ಈ ಸಿನಿಮಾ ತುಂಬ ಇಷ್ಟ ಆಯ್ತಂತೆ. ಅದ್ರಲ್ಲೂ ಸಾವಿತ್ರಿ ಇನ್ನೂ ಇಷ್ಟ ಆದ್ರಂತೆ. ಆಗ ಸೌಂದರ್ಯಗೆ ಸಾವಿತ್ರಿ ಅಂತ ಗೊತ್ತಿರಲಿಲ್ಲ. ಆಮೇಲೆ ಅವ್ರ ಬಗ್ಗೆ ಹೇಳಿದ್ರಂತೆ. ಆದ್ರೆ ಅವ್ರ ನಟನೆಗೆ ಮನಸೋತಿದ್ರು. ಆಮೇಲೆ ಸಾವಿತ್ರಿ ನಟಿಸಿದ `ಗುಂಡಮ್ಮ ಕಥ`, `ಮಿಸ್ಸಮ್ಮ` ಸಿನಿಮಾಗಳನ್ನು ನೋಡಿದ್ರಂತೆ. ಅವ್ರು ಅಂದವಾಗಿದ್ರು, ಚಬ್ಬಿ ಆಗಿದ್ರು ಅಂತ ಮೆಚ್ಚಿಕೊಂಡ್ರಂತೆ. ಸಾವಿತ್ರಿ ತುಂಬಾ ಎಕ್ಸ್‌ಪ್ರೆಸ್ಸಿವ್ ಅಂತ, ಅವ್ರ ನಟನೆಗೆ ಮನಸೋತಿದ್ರಂತೆ.