ಹಿಂದಿಯಲ್ಲಿ ಯಾಕೆ ಚೆನ್ನಾಗಿ ಓಡ್ತಿದೆ ಅಂದ್ರೆ.. `ಪುಷ್ಪ 2` ಪಕ್ಕಾ ಮಾಸ್ ಸಿನಿಮಾ. ರಾ ಅಂಡ್ ರಸ್ಟಿಕ್. ಕ್ಯಾರೆಕ್ಟರ್ ಬೇಸ್ಡ್ ಫಿಲ್ಮ್. ಬಿಹಾರ್, ಛತ್ತೀಸ್‌ಘಡ್, ಜಾರ್ಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳದಂತಹ ಏರಿಯಾಗಳಲ್ಲಿ ಜನರಿಗೆ ಈ ರೀತಿ ಮಾಸ್ ಕ್ಯಾರೆಕ್ಟರ್ ಬೇಸ್ಡ್ ಸಿನಿಮಾಗಳು ಇಷ್ಟ. ಅಲ್ಲಿನ ಜನರ ಜೀವನ ಶೈಲಿಗೆ ಹತ್ತಿರ ಇರುತ್ತೆ. ಮಾಸ್ ಪ್ರೇಕ್ಷಕರಿರುವ ರಾಜ್ಯಗಳು ಇವು. ಅದಕ್ಕೆ ಸಿನಿಮಾಗೆ ಭರ್ಜರಿ ಪ್ರತಿಕ್ರಿಯೆ ಸಿಕ್ತಿದೆ. ನಾರ್ತ್‌ನಲ್ಲಿ ಈ ಸಿನಿಮಾ ಹತ್ತು ರೂಪಾಯಿಗೆ ನೂರು ರೂಪಾಯಿ ಗಳಿಸಿರೋದು ವಿಶೇಷ.
ನಾರ್ತ್ ಇಂಡಿಯಾದಲ್ಲಿ ಓಡದಿದ್ರೆ, ಇದು ದೊಡ್ಡ ಡಿಜಾಸ್ಟರ್ ಲಿಸ್ಟ್ ಸೇರುತ್ತಿತ್ತು. ಆದ್ರೆ ಅಲ್ಲು ಅರ್ಜುನ್, ನಿರ್ದೇಶಕ ಸುಕುಮಾರ್ ಈ ವಿಷ್ಯ ಮೊದಲೇ ಊಹಿಸಿದದ್ದರು. ಅವರಿಗೋಸ್ಕರವೇ, ಅವರು ಕನೆಕ್ಟ್ ಆಗೋ ರೀತಿ ಆಕ್ಷನ್ ದೃಶ್ಯಗಳನ್ನಿಟ್ಟರು. ಹೀರೋ ಪಾತ್ರವನ್ನು ವಿನ್ಯಾಸಗೊಳಿಸಿದರು. ಅವರು ಅಂದುಕೊಂಡ ಟಾರ್ಗೆಟ್ ತಲುಪಿದ್ದಾರೆ. ಅಲ್ಲಿ `ಪುಷ್ಪ 2` ಭರ್ಜರಿಯಾಗಿ ಓಡ್ತಿದೆ ಅನ್ನೋದ್ರಲ್ಲಿ ಅತಿಶಯೋಕ್ತಿಯಿಲ್ಲ. ಆದರೆ ತೆಲುಗು ಮತ್ತು ಸೌತ್ ಪ್ರೇಕ್ಷಕರಿಗೆ ಇದು ಅಷ್ಟಾಗಿ ಇಷ್ಟ ಆಗಿಲ್ಲ ಅಂತ ಮಾಹಿತಿ ಇದೆ.