟಿಗೆ ನೋಡಬಹುದು.

46

ಈ ಸಿನಿಮಾ ತೆರೆಕಂಡು 10 ವರ್ಷಗಳಾಗಿರುವ ಹಿನ್ನೆಲೆಯಲ್ಲಿ ಈ ಸಿನಿಮಾ ಬರಲಿದೆ. ಬಾಹುಬಲಿ ಅನೇಕ ಹೊಸ ಪಯಣಗಳಿಗೆ ಆರಂಭ ಬಿಂದುವಾಗಿತ್ತು. ಲೆಕ್ಕವಿಲ್ಲದಷ್ಟು ನೆನಪು, ಸ್ಫೂರ್ತಿಗಳನ್ನು ಈ ಸಿನಿಮಾ ನೀಡಿದೆ’ ಎಂದು ಹೇಳಿದ್ದಾರೆ.

56

ಬಾಹುಬಲಿ ಸಿನಿಮಾ ಭಾಗ-1ರ ಕೊನೆಯಲ್ಲಿ ಕಟ್ಟಪ್ಪ, ಬಾಹುಬಲಿಯನ್ನ ಸಾಯಿಸುವುದು ಏಕೆ ಎನ್ನುವುದೇ ಇಡೀ ವಿಶ್ವಕ್ಕೆ ಕುತೂಹಲ ಮೂಡಿಸಿತ್ತು. ಅಲ್ಲದೇ ಈ ಸಿನಿಮಾಗೆ ದೊಡ್ಡ ಮಟ್ಟದ ರೆಸ್ಪಾನ್ಸ್​ ಸಿಕ್ಕಿತ್ತು.

66

ಇನ್ನು ನಿರ್ದೇಶಕ ರಾಜಮೌಳಿ, ಪ್ರಭಾಸ್, ರಾಣಾ ದಗ್ಗುಬಾಟಿ, ರಮ್ಯಾಕೃಷ್ಣ, ಸತ್ಯರಾಜ್, ನಾಸರ್ ಸೇರಿದಂತೆ ಸಿನಿಮಾದಲ್ಲಿ ನಟಿಸಿದ ಪ್ರಮುಖ ಕಲಾವಿದರು ಒಟ್ಟಿಗೆ ಸೇರಿ ಇತ್ತೀಚೆಗೆ ಸಂಭ್ರಮಾಚರಣೆ ಮಾಡಿದ್ದಾರೆ.

Read more Photos on
click me!

Recommended Stories