'ಲಕ್ಷ್ಮಿ ನಿವಾಸ'ದಲ್ಲಿ ಗೌರಮ್ಮನಂತಿರೋ ದಿಶಾ ಮದನ್ ರಿಯಲ್‌ ಲೈಫ್‌ನಲ್ಲಿ ಸಖತ್‌ ಹಾಟ್‌!

Published : Jan 18, 2024, 01:49 PM ISTUpdated : Jan 18, 2024, 02:08 PM IST

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಭಾವನ ಪಾತ್ರದಲ್ಲಿ ನಟಿಸುತ್ತಿರುವ ದಿಶಾ ಮದನ್ ರಿಯಲ್ ಲೈಫ್‌ನಲ್ಲಿ ಸಖತ್ ಹಾಟ್‌. ಯಾವಾಗ್ಲೂ ಬೋಲ್ಡ್ ಡ್ರೆಸ್‌ನಲ್ಲಿ ಪೋಟೋಸ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ.

PREV
19
'ಲಕ್ಷ್ಮಿ ನಿವಾಸ'ದಲ್ಲಿ ಗೌರಮ್ಮನಂತಿರೋ ದಿಶಾ ಮದನ್ ರಿಯಲ್‌ ಲೈಫ್‌ನಲ್ಲಿ ಸಖತ್‌ ಹಾಟ್‌!

ದಿಶಾ ಮದನ್‌, ಸೀರಿಯಲ್‌ ಪ್ರಿಯರಿಗೆ ಪರಿಚಿತ ಹೆಸರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕುಲವಧು'ವಿನಲ್ಲಿ ವಚನಾ ಪಾತ್ರದ ಮೂಲಕ ದಿಶಾ ನಟನೆಯನ್ನು ಆರಂಭಿಸಿದ್ದರು. ಈ ಪಾತ್ರ ಅವರಿಗೆ ಹೆಚ್ಚು ಹೆಸರು ತಂದು ಕೊಟ್ಟಿತ್ತು. 

29

ಈಗ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಲಕ್ಷ್ಮಿ ನಿವಾಸ ಧಾರಾವಾಹಿಯಲ್ಲಿ ಭಾವನ ಪಾತ್ರದಲ್ಲಿ ದಿಶಾ ಮದನ್ ಕಾಣಿಸಿಕೊಳ್ಳುತ್ತಿದ್ದಾರೆ. 30 ವರ್ಷ ಆದರೂ ಮದುವೆಯಾಗದೆ ಅವಿವಾಹಿತೆಯಾಗಿ ಉಳಿದಿರುವ ಪಾತ್ರ ಇದಾಗಿದೆ.

39

ಸಾದಾ ಸೀರೆಯುಟ್ಟು ಸಿಂಪಲ್‌ ಲುಕ್‌ನಲ್ಲಿ ಈ ಧಾರಾವಾಹಿಯಲ್ಲಿ ದಿಶಾ ಮದನ್ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ರಿಯಲ್ ಲೈಫನ್‌ಲ್ಲಿ ದಿಶಾ ಮದನ್ ಸಿಕ್ಕಾಪಟ್ಟೆ ಹಾಟ್. ಯಾವಾಗ್ಲೂ ಬೋಲ್ಡ್ ಡ್ರೆಸ್‌ನಲ್ಲಿ ಪೋಟೋಸ್‌ಗಳನ್ನು ಶೇರ್ ಮಾಡುತ್ತಿರುತ್ತಾರೆ.

49

ಕುಲವಧು ಸೀರಿಯಲ್ ಪಾತ್ರದ ನಂತರ ಈಗ 10 ವರ್ಷಗಳ ನಂತರ ಮತ್ತೊಮ್ಮೆ ಕಿರುತೆರೆಗೆ ಕಾಲಿಡುತ್ತಿದ್ದು ಸೋಷಿಯಲ್ ಮೀಡಿಯಾದಲ್ಲಿ ಸಂತಸ ವ್ಯಕ್ತ ಪಡಿಸಿದ್ದಾರೆ. ಇವರ ಇನ್‌ಸ್ಟಾಗ್ರಾಂ ಖಾತೆ ಹಲವು ಬೋಲ್ಡ್‌ ಫೋಟೋಸ್ ಹಾಗೂ ಡ್ಯಾನ್ಸ್‌ ವೀಡಿಯೋಗಳನ್ನು ಒಳಗೊಂಡಿದೆ.

59

ಕುಲವಧು ಧಾರಾವಾಹಿಯಲ್ಲಿ ದಿಶಾ ಮದನ್ ಖಡಕ್ ವಿಲನ್ ವಚನಾ ಪಾತ್ರ ಮಾಡಿ ಸಾಕಷ್ಟು ಜನಪ್ರಿಯತೆ ಪಡೆದರು. ನಂತರ ರಿಯಾಲಿಟಿ ಶೋಗೆ ಕಾಲಿಟ್ಟರು.

69

ಕುಲವಧು ಧಾರಾವಾಹಿ ನಂತರ ಡ್ಯಾನ್ಸಿಂಗ್ ಸ್ಟಾರ್‌ನ ವಿನ್ನರ್ ಆದ ದಿಶಾ ಮದನ್. ಉದ್ಯಮಿ ಶಶಾಂಕ್‌ರನ್ನು ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇವರಿಗೆ ಪುತ್ರ ವಿಹಾನ್ ಮತ್ತು ಪುತ್ರಿ ಅವೀರಾ ಎಂಬ ಇಬ್ಬರು ಮಕ್ಕಳಿದ್ದಾರೆ..

79

ಇಬ್ಬರು ಮಕ್ಕಳು ಹುಟ್ಟಿದ ಮೇಲೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇಸ್ಮಾರ್ಟ್ ಜೋಡಿ ರಿಯಾಲಿಟಿ ಶೋನಲ್ಲಿ ಭಾಗಿಯಾಗಿದ್ದರು. ಈ ನಡುವೆ ಹಂಬಲ್‌ ಪೊಲಿಟೀಷಿಯನ್ ನೋಗರಾಜ್ ಸಿನಿಮಾದಲ್ಲಿ ನಟಿಸಿದ್ದಾರೆ ಹಾಗೂ ಫ್ರೆಂಚ್ ಬಿರಿಯಾನಿ ಓಟಿಟಿ ಸಿನಿಮಾದಲ್ಲೂ ನಟಿಸಿದ್ದಾರೆ.

89

'ಕಿರುತೆರೆ ನಟಿ ದಿಶಾ ಮದನ್ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ನಟಿಸುತ್ತಿರುವುದಾಗಿ ಬರೆದುಕೊಂಡಿದ್ದಾರೆ. ಹತ್ತು ವರ್ಷದ ಹಿಂದೆ ನಾನು ಮೊದಲ ಬಾರಿಗೆ ನಟಿಯಾಗಿ ಕಾಣಿಸಿಕೊಂಡಿದ್ದೆ. ಸಾಕಷ್ಟು ಪ್ರೀತಿಯನ್ನು, ಪ್ರೋತ್ಸಾಹವನ್ನು ನಾನು ವಚನಾ ಪಾತ್ರಕ್ಕಾಗಿ ಗಿಟ್ಟಿಸಿಕೊಂಡಿದ್ದೆ' ಎಂದಿದ್ದಾರೆ.

99

ಮಾತ್ರವಲ್ಲ, 'ಇದೀಗ ಹತ್ತು ವರ್ಷಗಳ ಬಳಿಕ ನಾನು ಮತ್ತೆ ನಿಮ್ಮ ಮುಂದೆ ಬರುತ್ತಿದ್ದೇನೆ. ಅದು ಭಾವನಾಳಾಗಿ. ಮತ್ತೆ ಕಂ ಬ್ಯಾಕ್ ಆಗುತ್ತಿರುವುದಕ್ಕೆ ಒಂದು ಕಡೆ ಖುಷಿಯಾಗುತ್ತಿದ್ದರೆ, ಇನ್ನೊಂದೆಡೆ ನರ್ವಸ್ ಕೂಡಾ ಆಗುತ್ತಿದೆ. ನಿಮ್ಮ ಪ್ರೀತಿ, ಪ್ರೋತ್ಸಾಹ ಸದಾ ಹೀಗಿರಲಿ' ಎಂದು ದಿಶಾ ಮದನ್ ಬರೆದುಕೊಂಡಿದ್ದಾರೆ . 

Read more Photos on
click me!

Recommended Stories