ಬಾತ್ ರೂಮಲ್ಲಿ ಚಿತ್ರಕ್ಕೆ ಮೇಕಪ್ ಮಾಡಿಸಿಕೊಂಡಿದ್ರಂತೆ ಸ್ಮಿತಾ ಪಾಟೀಲ್

Published : Oct 17, 2022, 06:00 PM IST

ಇಂದು ಮೊಸ್ಟ್‌ ಟ್ಯಾಲೆಂಟೆಡ್‌ ನಟಿಯರಲ್ಲಿ ಒಬ್ಬರಾದ ಸ್ಮಿತಾ ಪಾಟೀಲ್ (Smita Patil)  ಹುಟ್ಟುಹಬ್ಬ.  ಅಕ್ಟೋಬರ್ 17, 1955 ರಂದು ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದ ಸ್ಮಿತಾ ಪಾಟೀಲ್ ಅವರ ಚಲನಚಿತ್ರ ಪ್ರಯಾಣ ತುಂಬಾ ಚಿಕ್ಕದಾದರೂ, ಅವರು ತಮ್ಮ ವೃತ್ತಿ ಜೀವನದಲ್ಲಿ (Career) ಸದಾ ನೆನನಪಿನಲ್ಲಿರುವ ಕೆಲಸ ಮಾಡಿದರು. ಸ್ಮಿತಾ ಅವರ ತಂದೆ  ಶಿವಾಜಿರಾವ್ ಗಿರ್ಧರ್ ಪಾಟೀಲ್ ಪ್ರಸಿದ್ಧ ರಾಜಕಾರಣಿ (Politician), ಅವರ ತಾಯಿ ವಿದ್ಯಾತಾಯಿ ಪಾಟೀಲ್ ಸಮಾಜ ಸೇವಕಿ. ಸ್ಮಿತಾ ಸಾಮರ್ಥ್ಯದ ಆಧಾರದ ಮೇಲೆ ಚಿತ್ರಗಳಲ್ಲಿ ಅವಕಾಶ ಪಡೆದರು. 

PREV
18
 ಬಾತ್ ರೂಮಲ್ಲಿ ಚಿತ್ರಕ್ಕೆ ಮೇಕಪ್ ಮಾಡಿಸಿಕೊಂಡಿದ್ರಂತೆ  ಸ್ಮಿತಾ ಪಾಟೀಲ್

ಸ್ಮಿತಾ ಫಿಲ್ಮ್ ಅಂಡ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದಿಂದ (ಪುಣೆ) ಕೋರ್ಸ್ ಮುಗಿಸಿದ ನಂತರ ದೂರದರ್ಶನದಲ್ಲಿ ಸುದ್ದಿ  ವಾಚಕಿಯಾಗಿ ಕೆಲಸ ಮಾಡುತ್ತಿದ್ದರು.

 

28

ಈ ಸಮಯದಲ್ಲಿ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಶ್ಯಾಮ್ ಬೆನಗಲ್ ಅವರು ಸುದ್ದಿ ಓದುವುದನ್ನು ನೋಡಿದರು. ಇದಾದ ನಂತರ ಅವರಿಗೆ 'ಚರಂದಾಸ್ ಚೋರ್' ಮತ್ತು 'ನಿಶಾಂತ್'  ಚಿತ್ರಗಳಲ್ಲಿ ನಟಿಸುವ ಆಫರ್ ಬಂದಿತ್ತು. 

38

ಸ್ಮಿತಾ ಪಾಟೀಲ್ ಸಾಕಷ್ಟು ಯೋಚಿಸಿದ ನಂತರ ತನಗೆ ಬಂದ ಆಫರ್‌ಗಳಿಗೆ ಸಹಿ ಹಾಕಿದ್ದರು. ಸ್ಮಿತಾ ಪಾಟೀಲ್ ಡೌನ್ ಟು ಅರ್ಥ್ ನಟಿ. ಅವರು ಯಾವುದೇ ವಿಶೇಷ ಬೇಡಿಕೆಗಳನ್ನು ಎಂದಿಗೂ ಮಾಡಲಿಲ್ಲ.

48

ಅವರ ಮೇಕಪ್ ಕಲಾವಿದ ದೀಪಕ್ ಸಾವಂತ್ ಒಮ್ಮೆ ಅವರು ಸ್ಮಿತಾ ಪಾಟೀಲ್ ಅವರ ಮೊದಲ ಮೇಕ್ಅಪ್ ಅನ್ನು ಸ್ನಾನಗೃಹದಲ್ಲಿ ಮಾಡಿದರು ಎಂದು ಹೇಳಿದ್ದರು.

58

ದೀಪಕ್ ಪ್ರಕಾರ, 1982 ರಲ್ಲಿ, ಒರಿಸ್ಸಾದ ಕಟಕ್‌ನಲ್ಲಿ 'ಭೀಗಿ ಪಾಲ್ಕೆನ್' ಚಿತ್ರದ ಶೂಟಿಂಗ್ ನಡೆಯುತ್ತಿತ್ತು. ಈ ಹಿಂದೆ ಸ್ಮಿತಾ ಪಾಟೀಲ್ ಅವರು ಮೇಕಪ್ ಇಲ್ಲದೆ ಶೂಟಿಂಗ್ ಮಾಡುತ್ತಿದ್ದಾಗ, ಅವರು ಈ ಚಿತ್ರಕ್ಕೆ ಮೇಕಪ್ ಮಾಡಬೇಕೇ ಅಥವಾ ಬೇಡವೇ ಎಂದು ದೀಪಕ್ ಸಾವಂತ್ ಅವರನ್ನು ಸಂಪರ್ಕಿಸಿದರು.

68

 ಕಲಾತ್ಮಕ ಚಿತ್ರಗಳಲ್ಲಿ ಮೇಕಪ್ ಮಾಡದಿದ್ದರೂ ಪರವಾಗಿಲ್ಲ, ಆದರೆ ಇದು ಕಮರ್ಷಿಯಲ್ ಸಿನಿಮಾ, ಅದರಲ್ಲಿ ಮೇಕಪ್ ಮಾಡಿದರೆ ಉತ್ತಮ ಎಂದು ದೀಪಕ್‌ ನಟಿಗೆ ಹೇಳಿದರು.


 

78

ಶೂಟಿಂಗ್ ನಡೆಯುತ್ತಿರುವ ಒರಿಸ್ಸಾದ ಸೆಟ್‌ನಲ್ಲಿ ತುಂಬಾ ಕಡಿಮೆ ಬೆಳಕು ಇತ್ತು. ಅಲ್ಲಿ ಮೇಕಪ್‌ ಮಾಡುವುದು ಸಾಧ್ಯವಿರಲಿಲ್ಲ. ಇದರಿಂದಾಗಿ ಬಾತ್ ರೂಂನಲ್ಲಿ ಟ್ಯೂಬ್ಲೈಟ್ ಬೆಳಕಿನಲ್ಲಿ ಸ್ಮಿತಾಗೆ ಮೊದಲ ಮೇಕಪ್ ಮಾಡಿದರು ದೀಪಕ್‌ ಹೇಳಿದ್ದಾರೆ.

88

ಬಾತ್ ರೂಂನಲ್ಲಿ ಟ್ಯೂಬ್ ಲೈಟ್ ಇರುವುದನ್ನು ನೋಡಿರುವುದಾಗಿ ದೀಪಕ್ ಹೇಳಿದಾಗ. ಸ್ಮಿತಾ ಅಲ್ಲಿ ಮೇಕಪ್  ಮಾಡಲು ಒಪ್ಪಿಕೊಂಡರು. ಇದರ ನಂತರ, ಬಾತ್‌ರೂಮ್‌ನಲ್ಲಿದ್ದ ಬೇಸಿನ್‌ ಮೇಲೆ ಪ್ಲೈವುಡ್ ಇಟ್ಟು ಸ್ಮಿತಾ ಮತ್ತೆ ಅದರ ಮೇಲೆ ಕುಳಿತು ಮೇಕಪ್ ಮಾಡಿಸಿಕೊಂಡರು. 

Read more Photos on
click me!

Recommended Stories