Published : Feb 26, 2025, 08:27 PM ISTUpdated : Feb 26, 2025, 08:59 PM IST
Sobhita Dhulipala Insta Story about Naga Chaitanya Playing DJ : ನಾಗ ಚೈತನ್ಯ ಡಿಜೆ ಪ್ಲೇ ಮಾಡುವ ಫೋಟೋವನ್ನು ಶೋಭಿತಾ ದುಲಿಪಾಲಾ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.
2024ರ ಡಿಸೆಂಬರ್‌ನಲ್ಲಿ ನಟ ನಾಗ ಚೈತನ್ಯ ಮತ್ತು ನಟಿ ಶೋಭಿತಾ ದುಲಿಪಾಲಾ ಮದುವೆ ಆಗಿತ್ತು. ಎರಡನೇ ಮದುವೆಯ ನಂತರ ನಾಗ ಚೈತನ್ಯ ನಟನೆತ ತಾಂಡೇಲ್ ಸಿನಿಮಾ ಬಿಡುಗಡೆಯಾಗಿ ಒಳ್ಳೆಯ ಮೆಚ್ಚುಗೆಯನ್ನು ಪಡೆದುಕೊಂಡಿದೆ. ಚಂದು ಮೊಂಟೇಟಿ ನಿರ್ದೇಶನದಲ್ಲಿ ನಾಗ ಚೈತನ್ಯ ಮತ್ತು ಸಾಯಿ ಪಲ್ಲವಿ ಅಭಿನಯದ ತಾಂಡೇಲ್ ಸಿನಿಮಾ ಕಳೆದ 7ರಂದು ಬಿಡುಗಡೆಯಾಯಿತು. ಸಂಪೂರ್ಣವಾಗಿ ಪ್ರೀತಿ ಮತ್ತು ಮೀನುಗಾರರ ಬಗ್ಗೆ ತೆಗೆದ ಈ ಸಿನಿಮಾ ನಾಗ ಚೈತನ್ಯ ಅವರ ಸಿನಿಮಾ ಜೀವನದಲ್ಲಿ ಒಂದು ತಿರುವು ನೀಡಿತು.
25
ನಾಗ ಚೈತನ್ಯ ಅವರ ಪ್ರತಿಭೆ ಬಹಿರಂಗಪಡಿಸಿದ ಶೋಭಿತಾ!
ಇಲ್ಲಿಯವರೆಗೆ ತಾಂಡೇಲ್ ಸಿನಿಮಾ 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಹೊಸ ದಾಖಲೆ ಬರೆದಿದೆ. ಈ ಸಿನಿಮಾದಲ್ಲಿನ ಓಂ ನಮಃ ಶಿವಾಯ ಹಾಡು ಅಭಿಮಾನಿಗಳಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ನಾಗ ಚೈತನ್ಯ ಅವರ ಈ ಯಶಸ್ಸಿಗೆ ಎಲ್ಲರೂ ಶೋಭಿತಾ ದುಲಿಪಾಲಾ ಬಂದ ಸಮಯ ಮತ್ತು ಅವರ ಕಾಲ್ಗುಣ ಎಂದು ಹೇಳುತ್ತಿದ್ದಾರೆ. ನಾಗಾರ್ಜುನ ಕೂಡ ಒಂದು ವೇದಿಕೆಯಲ್ಲಿ ತಮ್ಮ ಸೊಸೆ ಬಂದ ಸಮಯ ಇದು ಅದೃಷ್ಟ ಎಂದು ಹೇಳಿದ್ದರು.
35
ನಾಗ ಚೈತನ್ಯ ಅವರ ಪ್ರತಿಭೆ ಬಹಿರಂಗಪಡಿಸಿದ ಶೋಭಿತಾ!
ಈ ಹಿನ್ನೆಲೆಯಲ್ಲಿ ಶೋಭಿತಾ ದುಲಿಪಾಲಾ ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ನಾಗ ಚೈತನ್ಯ ಡಿಜೆ ಪ್ಲೇ ಮಾಡುವಂತಹ ಒಂದು ಫೋಟೋವನ್ನು ಹಾಕಿದ್ದಾರೆ. ಶೋಭಿತಾ ದುಲಿಪಾಲಾ ಹಂಚಿಕೊಂಡಿರುವ ಆ ಫೋಟೋದಲ್ಲಿ ನಾಗ ಚೈತನ್ಯ ಸ್ವೆಟರ್ ಹಾಕಿಕೊಂಡು ಕತ್ತಿಗೆ ಹೆಡ್‌ಫೋನ್ ಹಾಕಿಕೊಂಡು ಡಿಜೆ ಆಗಿ ಬದಲಾಗಿ ಪರಿಸ್ಥಿತಿಗೆ ತಕ್ಕಂತೆ ಹಾಡು ಪ್ಲೇ ಮಾಡ್ತಿದ್ದಾರೆ. ಈ ಫೋಟೋ ಈಗ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.
45
ನಟ ನಾಗಚೈತನ್ಯ ಓರ್ವ ಒಳ್ಳೆಯ ಡಿಜೆ ಕಲಾವಿದ ಎಂಬ ವಿಷಯ ಬಹುತೇಕ ಮಂದಿಗೆ ಗೊತ್ತಿರಲಿಲ್ಲ. ಇದೀಗ ಎರಡನೇ ಪತ್ನಿ ಶೋಭಿತಾ ಅವರಿಂದ ನಾಗ ಚೈತನ್ಯ ಅವರ ಟ್ಯಾಲೆಂಟ್ ಜನತೆಗೆ ಗೊತ್ತಾಗಿದೆ.
55
ಈ ಮೊದಲು ನಟಿ ಸಮಂತಾ ರುಥ್ ಪ್ರಭು ಅವರನ್ನು ನಾಗಚೈತನ್ಯ ಮದುವೆಯಾಗಿದ್ದರು. ಮದುವೆಯಾದ ನಾಲ್ಕು ವರ್ಷಕ್ಕೆ ಇಬ್ಬರು ಪರಸ್ಪರ ಒಪ್ಪಿಗೆ ಮೇರೆ ಡಿವೋರ್ಸ್ ಪಡೆದುಕೊಂಡು ಬೇರೆಯಾಗಿದ್ದರು.