ಪ್ರಿಯಾಮಣಿ ಮತ್ತು ಅವರ ಪತಿ ಮುಸ್ತಫಾ ರಾಜ್ ನಡುವೆ ಬಿರುಕುಗಳಿವೆ ಎಂಬ ಸುದ್ದಿ ಕೇಳಿ ಬಂದಿತ್ತು. ಅವರು ಸ್ವಲ್ಪ ಸಮಯದವರೆಗೆ ಅಮೆರಿಕದಲ್ಲಿ ವಾಸಿಸುತ್ತಿದ್ದರು. ಈಗ ನಟಿ ಎಲ್ಲ ವದಂತಿಗೂ ಬ್ರೇಕ್ ಹಾಕಿದ್ದಾರೆ.
26
ಮುಸ್ತಫಾ ರಾಜ್‌ನ ಮೊದಲ ಪತ್ನಿ ತಾನು ಮತ್ತು ಮುಸ್ತಫಾ ಕಾನೂನುಬದ್ಧವಾಗಿ ವಿಚ್ಛೇದನ ಪಡೆದಿಲ್ಲ ಎಂದು ಹೇಳಿಕೊಂಡಿದ್ದರು. ಮುಸ್ತಫಾ ರಾಜ್ ತನ್ನ ಬಳಿಗೆ ಹಿಂತಿರುಗುವುದಾಗಿಯೂ ಹೇಳಿದ್ದರು.
36
ಆದರೆ ಈಗ ಎಲ್ಲ ವದಂತಿಗಳು ನೆಲ ಕಚ್ಚಿವೆ. ದೀಪಾವಳಿಯ ಸಂದರ್ಭದಲ್ಲಿ, ಪ್ರಿಯಾಮಣಿ ತನ್ನ ಪತಿಯ ಹೊಸ ಫೊಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಅವರು ತಮ್ಮ ಪತಿ ಮುಸ್ತೂಫಾ ರಾಜ್ ಅವರೊಂದಿಗೆ ತೆಗೆದ ಫೋಟೋ ಜೊತೆ ಎಲ್ಲರಿಗೂ ದೀಪಾವಳಿಯ ಶುಭಾಶಯಗಳನ್ನು ತಿಳಿಸಿದ್ದಾರೆ.
46
ಪತಿಯಿಂದ ಬೇರೆಯಾಗುವ ವದಂತಿಗಳಿಗೆ ಪ್ರಿಯಾಮಣಿ ತೆರೆ ಎಳೆದಿದ್ದಾರೆ. ಪ್ರಿಯಾಮಣಿ ಇತ್ತೀಚೆಗೆ ಹಿಂದಿ ವೆಬ್ ಡ್ರಾಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
56
ಅವರು ಇತ್ತೀಚೆಗೆ ವೆಂಕಟೇಶ್ ಅವರ ‘ನಾರಪ್ಪ’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ನಟಿಯ ಮುಂದಿನ ತೆಲುಗು ಸಿನಿಮಾ ಬಿಡುಗಡೆಯಾಗಲಿದೆ. ರಾಣಾ ಮತ್ತು ಸಾಯಿ ಪಲ್ಲವಿಯ 'ವಿರಾಟ ಪರ್ವಂ' ನಲ್ಲಿ ಪ್ರಿಯಾಮಣಿ ನಟಿಸಿದ್ದಾರೆ.
66
ಪ್ರಿಯಾಮಣಿ ಫ್ಯಾಮಿಲಿ ಮ್ಯಾನ್ ಸಿರೀಸ್‌ಗಳಲ್ಲಿ ನಟಿಸಿ ಭಾರೀ ಮೆಚ್ಚುಗೆ ಪಡೆದಿದ್ದಾರೆ. ವಿಮಾರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ ಸೌತ್ ನಟಿ