ಕೆಟ್ಟದ್ದನ್ನು ಕೇಳಬೇಡಿ, ಕೆಟ್ಟದ್ದನ್ನು ನೋಡಬೇಡಿ, ಕೆಟ್ಟದ್ದನ್ನು ಮಾತನಾಡಬೇಡಿ ಅನ್ನೋ ಗಾಂಧೀಜಿ ಮಾತಿನ ಕಾನ್ಸೆಪ್ಟ್ ಜೊತೆ ಸೋಶಿಯಲ್ ಮೀಡಿಯಾದಲ್ಲಿ ಅಭಿಯಾನ ಶುರು ಮಾಡಿದ್ದಾರೆ. ಮೂರು ಮಂಗಗಳ ಚಿತ್ರಕ್ಕೆ ನಾಲ್ಕನೇ ಮಂಗ ಸೇರಿಸಿ ಕೆಟ್ಟ ಪೋಸ್ಟ್‌ಗಳು ಬೇಡ ಅಂತ ಆಸಕ್ತಿಕರವಾಗಿ ಹೋರ್ಡಿಂಗ್ಸ್ ಹಾಕಿದ್ದಾರೆ. 'ಪೋಸ್ಟ್ ನೋ ಈವಿಲ್' ಅನ್ನೋ ಹೆಸರಿನಲ್ಲಿ ನಾಲ್ಕನೇ ಮಂಗದ ಚಿತ್ರದ ಜೊತೆ ನಡೀತಿರೋ ಈ ಅಭಿಯಾನಕ್ಕೆ ಈಗ ಸಿನಿಮಾ ನಟರು, ಪ್ರಮುಖರು ಸೇರ್ತಿದ್ದಾರೆ. ಸೋಶಿಯಲ್ ಮೀಡಿಯಾ ಬಳಕೆಯ ಬಗ್ಗೆ ರಾಜ್ಯ ಸರ್ಕಾರ ಮಾಡಿರೋ ಈ ವಿಶೇಷ ಅಭಿಯಾನದಲ್ಲಿ ಟಾಲಿವುಡ್ ಹೀರೋ ನಿಖಿಲ್ ಭಾಗಿಯಾಗಿದ್ದಾರೆ. ಈಗಾಗಲೇ ಸಿನಿಮಾ ನಟರು ಅಡವಿ ಶೇಷ್, ಶ್ರೀಲೀಲಾ ತಮ್ಮ ಬೆಂಬಲ ಸೂಚಿಸಿ ವಿಡಿಯೋ ಬಿಡುಗಡೆ ಮಾಡಿದ್ದಾರೆ.