ಸೋನಮ್ - ದೀಪಿಕಾ: ಸಿನಿಮಾಕ್ಕಾಗಿ ಕಾಲೇಜಿಗೆ ಗುಡ್‌ ಬೈ ಹೇಳಿದ ನಟಿಯರು!

First Published | Oct 21, 2020, 5:01 PM IST

ಕೆರಿಯರ್‌ ರೂಪಿಸಿಕೊಳ್ಳಲು ಹೆಚ್ಚು ಹೆಚ್ಚು ಶಿಕ್ಷಣ ಪಡೆಯುವುದು ಕೇಳಿದ್ದೇವೆ. ಆದರೆ ಕೆರಿಯರ್‌ಗಾಗಿ ತಮ್ಮ ಓದನ್ನು ನಿಲ್ಲಿಸಿದ್ದಾರೆ ಹಲವರು. ಇದಕ್ಕೆ ಬೆಸ್ಟ್‌ ಉದಾರಹಣೆ ಎಂದರೆ ಗ್ಲಾಮರ್‌ ವರ್ಲ್ಡ್‌. ಹೌದು ನಟನೆಗಾಗಿ ತಮ್ಮ ಶಿಕ್ಷಣವನ್ನು ಕೈಬಿಟ್ಟಿದ್ದಾರೆ ಬಾಲಿವುಡ್‌ನ ಟಾಪ್‌ ನಟಿಯರು. ದೀಪಿಕಾ, ಸೋನಂ, ಪ್ರಿಯಾಂಕಾ, ಐಶ್ವರ್ಯಾ ಮುಂತಾದ ಫೇಮಸ್‌ ಸ್ಟಾರ್‌ಗಳು ಪದವಿಯನ್ನು ಸಹ ಮುಗಿಸಿಲ್ಲ. ಇಲ್ಲಿದೆ ವಿವರ.

ಆಲಿಯಾ ಭಟ್: ಪ್ರಸ್ತುತ ಆಲಿಯಾ ಬಾಲಿವುಡ್‌ನ ಯಶಸ್ವಿ ಹಾಗೂ ಪ್ರತಿಭಾವಂತ ಯುವ ನಟಿಯರಲ್ಲಿ ಒಬ್ಬರು. ವರದಿಗಳ ಪ್ರಕಾರ, ಅವರು ಶಾಲಾ ಶಿಕ್ಷಣವನ್ನು ಮುಗಿಸಿದ ನಂತರ ಚಿತ್ರರಂಗಕ್ಕೆ ಸೇರಿದರು.ಸ್ಟೂಡೆಂಟ್‌ ಅಫ್‌ ದಿ ಇಯರ್‌ ಸಿನಿಮಾದ ನಂತರ ಬ್ಯುಸಿಯಾದ ಆಲಿಯಾಗೆ ಕಾಲೇಜಿಗೆ ಸಮಯ ಸಿಗಲಿಲ್ಲ.
ಪ್ರಿಯಾಂಕಾ ಚೋಪ್ರಾ: ಗ್ಲೋಬಲ್‌ ಸ್ಟಾರ್‌ ಪ್ರಿಯಾಂಕಾ ಕೂಡ ತನ್ನ ಪದವಿ ಮುಗಿಸಿಲ್ಲ. ಯುಎಸ್ಎ ಮತ್ತು ಭಾರತದಲ್ಲಿ ತನ್ನ ಶಾಲಾ ಶಿಕ್ಷಣವನ್ನು ಮಾಡಿದ ನಂತರ ಕ್ರಿಮಿನಲ್ ಸೈಕಾಲಜಿ ಓದಲು ಬಯಸಿ,ಮುಂಬೈನ ಜೈ ಹಿಂದ್ ಕಾಲೇಜಿಗೆ ಸೇರಿದರು. ಆದರೆ ಮಾಡೆಲಿಂಗ್ ಮತ್ತು ಬ್ಯೂಟಿ ಅಸೈನ್ಮಂಟ್‌ಗಳು ಸಿಗಲು ಪ್ರಾರಂಭಿಸಿದ ಕಾರಣ ಓದಿಗೆ ಬಾಯ್‌ ಹೇಳಿದರು.
Tap to resize

ಕರೀನಾ ಕಪೂರ್: ಲಾಯರ್‌ ಆಗಬೇಕು ಎಂಬ ಆಸೆ ಹೊಂದಿದ್ದ ಕರೀನಾ ಕಪೂರ್‌ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಸ್ಪಲ್ಪ ಕಾಲ ಓದಿದ್ದರು. ಆದರೆರೆಫ್ಯೂಜಿ ಸಿನಿಮಾ ಸಿಕ್ಕ ನಂತರ ಕಾಲೇಜಿನಿಂದ ಹೊರಬಂದರು.
ಐಶ್ವರ್ಯಾ ರೈ:ಮಾಜಿ ಮಿಸ್‌ ವರ್ಲ್ಡ್‌ ಐಶ್ವರ್ಯಾ ರೈ ಕೂಡ ಕಾಲೇಜು ಡ್ರಾಪ್ಔಟ್. ಒಂದು ವರ್ಷ ಜೈ ಹಿಂದ್ ಕಾಲೇಜಿಗೆ ಹೋದ ನಂತರ ವಾಸ್ತುಶಿಲ್ಪವನ್ನು ಮುಂದುವರಿಸಲು ಬೇರೆ ಕಾಲೇಜಿಗೆ ಸೇರಿದ್ದರು. ಆದರೆ ಆಕೆಗೆ ಅನೇಕ ಟಾಪ್‌ ಲೆವೆಲ್‌ನ ಮಾಡೆಲಿಂಗ್ ಪ್ರಾಜೆಕ್ಟ್‌ ಹಾಗೂ ಸಿನಿಮಾಗಳು ಬರಲು ಶುರುವಾದ ಕಾರಣ ಬಾಲಿವುಡ್‌ಗೆ ಸೇರಲು ತಮ್ಮ ಶಿಕ್ಷಣವನ್ನುಅರ್ಧಕ್ಕೇ ನಿಲ್ಲಿಸಿಬಿಟ್ಟರು.
ದೀಪಿಕಾ ಪಡುಕೋಣೆ:ಬಾಲಿವುಡ್‌ನ ಅತಿ ಹೆಚ್ಚು ಸಂಭಾವನೆ ಗಳಿಸುವ ನಟಿಯರಲ್ಲಿ ಒಬ್ಬರಾಗಿರುವ ದೀಪಿಕಾ ಗ್ಲಾಮರ್‌ ವರ್ಲ್ಡ್‌ಗಾಗಿ ತಮ್ಮ ಓದನ್ನು ಕೈ ಬಿಟ್ಟರು. ಬೆಂಗಳೂರಿನ ಮೌಂಟ್‌ ಕಾರ್ಮೆಲ್‌ ಕಾಲೇಜು ಸೇರಿದ ದೀಪಿಕಾ ಡಿಗ್ರಿ ಮುಗಿಸಲಿಲ್ಲ, ಹೆಚ್ಚಿನ ಅಧ್ಯಯನಕ್ಕಾಗಿ IGNOUನಲ್ಲಿ ಶಾರ್ಟ್ ‌ಟರ್ಮ್‌ಕೋರ್ಸ್‌ಗೆ ಸೇರಿಕೊಂಡರು. ಆದರೆ ಅದನ್ನೂ ಮುಗಿಸಲು ಸಾಧ್ಯವಾಗಲಿಲ್ಲ.
ಕಂಗನಾ ರಣಾವತ್:ಒಮ್ಮೆ ಡಾಕ್ಟರ್‌ ಆಗಬೇಕು ಎಂಬ ಕನಸನ್ನು ಹೊಂದಿದ್ದ ಕಂಗನಾ ಪರೀಕ್ಷೆಯಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ ನಂತರ, ಮಾಡೆಲಿಂಗ್ ಕಡೆಗೆ ತಿರುಗಿದರು ಮತ್ತು ನಂತರನಟನೆ ಕಡೆಗೆ.
ಕತ್ರಿನಾ ಕೈಫ್: ಕತ್ರಿನಾಳ ಪೋಷಕರು ಬಾಲ್ಯದಲ್ಲಿ ಬೇರೆಯಾಗಿದ್ದರು. ತಾಯಿ ಜೊತೆ ಇದ್ದರು ಕತ್ರಿನಾ. ಜೀವನವನ್ನು ಸಾಮಾಜಿಕ ಸೇವೆಗಳಿಗೆ ಮೀಸಲಿಟ್ಟ ತಾಯಿ ಅನೇಕ ದೇಶಗಳಿಗೆ ಸ್ಥಳಾಂತರಗೊಳ್ಳಬೇಕಾಯಿತು. ಇದರಿಂದಾಗಿ ಕ್ಯಾಟ್‌ ಹೋಮ್‌ ಟ್ಯೂಶನ್‌ ತೆಗೆದುಕೊಳ್ಳುತ್ತಿದ್ದರು.
ಕಾಜೋಲ್:ಫೇಮಸ್‌ ಸ್ಟಾರ್‌ ಕಾಜೋಲ್‌ ಬೆಕೂದಿ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಾಗ ಕೇವಲ 16 ವರ್ಷ. ನಂತರ ಸಿನಿಮಾಗಳಲ್ಲಿ ಬ್ಯೂಸಿ ಆದ ಅವರಿಗೆ ಶಿಕ್ಷಣವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ.
ಸೋನಮ್ ಕಪೂರ್: ಬಾಲಿವುಡ್‌ನಲ್ಲಿ ಯಶಸ್ವಿ ನಟಿಯಾಗಿ ತನ್ನನ್ನು ತಾನು ಸ್ಥಾಪಿಸಿಕೊಳ್ಳಲು ಸೋನಮ್ ಕಪೂರ್ ಸ್ವಲ್ಪ ಸಮಯ ತೆಗೆದುಕೊಂಡರು. ಆದರೆ ಇವರು ಡ್ರಾಪ್ಔಟ್. ಸಂದರ್ಶನವೊಂದರಲ್ಲಿ ಅವರು ಇದನ್ನು ಒಪ್ಪಿಕೊಂಡಿದ್ದಾರೆ. ಮತ್ತು ತನ್ನ ಪದವಿ ಪೂರ್ಣಗೊಳಿಸದ ನಿರ್ಧಾರಕ್ಕೆ ವಿಷಾದಿಸುತ್ತೇನೆ ಎಂದು ಹೇಳಿದರು.

Latest Videos

click me!