ಒಂದು ಕಡೆ ಸೋನಾಕ್ಷಿ ಸಿನ್ಹಾ ವಿಭಿನ್ನವಾಗಿ ಕಾಣಿಸಿಕೊಂಡಿರುವ 'ಭುಜ್: ದ ಪ್ರೈಡ್ ಆಫ್ ಇಂಡಿಯಾ'ದ ಪೋಸ್ಟರ್ ರಿಲೀಸ್ ಆಗಿದೆ. ಆದರೆ ಸೋಶಿಯಲ್ ಮೀಡಿಯಾ ಮಾತ್ರ ಭಿನ್ನವಾಗಿಯೇ ಕಮೆಂಟ್ ಮಾಡಿದೆ. ಸಿನಿಮಾ ಬಹಿಷ್ಕರಿಸಬೇಕು ಎಂದು ಒಂದಿಷ್ಟು ಜನರು ಹೇಳಿದ್ದು ಕಾರಣವನ್ನು ಕೊಟ್ಟಿದ್ದಾರೆ. ಪೋಸ್ಟರ್ ಬಿಡುಗಡೆಯಾದ ತಕ್ಷಣವಣೇ ಸೋನಾಕ್ಷಿ ಅವರನ್ನು ಟ್ರೋಲ್ ಮಾಡಲು ಆರಂಭಿಸಿದ್ದಾರೆ. ಕಳೆದ ವರ್ಷ ಶೋ ಒಂದರಲ್ಲಿ ಸೋನಾಕ್ಷಿ ರಾಮಾಯಣಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರ ನೀಡಲು ವಿಫಲರಾಗಿದ್ದರು. ಇದೇ ಕಾರಣ ಇಟ್ಟುಕೊಂಡು ಟ್ರೋಲ್ ಮಾಡಲಾಗಿದೆ. ಸೋನಾಕ್ಷಿಯೊಂದಿಗೆ ಆ ಸಂದರ್ಭದಲ್ಲಿ ಆಲಿಯಾ ಭಟ್ ಮತ್ತು ಸೋನಂ ಕಪೂರ್ ಇದ್ದರು. ಇದೀಗ ಸುಶಾಂತ್ ಸಿಂಗ್ ಸಾವನ್ನು ಇದೆಲ್ಲದಕ್ಕೆ ಥಳುಕು ಹಾಕಿ ಸಿನಿಮಾ ಬಹಿಷ್ಕಾರ ಮಾಡಿ ಎಂದು ಕಮೆಂಟ್ ಹಾಕಲಾಗುತ್ತಿದೆ. ಇಲ್ಲಿಯೂ nepotism ಮಾತು ಬಂದಿದ್ದು ನಾನು ವೀಕ್ಷಣೆ ಮಾಡಲ್ಲ ನೀವು ಮಾಕಡಬೇಡಿ ಎಂದು ನೆಟ್ಟಿಗರು ಹೇಳಿದ್ದಾರೆ. ನೆಗೆಟಿವ್ ಕಮೆಂಟ್ ತಾಳಲಾರದೆ ಕಳೆದ ತಿಂಗಳು ಸೋನಾಕ್ಷಿ ತಮ್ಮ ಟ್ವಿಟರ್ ಖಾತೆ ಡಿಲೀಟ್ ಮಾಡಿದ್ದರು. ಅಜಯ್ ದೇವಗನ್ ಹಾಗೂ ಸಂಜಯ್ ದತ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋನಾಕ್ಷಿ ಸುಂದರ್ಬೆನ್ ಜೆಠಾ ಮಧಾರ್ಪಾರ್ಯ್ ಎಂಬ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. 1971ರಲ್ಲಿ ಭಾರತ ಹಾಗೂ ಪಾಕಿಸ್ತಾನದ ನಡುವೆ ಆದ ಯುದ್ಧದ ಕುರಿತಾಗಿನ ಕತೆ ಇದರಲ್ಲಿದೆ ಎನ್ನಲಾಗಿದೆ. ಸತ್ಯ ಘಟನೆಯಾಧಾರಿತ ಚಿತ್ರ ಭುಜ್, ಆಗಸ್ಟ್ 14ಕ್ಕೆ ಡಿಸ್ನಿ ಪ್ಲಸ್ ಹಾಟ್ಸ್ಟಾರ್ನಲ್ಲಿ ರಿಲೀಸ್ ಆಗಲಿದೆ. ಸೋನಾಕ್ಷಿ ಸಿನಿಮಾಕ್ಕೆ Nepotism ಕಾಟ, ಬಾಯ್ಕಾಟ್ ಮಾಡಿ ಎಂದ ಜನ Actress Sonakshi Sinha, along with Alia Bhatt and Sonam Kapoor, has been facing a volley of criticism