ಮುಂದುವರೆದು ಮಾತನಾಡಿದ ಅವರು, ನೇರವಾಗಿ ಹೇಳದೆ ನನಗೆ ನಡೆದ ಬಗ್ಗೆ ಸುಳ್ಳು ಹೇಳುವುದು ಏಕೆ. ನಾನು ಮಾಧ್ಯಮಗಳನ್ನು ಯಾವಾಗಲೂ ಗೌರವಿಸುವವಳು, ಅವರೇ ನನ್ನ ಧ್ವನಿಯನ್ನು ಜನರಿಗೆ ತಲುಪಿಸುತ್ತಾರೆ. ಆದರೆ ಅವರಲ್ಲಿ ಕೆಲವರು ನನ್ನ ಮೇಲೆ ಕೆಸರನ್ನು ಎಸೆಯುತ್ತಾರೆ. ಅದು ಜೀವನದಲ್ಲಿ ಉಂಟುಮಾಡುವ ಸಮಸ್ಯೆಗಳನ್ನು ಸರಿಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ಅದನ್ನು ನೀವು ಸ್ವಂತವಾಗಿ ಯೋಚಿಸಬೇಕು ಎಂದು ಕಲ್ಪನಾ ರಾಘವೇಂದ್ರ ಖಾರವಾಗಿ ಹೇಳಿದರು.