ನಂತರ ನೆಲ್ಲೂರಿಗೆ ಹೋದ. ಹಾಗಾಗಿ ನನಗೆ ಅವನು ನಮ್ಮ ಮನೆಯ ಮಗುವಿನಂತೆ ಅನಿಸುತ್ತಾನೆ. ಅಂದರೆ ನನ್ನ ಮೊದಲ ಮಗುವಿನಂತೆ ಇರುತ್ತಾನೆ ಎಂದರು ಚಿರಂಜೀವಿ. ಮುಖ್ಯವಾಗಿ ನಾನು, ನಾಗಬಾಬು, ಮತ್ತು ನಮ್ಮ ಅಕ್ಕ ಕೆಲವು ದಿನ ಒಟ್ಟಿಗೆ ಇದ್ದೆವು. ಆದರೆ, ಉಳಿದ ಇಬ್ಬರು ಮಾಧವಿ, ಕಲ್ಯಾಣ್ ಹುಟ್ಟುವ ಹೊತ್ತಿಗೆ ನಾನು ಬೇರೆ ಕಡೆ ಓದುತ್ತಿದ್ದೆ. ರಜೆಯಲ್ಲಿ ಮಾತ್ರ ಅವರನ್ನು ನೋಡುತ್ತಿದ್ದೆ. ಅವರನ್ನು ಮಿಸ್ ಮಾಡಿಕೊಂಡ ಫೀಲಿಂಗ್ ನನಗೆ. ಅದಕ್ಕೇ ನನಗೆ ಪವನ್ ಕಲ್ಯಾಣ್ ಅಂದರೆ ತುಂಬಾ ಇಷ್ಟ ಎಂದು ಹೇಳಿಕೊಂಡರು.