ಸೂಪರ್ ಸ್ಟಾರ್ ಕೃಷ್ಣ ಜೊತೆ ಯಾರಿಗೂ ಸಾಧ್ಯವಾಗದಂತಹ ಅಪರೂಪದ ದಾಖಲೆ ಶ್ರೀದೇವಿ ಅವರದ್ದು. ಶ್ರೀದೇವಿ, ಕೃಷ್ಣ ಜೊತೆಯಾಗಿ ನಟಿಸ್ತಿದ್ದಾರೆ ಅಂದ್ರೆ ಆ ಚಿತ್ರ ಹಿಟ್ ಅಂತಾನೆ ಭಾವಿಸ್ತಿದ್ರು. ಇವರಿಬ್ಬರೂ 30 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಶ್ರೀದೇವಿ, ಕೃಷ್ಣ ಜೋಡಿ ಪ್ರೇಕ್ಷಕರ ಮನಗೆದ್ದಿತ್ತು. ಕೃಷ್ಣ ಜೊತೆ ನಾಯಕಿಯಾಗಿ ರೊಮ್ಯಾನ್ಸ್ ಮಾಡಿದ ಶ್ರೀದೇವಿ, ಬಾಲ್ಯದಲ್ಲಿ ಅವರಿಗೆ ಮಗಳಾಗಿ ನಟಿಸಿದ್ರು. ನಾಯಕಿಯಾದ ಮೇಲೆ ತಂಗಿಯ ಪಾತ್ರದಲ್ಲೂ ನಟಿಸಿದ್ರು.