ಹಾಟ್‌ ಲುಕ್‌ನಿಂದ ಪಡ್ಡೆಹೈಕ್ಳ ಹೃದಯ 'ಕಬ್ಜ' ಮಾಡಿದ ಶ್ರಿಯಾ: ಮೊದ್ಲು ಎಸಿ ಆನ್‌ ಮಾಡ್ರಪ್ಪ ಎಂದ ಫ್ಯಾನ್ಸ್‌!

Published : Jan 19, 2024, 09:05 AM IST

ಬಹುಭಾಷಾ ನಟಿ ಎಂದೇ ಕರೆಸಿಕೊಳ್ಳುವ ದಕ್ಷಿಣ ಭಾರತದ ಪ್ರಮುಖ ನಟಿ ಶ್ರಿಯಾ ಶರಣ್‌. ಇವರು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಇನ್ನು ಈ ಸೌತ್‌ ಸುಂದರಿ ತೆಲುಗಿನ ಇಷ್ಟಮ್‌ ಸಿನಿಮಾದ ಮೂಲಕ ಸಿನಿರಂಗ ಪ್ರವೇಶಿಸಿದರು. ಇದೀಗ ಮಸ್ತ್​ ಫೋಟೋಶೂಟ್ ಮೂಲಕ ಮಿಂಚುತ್ತಿದ್ದಾರೆ.  

PREV
18
ಹಾಟ್‌ ಲುಕ್‌ನಿಂದ ಪಡ್ಡೆಹೈಕ್ಳ ಹೃದಯ 'ಕಬ್ಜ' ಮಾಡಿದ ಶ್ರಿಯಾ: ಮೊದ್ಲು ಎಸಿ ಆನ್‌ ಮಾಡ್ರಪ್ಪ ಎಂದ ಫ್ಯಾನ್ಸ್‌!

ಶ್ರಿಯಾ ತಮ್ಮ ಲುಕ್ ಅನ್ನು ಸಂಪೂರ್ಣವಾಗಿ ಬದಲಾಯಿಸಿಕೊಂಡಿದ್ದಾರೆ. ಇತ್ತೀಚೆಗೆ ಈ ನಟಿ ತನ್ನ ಸುಂದರ ಸೌಂದರ್ಯವನ್ನು ಪ್ರದರ್ಶಿಸುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಹಾಟ್ ಟಾಪಿಕ್ ಆಗಿದ್ದಾರೆ.

28

ಸುಮಾರು ಎರಡು ದಶಕಗಳಿಂದ ಬೆಳ್ಳಿತೆರೆಯನ್ನು ಆಳುತ್ತಿರುವ ಈ ಚೆಲುವೆ ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಆಕೆ ತನ್ನ ಪ್ರತಿ ಕ್ಷಣವನ್ನು ಕಾಲಕಾಲಕ್ಕೆ ತನ್ನ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.

38
Shriya Saran

ಹೌದು! 40 ವರ್ಷವಾದ್ರೂ ಸಖತ್ ಬೋಲ್ಡ್​ ಆಗಿ ಕ್ಯಾಮೆರಾ ಮುಂದೆ ಪೋಸ್ ಕೊಟ್ಟಿದ್ದಾರೆ. ಶ್ರಿಯಾ ಅವರನ್ನು ನೋಡಿದ ಫ್ಯಾನ್ಸ್‌ ಕ್ಲೀನ್ ಬೋಲ್ಡ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

48

ಬ್ಲ್ಯಾಕ್​ ಡ್ರೆಸ್​ನಲ್ಲಿ ಶ್ರಿಯಾ ಸಖತ್ ಸ್ಟೈಲಿಶ್​ ಆಗಿ ಕಾಣಿಸಿಕೊಂಡಿದ್ದು, ಈ ಮೂಲಕ ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ. ಸೋ ಬೋಲ್ಡ್, ಬ್ಯೂಟಿಫುಲ್, ಹಾಟ್, ನಿಮ್ಮನ್ನ ನೋಡಿ ಸುಸ್ತಾಯ್ತು ಎಂದು ಅಭಿಮಾನಿಗಳು ಕಾಮೆಂಟ್ ಮಾಡಿದ್ದಾರೆ.

58

ಬಹುಕೋಟಿ ವೆಚ್ಚದ ಬಹುನಿರೀಕ್ಷಿತ ಕಬ್ಜ ಸಿನಿಮಾದಲ್ಲಿ ನಟ ಉಪೇಂದ್ರ ಅವರಿಗೆ ನಾಯಕಿಯಾಗಿ ನಟಿ ಶ್ರಿಯಾ ಶರಣ್ ಅಭಿನಯಿಸಿದ್ರು. ಸಿನಿಮಾದಲ್ಲಿ ನಟಿಯ ಅಭಿಮಾನಯಕ್ಕೆ ಭಾರೀ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು.

68

ವಯಸ್ಸಿಗೆ ತಕ್ಕಂತೆ ಎಲ್ಲರ ಸೌಂದರ್ಯ ಕಡಿಮೆಯಾಗುತ್ತೆ. ಆದ್ರೆ ಶ್ರಿಯಾಗೆ ಇದು ರಿವರ್ಸ್‌ ಆಗಿದೆ. ನಟಿಯ ಗ್ಲಾಮರ್ ಕೂಡ ಹೆಚ್ಚುತ್ತಿದೆ. 40ರಲ್ಲೂ ಶ್ರೀಯಾ ಸಖತ್ ಬ್ಯೂಟಿಯಾಗಿದ್ದಾರೆ. ಮಗುವಿಗೆ ಜನ್ಮ ನೀಡಿದ ಮೇಲೂ ಅದೇ ಫಿಟ್​ನೆಸ್​ ಕಾಯ್ತುಕೊಂಡಿದ್ದಾರೆ.

 

78

ಬಹುಕಾಲ ಬೆಳ್ಳಿತೆರೆಯಲ್ಲಿ ಪ್ರೇಕ್ಷಕರನ್ನು ರಂಜಿಸಿರುವ ಶ್ರಿಯಾ ತಮ್ಮ ವೃತ್ತಿ ಜೀವನದಲ್ಲಿ ಹಲವು ಸೂಪರ್ ಡೂಪರ್ ಹಿಟ್ ಚಿತ್ರಗಳನ್ನು ಗಳಿಸಿದ್ದಾರೆ. ಇಂದಿನ ನಾಯಕಿಯರು ಪೈಪೋಟಿಗಿಳಿದು ಕ್ಯಾಮರಾ ಮುಂದೆ ತಮ್ಮ ಶಕ್ತಿ ತೋರಿಸುತ್ತಿದ್ದಾರೆ. 

88

ಎರಡನೇ ಇನ್ನಿಂಗ್ಸ್ ಆರಂಭಿಸಿದ ನಂತರ ಬ್ಯುಸಿ ಕಲಾವಿದೆಯಾಗಲು ಶ್ರಿಯಾ ಸಾಕಷ್ಟು ಪ್ರಯತ್ನ ಪಡುತ್ತಿದ್ದಾರೆ. ಶ್ರೀಯಾ ತನ್ನ ಪತಿ ಜೊತೆ ಸಾರ್ವಜನಿಕವಾಗಿ ರೊಮ್ಯಾಂಟಿಕ್ ಆಗಿದ್ದ ಅನೇಕ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.

Read more Photos on
click me!

Recommended Stories