ಸೌಂದರ್ಯ ಅವಾಗ ಯಂಗ್ ಹೀರೋಗಳಾದ ಮಹೇಶ್, ಪವನ್ ಜೊತೆ ಸಿನಿಮಾಗಳು ಮಿಸ್ ಆದ್ವು. ಡೇಟ್ಸ್ ಸೆಟ್ ಆಗದೆ, ಮಿಸ್ ಕಾಸ್ಟಿಂಗ್ ಅನ್ನೋ ಕಾರಣಕ್ಕೆ ಆಗಲಿಲ್ಲ. ಆದ್ರೆ ಉದಯ್ ಕಿರಣ್ ಜೊತೆ ಸೌಂದರ್ಯ ಸಿನಿಮಾ ಮಾಡಿದ್ರು. ಅದೇ `ನರ್ತನಶಾಲ`. ಬಾಲಕೃಷ್ಣ ಡೈರೆಕ್ಟರ್ ಆಗಿ ಮಾಡಿ ರಿಲೀಸ್ ಮಾಡಿದ ಸಿನಿಮಾ ಇದು. ಪೌರಾಣಿಕವಾಗಿ ತೆರೆಗೆ ತಂದ್ರು. ಪಾಂಡವರ ವನವಾಸ ಎಪಿಸೋಡ್‌ನ ಆಧಾರವಾಗಿ ಇಟ್ಕೊಂಡು ಈ ಮೂವಿನ ತೆರೆಗೆ ತಂದ್ರು ಬಾಲಯ್ಯ. ಈ ಮೂವಿ ಒಂದು, ಎರಡು ಶೆಡ್ಯೂಲ್ಸ್ ಕೂಡ ಕಂಪ್ಲೀಟ್ ಆಯ್ತು. ಆದ್ರೆ ಆ ಟೈಮ್‌ನಲ್ಲೇ ಸೌಂದರ್ಯ ಹೆಲಿಕಾಪ್ಟರ್ ಆಕ್ಸಿಡೆಂಟ್‌ನಲ್ಲಿ ತೀರಿಕೊಂಡ್ರು. ಇದರಿಂದ ಸಿನಿಮಾ ನಿಂತು ಹೋಯ್ತು.