ಸಿನಿಮಾ ಇಂಡಸ್ಟ್ರಿಯನ್ನು ಇತ್ತೀಚೆಗೆ ನೆಗೆಟಿವ್ ರೀತಿಯಲ್ಲೇ ತೋರಿಸಲಾಗುತ್ತಿದೆ. ಈ ಬಗ್ಗೆ ಕೆಲವು ಸೆಲೆಬ್ರಿಟಿಗಳಿಗೆ ಬೇಸರವೂ ಇದೆ.
ಸಿನಿಮಾ ಇಂಡಸ್ಟ್ರಿ, ಡ್ರಗ್ಸ್ ಮಾಫೀಯಾ ಈ ಬಗ್ಗೆಯೇ ಚರ್ಚೆಯಾಗುತ್ತಿರುವ ಸಂದರ್ಭ ನಟಿ ಶ್ರುತಿ ಹಾಸನ್ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ..? ಇಲ್ಲಿ ನೋಡಿ
ಸಿನಿಮಾ ಇಂಡಸ್ಟ್ರಿ ವೆರಿ ಬ್ಯೂಟಿಫುಲ್ ಎಂದಷ್ಟೇ ನಾನು ನನ್ನ ಕುಟುಂಬ ಈ ಸಂದರ್ಭ ಹೇಳುತ್ತೇವೆ ಎಂದಿದ್ದಾರೆ ನಟಿ.
ಯಾರೋ ಒಬ್ಬರು ನಿಮ್ಮ ಮಗಳನ್ನು ಸಿನಿಮಾಗೆ ಕಳುಹಿಸುವ ಬಗ್ಗೆ ಬೇಸರವಿಲ್ಲವೇ ಎಂದು ನನ್ನ ತಂದೆಯವರನ್ನು ಪ್ರಶ್ನಿಸಿದ್ರು.
ನಿಮ್ಮ ಮಗಳನ್ನು ಯಾವುದೋ ಮನೆಗೆ ಮದುವೆ ಮಾಡಿ ಕಳಿಸಿದ್ದೀರಿ. ನಾನು ನನ್ನ ಮಗಳನ್ನು ನಾನು ಬೆಳೆದ ಮನೆಗೆ ಕಳಿಸುತ್ತಿದ್ದೇನೆ, ಆಕೆಯ ಪಯಣದಲ್ಲಿ ಸ್ಟ್ರಾಂಗ್ ಆಗಿ ಇರುವಂತೆ ಹೇಳಿದ್ದೇನೆ ಎಂದಿದ್ದರು ಅಪ್ಪಾ ಎಂದಿದ್ದಾರೆ ಶ್ರುತಿ.
ಎಲ್ಲ ಕಡೆ ಒಳ್ಳೆಯವರು, ಕೆಟ್ಟವರೂ ಇರುತ್ತಾರೆ ಎಂದಿದ್ದಾರೆ ನಟಿ.
ಇದು ನನ್ನ ವೃತ್ತಿ. ಮೆಡಿಕಲ್, ಕಾರ್ಪೊರೇಟ್ ಯಾವುದೇ ಫೀಲ್ಡ್‌ನಲ್ಲಿಯೂ ಹೀಗೆ, ಅಲ್ಲಿ ಹೋಗಿ ನೀವು ಇಂಟರ್‌ವ್ಯೂ ಮಾಡಲ್ಲ ಅಷ್ಟೇ ಎಂದಿದ್ದಾರೆ.
ಅಲ್ಲಿ ಹೋದರೆ ಏಕೆ, ನಿಮ್ಮಲ್ಲಿಯೇ ಹೆಣ್ಮಕ್ಕಳನ್ನು ಕೇಳಿದರೆ ಅಲ್ಲಿ ಕೆಟ್ಟದ್ದೂ ಒಳ್ಳೆಯದೂ ಹೇಳುವುದಕ್ಕೆ ಬಹಳಷ್ಟಿರಬಹುದು ಎಂದಿದ್ದಾರೆ.
ನನಗೆ ಸರಿ ಎನಿಸಿದ ಪಾರ್ಟಿಗಳಿಗೆ ನಾನು ಹೋಗಿಲ್ಲ, ಇದಕ್ಕಾಗಿ ಬಹಳ ದೊಡ್ಡ ಬೆಲೆ ತೆತ್ತಿದ್ದೇನೆ ಎಂದಿದ್ದಾರೆ.
ನಾನು ಒಪ್ಪದ ವಿಚಾರಗಳಿಗೆ ಖಂಡಿತಾ ಎಂದೂ ಒಪ್ಪುವುದಿಲ್ಲ.
ಅದು ಎಷ್ಟೇ ದೊಡ್ಡ ನಿರ್ಮಾಪಕ, ನಿರ್ದೇಶಕನಾದರೂ ಸರಿಯೇ ಎಂದಿದ್ದಾರೆ.
ಅವರ ವಿಚಾರಗಳು ನನಗೆ ಇಷ್ಟವಾಗದಿದ್ದರೆ ನಾನವರಲ್ಲ ಮಾತನಾಡುವುದಿಲ್ಲ. ಇದರಿಂದಾಗಿ ಬಹಳ ದೊಡ್ಡ ಬೆಲೆ ಕೊಡಬೇಕಾಗಿ ಬಂದಿದೆ, ಹಲವು ಸಲ ಸಿನಿಮಾಗಳೇ ಮಿಸ್ ಆಗಿವೆ ಎನ್ನುತ್ತಾರೆ ಶ್ರುತಿ.