ಬಾಕ್ಸಾಫೀಸ್‌ನಲ್ಲಿ ಸಿನಿಮಾ ಫ್ಲಾಫ್: ಆದರೆ.. ಅಪ್ಪನ ಈ ಸಿನಿಮಾವೇ ನನಗೆ ತುಂಬಾ ಇಷ್ಟ ಎಂದ ಮಹೇಶ್ ಬಾಬು ಪುತ್ರಿ!

Published : Sep 26, 2024, 05:06 PM IST

ಏನೋ ಗೊತ್ತಿಲ್ಲ, ಆದರೆ ಇತ್ತೀಚೆಗೆ ಫ್ಲಾಪ್ ಸಿನಿಮಾಗಳಿಗೆ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ. ಕೆಲವು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತಿವೆ ಆದರೆ ಅವುಗಳನ್ನು ಕ್ಲಾಸಿಕ್ ಎಂದು ಕರೆಯಲಾಗುತ್ತಿದೆ. ಅಂತಹ ಚಿತ್ರಗಳಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ನಟಿಸಿದ ಕೆಲವು ಸಿನಿಮಾಗಳಿವೆ. ಮಹೇಶ್ ಪುತ್ರಿ ಸಿತಾರಾ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನ್ ಆಗಿದ್ದಾರೆ.

PREV
15
ಬಾಕ್ಸಾಫೀಸ್‌ನಲ್ಲಿ ಸಿನಿಮಾ ಫ್ಲಾಫ್: ಆದರೆ.. ಅಪ್ಪನ ಈ ಸಿನಿಮಾವೇ ನನಗೆ ತುಂಬಾ ಇಷ್ಟ ಎಂದ ಮಹೇಶ್ ಬಾಬು ಪುತ್ರಿ!

ಇತ್ತೀಚೆಗೆ ಫ್ಲಾಪ್ ಸಿನಿಮಾಗಳಿಗೆ ಅಭಿಮಾನಿಗಳು ಹೆಚ್ಚಾಗುತ್ತಿದ್ದಾರೆ. ಕೆಲವು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸೋತಿವೆ ಆದರೆ ಅವುಗಳನ್ನು ಕ್ಲಾಸಿಕ್ ಎಂದು ಕರೆಯಲಾಗುತ್ತಿದೆ. ಅಂತಹ ಚಿತ್ರಗಳಲ್ಲಿ ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ನಟಿಸಿದ ಕೆಲವು ಸಿನಿಮಾಗಳಿವೆ. ಮಹೇಶ್ ಪುತ್ರಿ ಸಿತಾರಾ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನ್ ಆಗಿದ್ದಾರೆ. ಮಾತನಾಡುವ ರೀತಿ, ಕ್ಯೂಟ್‌ನೆಸ್, ಡ್ಯಾನ್ಸ್ ಕೌಶಲ್ಯದಿಂದ ಸಿತಾರಾ ಅಭಿಮಾನಿಗಳಿಗೆ ಬಹಳ ಇಷ್ಟವಾಗಿದ್ದಾರೆ. 

25

ಸಿತಾರಾ ಅವರು ಬ್ರಾಂಡ್ ಅಂಬಾಸಿಡರ್ ಆಗಿ ಆಭರಣ ಕಂಪನಿಯೊಂದನ್ನು ಪ್ರಚಾರ ಮಾಡಿದ್ದಾರೆ ಎಂಬುದು ತಿಳಿದೇ ಇದೆ. ಇಂಡಸ್ಟ್ರಿಯಲ್ಲಿ ನಟಿಯಾಗಲು ಸಿತಾರಾ ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾಗಳ ಬಗ್ಗೆ ಅರಿವು ಮೂಡಿಸಿಕೊಳ್ಳುತ್ತಿದ್ದಾರೆ. ತನ್ನ ತಂದೆ ಮಹೇಶ್ ಬಾಬು ನಟಿಸಿದ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರಂತೆ. 

 

35

ಮಹೇಶ್ ಬಾಬು ನಟಿಸಿದ ಚಿತ್ರಗಳಲ್ಲಿ ತನಗೆ ಬಹಳ ಇಷ್ಟವಾದ ಚಿತ್ರ ಖಲೇಜಾ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ. ಸಿತಾರಾ ಮಾತು ಕೇಳಿ ನಿರೂಪಕಿ ಕೂಡ ಆಶ್ಚರ್ಯಚಕಿತರಾದರು. ಸಾಮಾನ್ಯವಾಗಿ ಖಲೇಜಾ ಬಗ್ಗೆ ಹೇಳಬೇಕೆಂದರೆ ಯಾರಾದರೂ ಸ್ವಲ್ಪ ಯೋಚಿಸುತ್ತಾರೆ. ಆದರೆ ನೀವು ಅದೇ ಬೆಸ್ಟ್ ಸಿನಿಮಾ ಅಂತ ಹೇಳ್ತಿದ್ದೀರಲ್ಲ ಯಾಕೆ ಅಂತ ಕೇಳಿದ್ದಕ್ಕೆ, ಅದರಲ್ಲಿ ಅಪ್ಪನ ಸೀತಾರಾಮರಾಜು ಪಾತ್ರ ಐಕಾನಿಕ್ ಅಂತ ಸಿತಾರಾ ಹೇಳಿದ್ದಾರೆ. 

45

ಆ ಸಿನಿಮಾ ಅಂದ್ರೆ ನನಗೆ ತುಂಬಾ ಇಷ್ಟ. ಅಪ್ಪನ ಸಿನಿಮಾಗಳಲ್ಲೇ ಖಲೇಜಾ ದಿ ಬೆಸ್ಟ್ ಮೂವಿ ಅಂತ ಸಿತಾರಾ ಹೇಳಿದ್ದಾರೆ. ಅಪ್ಪನ ಪಾತ್ರ ಮಾತ್ರವಲ್ಲ. ಆ ಚಿತ್ರದಲ್ಲಿ ಎಲ್ಲವೂ ನನಗೆ ಇಷ್ಟ ಅಂತ ಸಿತಾರಾ ಹೇಳಿದ್ದಾರೆ. 

55

ತ್ರಿವಿಕ್ರಮ್, ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಮೂಡಿಬಂದ ಖಲೇಜಾ ಚಿತ್ರ ಡಿಸಾಸ್ಟರ್ ಆಗಿತ್ತು. ಆದರೆ ಟಿವಿಗಳಲ್ಲಿ ಮಾತ್ರ ಪ್ರೇಕ್ಷಕರು ಈ ಚಿತ್ರವನ್ನು ತುಂಬಾ ನೋಡುತ್ತಾರೆ. ಮಹೇಶ್ ಬಾಬು ಅವರಲ್ಲಿರುವ ಹಾಸ್ಯ ನಟನೆಯನ್ನು ತ್ರಿವಿಕ್ರಮ್ ಈ ಚಿತ್ರದಲ್ಲಿ ಹೊರತಂದಿದ್ದಾರೆ. ಅನುಷ್ಕಾ ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 

Read more Photos on
click me!

Recommended Stories