ಅಮ್ಮ ನನಗೆ ತುಂಬಾ ಹೊಡೆಯುತ್ತಿದ್ದರು ಎಂಬ ರಹಸ್ಯ ರೀವಿಲ್‌ ಮಾಡಿದ ಅಮಿತಾಬ್ ಮಗಳು

First Published | Oct 9, 2022, 3:44 PM IST

ಅಮಿತಾಬ್ ಬಚ್ಚನ್ (Amitabh Bachchan) ಮತ್ತು ಜಯಾ ಬಚ್ಚನ್ (Jaya Bachchan) ಅವರ ಪುತ್ರಿ ಶ್ವೇತಾ ಬಚ್ಚನ್ ನಂದಾ  (Shweta Bachchan) ಇತ್ತೀಚೆಗೆ ತನ್ನ ತಾಯಿಯ ಬಗ್ಗೆ ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.ತಾಯಿ ಜಯಾ ಬಾಲ್ಯದಲ್ಲಿ  ಅವರನ್ನು ತುಂಬಾ ಹೊಡೆಯುತ್ತಿದ್ದರು ಎಂದು ಹೇಳಿದರು. ಅವರು ಪ್ರತಿ ವಿಷಯದಲ್ಲೂ ತುಂಬಾ ಕಟ್ಟುನಿಟ್ಟಾಗಿದ್ದರು. ಇದೇ ವೇಳೆ ಸಹೋದರ ಅಭಿಷೇಕ್ ಬಚ್ಚನ್‌ಗೆ ತಾಯಿ ಹೊಡೆದಿಲ್ಲ ಎಂದೂ ಬಹಿರಂಗಪಡಿಸಿದ್ದಾರೆ.

ಶ್ವೇತಾ ತನ್ನ ಮಗಳು ನವ್ಯಾ ನವೇಲಿ ನಂದಾ ಅವರ ಪಾಡ್‌ಕ್ಯಾಸ್ಟ್ ವಾಟ್ ದಿ ಹೆಲ್ ನವ್ಯಾ ಸಮಯದಲ್ಲಿ ಶ್ವೇತಾ ತಾಯಿ ಜಯಾ ಅವರೊಂದಿಗೆ ಭಾಗವಹಿಸಿದ್ದರು ಮತ್ತು ಅವರು ತಮ್ಮ ಬಾಲ್ಯದ ಅನೇಕ ರಹಸ್ಯಗಳನ್ನು ಅವರ ಮುಂದೆ ಬಹಿರಂಗಪಡಿಸಿದರು. 

ನನ್ನ ಮೇಲೆ ಸಾಕಷ್ಟು ಒತ್ತಡವಿತ್ತು. ತಾಯಿ ಜಯಾ ಪಠ್ಯೇತರ ಚಟುವಟಿಕೆಗಳ ಬಗ್ಗೆ ತುಂಬಾ ಕಟ್ಟುನಿಟ್ಟಾಗಿ ಇರುತ್ತಿದ್ದರು  ಎಂದು ಶ್ವೇತಾ ಬಚ್ಚನ್ ಕಾರ್ಯಕ್ರಮದಲ್ಲಿ ಮಗಳಿಗೆ ಹೇಳಿದ್ದಾರೆ. ಅದಕ್ಕಾಗಿಯೇ ನಾನು ಭರತನಾಟ್ಯ, ಹಿಂದಿ ಶಾಸ್ತ್ರೀಯ ಸಂಗೀತ, ಈಜು, ಸಿತಾರ್ ಮತ್ತು ಪಿಯಾನೋವನ್ನು ಕಲಿಯಬೇಕಾಗಿತ್ತು.

Tap to resize

ಈ ಎಲ್ಲಾ ವಿಷಯಗಳ ಕಾರಣದಿಂದ ಅವರು ನನಗೆ ತುಂಬಾ ಹೊಡೆದಿದ್ದಾರೆ ಎಂದು ಬಿಗ್‌ಬಿ ಮಗಳು ಬಹಿರಂಗಪಡಿಸಿದ್ದಾರೆ.ಅದೇ ಸಮಯದಲ್ಲಿ ತಮ್ಮ ಸಹೋದರ ಅಭಿಷೇಕ್ ಬಚ್ಚನ್ ಬಗ್ಗೆ ಬಹಿರಂಗಪಡಿಸಿದ ಅವರು ಅಭಿಷೇಕ್‌ಗೆ ಬಹುಃಶ  ಹೊಡೆದಿರುವುದು ಅಪರೂಪ ಎಂದು ಹೇಳಿದ್ದಾರೆ . 

ಇದೇ ವೇಳೆ ಮಗಳ ಮಾತನ್ನು ಮಧ್ಯದಲ್ಲಿ ಕಟ್ ಮಾಡುತ್ತಾ, ಮೊದಲ ಮಗುವಿಗೆ  ಹೆಚ್ಚು ಹೊಡೆತ ಬೀಳುತ್ತದೆ ಎಂಬ ನಂಬಿಕೆ ನನ್ನದು. ನನಗೂ ಅದೇ ಆಯಿತು. ನಾನು ಹೆಚ್ಚು ಹೊಡೆತ ತಿಂದಿದ್ದೇನೆ ನನ್ನ ಸಹೋದರಿಯರಲ್ಲ ಎಂದು  ಜಯಾ ಬಚ್ಚನ್ ಹೇಳಿದರು.

ಅಮ್ಮನಿಗೆ ಯಾಕೆ ಹೊಡೆಯುತ್ತಿದ್ದೀರಿ ಎಂದು ನವ್ಯಾ ಅಜ್ಜಿಯನ್ನು ಕೇಳಿದಾಗ,ಶ್ವೇತಾ ತುಂಬಾ ತೊಂದರೆ ಕೊಡುತ್ತಿದ್ದರು ಮತ್ತು ತುಂಬಾ ಹಠಮಾರಿ ಎಂದು ಜಯಾ ಬಚ್ಚನ್‌ ಹೇಳಿದರು. 

ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಪೋಷಕರು ತಮ್ಮ ಮೇಲೆ ತಾವು ಕೋಪಗೊಂಡಾಗ ಮಕ್ಕಳಿಗೆ ಹೊಡೆಯುತ್ತಾರೆ ಏಕೆಂದರೆ ಅವರಿಗೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ ಮತ್ತು ಅವರ ಹತಾಶೆ ಮಕ್ಕಳ ಮೇಲೆ ತೆಗೆದುಕೊಳ್ಳುತ್ತಾರೆ ಎಂದು
ಜಯಾ ಬಚ್ಚನ್‌ ಹೇಳಿದ್ದಾರೆ.

ಈ ಸಮಯದಲ್ಲಿ, ಶ್ವೇತಾ ಬಚ್ಚನ್ ತಮ್ಮ ತಂದೆ ಅಮಿತಾಬ್ ಬಚ್ಚನ್ ಬಗ್ಗೆಯೂ ಅನೇಕ ವಿಷಯ ಬಹಿರಂಗಪಡಿಸಿದರು. Pappa ಕೂಡ ಬಾಲ್ಯದಲ್ಲಿ ತುಂಬಾ ಗದರಿಸುತ್ತಿದ್ದರು ಮತ್ತು ಶಿಕ್ಷಿಸುತ್ತಿದ್ದರು. ಮೂಲೆಯಲ್ಲಿ ನಿಲ್ಲುವುದೇ ಅಪ್ಪ ಕೊಟ್ಟ ದೊಡ್ಡ ಶಿಕ್ಷೆ ಎಂದರು. ಈ ಶಿಕ್ಷೆ ನನಗೂ ಇಷ್ಟವಾಗಿತ್ತು ಏಕೆಂದರೆ ಆ ಸಮಯದಲ್ಲಿ ತನಗೆ ತಾನೇ ಮಾತನಾಡಲು ಅವಕಾಶ ಸಿಗುತ್ತಿತ್ತು ಎಂದು ಶ್ವೇತಾ ಹೇಳಿದ್ದಾರೆ. 

ಇದಕ್ಕೂ ಮೊದಲು ಕೂಡ ಶ್ವೇತಾ ತಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ಮಾತನಾಡಿದ್ದರು ತಾನು ಆರ್ಥಿಕವಾಗಿ ಸ್ವಾವಲಂಬಿಯಾಗಿಲ್ಲ ಆದರೆ ತನ್ನ ಮಕ್ಕಳಾದ ನವ್ಯಾ  ನವೇಲಿ ನಂದಾ ಮತ್ತು ಅಗಸ್ತ್ಯ ನಂದಾ ಬೇರೆ ದಾರಿ ಹಿಡಿಯಬೇಕೆಂದು ಬಯಸುವುದಾಗಿ ಹೇಳಿದರು. ಮದುವೆಗೆ ಮುನ್ನ ಆರ್ಥಿಕವಾಗಿ ಭದ್ರತೆ ಮಾಡಿಕೊಳ್ಳಿ ಎಂದು ತಮ್ಮ ಮಕ್ಕಳಿಗೆ ಶ್ವೇತಾ ಸಲಹೆ ನೀಡಿದ್ದಾರೆ.
 

Latest Videos

click me!