ಸೋನಮ್ ಕಪೂರ್ ಬೇಬಿ ಶವರ್‌ನಲ್ಲಿ ಸಂಗೀತಗಾರ ಲಿಯೋ ಕಲ್ಯಾಣ್ ಲುಕ್ ಟ್ರೋಲ್!
First Published | Jun 16, 2022, 9:07 PM ISTಸೋನಂ ಕಪೂರ್ (Sonam kapoor) ತಮ್ಮ ಪ್ರೆಗ್ನೆಂಸಿಯ ಮೂರನೇ ತ್ರೈಮಾಸಿಕವನ್ನು ಆನಂದಿಸುತ್ತಿದ್ದಾರೆ. ಇತ್ತೀಚೆಗೆ ಅವರ ಬೇಬಿ ಶವರ್ ಲಂಡನ್‌ನಲ್ಲಿ ನಡೆಯಿತು, ಇದರಲ್ಲಿ ಬ್ರಿಟಿಷ್-ಪಾಕಿಸ್ತಾನಿ ಸಲಿಂಗಕಾಮಿ ಗಾಯಕ, ಗೀತರಚನೆಕಾರ, ಮಾಡೆಲ್ ಮತ್ತು ಸಂಗೀತ ಸಂಯೋಜಕ ಲಿಯೋ ಕಲ್ಯಾಣ್ (Leo Kalyan) ಸಹ ವಿಶೇಷ ಅತಿಥಿಯಾಗಿ ಹಾಜರಿದ್ದರು. ಅವರು ಸೋನಂ ಬೇಬಿ ಶವರ್ ಸಮಯದಲ್ಲಿ 'ಮಸಕಲಿ' ಹಾಡನ್ನು ಪಾರ್ಫಾಮ್ ಮಾಡಿದರು. ಆದರೆ ಸೋನಂ ಕಪೂರ್ ಜೊತೆಗಿನ ಅವರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಜನರು ಅವರನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು.