ಗರ್ಭಿಣಿಯಾಗದೆ ನನ್ನ ಹತ್ರ ಹೊಟ್ಟೆ ಮಸಾಜ್‌ ಮಾಡಿಸ್ಕೊಳ್ತಾಳೆ: ಬೀದಿಗೆ ಬಂದ ನಟಿ ಅಷ್ಮಿತಾ ಸಂಸಾರದ ಗುಟ್ಟು

Published : Jun 17, 2025, 06:10 PM ISTUpdated : Jun 17, 2025, 06:11 PM IST

ಸೋಶಿಯಲ್‌ ಮೀಡಿಯಾದಲ್ಲಿ ತನ್ನ ಜೀವನ ತುಂಬ ಚೆನ್ನಾಗಿದೆ, ಒಳ್ಳೆಯ ಸಂಪಾದನೆ, ಮೂವರು ಮಕ್ಕಳು, ಪ್ರೀತಿಸುವ ಗಂಡ ಇದ್ದಾನೆ ಅಂತ ಅಷ್ಮಿತಾ ಬಿಂಬಿಸಿಕೊಳ್ಳುತ್ತಿದ್ದರು. ಈಗ ಗಂಡ-ಹೆಂಡ್ತಿ ಮನಸ್ತಾಪ ಬೀದಿಗೆ ಬಂದಿದೆ. 

PREV
17

ಸೋಶಿಯಲ್‌ ಮೀಡಿಯಾದಲ್ಲಿ ಕಂಡಿದ್ದೆಲ್ಲವೂ ಸತ್ಯ ಅಲ್ಲ ಎನ್ನೋದಿಕ್ಕೆ ನಟಿ ಅಷ್ಮಿತಾ ಜೀವನವೇ ಕಾರಣ. ತನ್ನ ಗಂಡ ತನ್ನನ್ನು ಪ್ರೀತಿ ಮಾಡ್ತಾನೆ, ಆಗಾಗ ಮಕ್ಕಳ ಬರ್ತಡೇ, ಫ್ಯಾಮಿಲಿ ಫೋಟೋಶೂಟ್‌ ಎಂದು ನಟಿ ಅಷ್ಮಿತಾ ಅವರು ಸೋಶಿಯಲ್‌ ಮೀಡಿಯಾದಲ್ಲಿ ಎಲ್ಲವನ್ನೂ ಹಂಚಿಕೊಳ್ಳುತ್ತಿದ್ದರು. ಆದರೆ ಈ ಜೋಡಿ ಮಧ್ಯೆ ಮೊದಲಿನಿಂದಲೂ ಮನಸ್ತಾಪ ಇತ್ತು ಎನ್ನೋದನ್ನು ಶ್ರೀವಿಷ್ಣು ಅವರು ಹೇಳಿದ್ದಾರೆ.

27

ನಟಿ, ಮೇಕಪ್‌ ಆರ್ಟಿಸ್ಟ್‌ ಅಷ್ಮಿತಾ ಅವರ ಪತಿ ಶ್ರೀ ವಿಷ್ಣು ಅವರು ಓರ್ವ ಹುಡುಗಿಗೆ ಅಸಭ್ಯ ಮೆಸೇಜ್‌ ಮಾಡಿ ಸಿಕ್ಕಿಹಾಕಿಕೊಂಡಿದ್ದು, ಆಮೇಲೆ ಆ ಹುಡುಗಿ ಮನೆಯವರು ಬೈದ ವಿಡಿಯೋವೊಂದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು. ಈಗ ಶ್ರೀವಿಷ್ಣು ಹಾಗೂ ಅಷ್ಮಿತಾ ನಡುವೆ ಮನಸ್ತಾಪ ಶುರು ಆಗಿದ್ದು, ಈ ಬಗ್ಗೆ ಶ್ರೀವಿಷ್ಣು ಅವರು ಮಾಧ್ಯಮವೊಂದರ ಜೊತೆ ಮಾತನಾಡಿದ್ದಾರೆ.

37

“ನನ್ನ ಮಕ್ಕಳಿಗೆ ಕಥೆ ಹೇಳಿ ಮಲಗಿಸೋದು ಎಲ್ಲವೂ ನಾನೇ. ಅಷ್ಮಿತಾ ಏನೂ ಮಾಡಿಲ್ಲ. ನನಗೂ, ನನ್ನ ಮಗಳಿಗೂ ಫೋಟೋಶೂಟ್‌ ಅಂದ್ರೆ ಇಷ್ಟ ಇಲ್ಲ. ಮಕ್ಕಳ ಫೋಟೋಶೂಟ್‌ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ್ರೆ ದೃಷ್ಟಿ ಆಗುತ್ತದೆ. ನಾನು ಎಷ್ಟೇ ಹೇಳಿದರೂ ಅವಳು ಕೇಳುತ್ತಿರಲಿಲ್ಲ .‌ಸೋಶಿಯಲ್‌ ಮೀಡಿಯಾದಲ್ಲಿ ನನ್ನ ಜೊತೆ ಇರುವ ಎಲ್ಲ ಫೋಟೋಗಳನ್ನು ಅಷ್ಮಿತಾ ಡಿಲಿಟ್ ಮಾಡಿದ್ದಳು. ಬರ್ತ್‌ಡೇ ಸೆಲೆಬ್ರೇಶನ್‌ ಎಲ್ಲವನ್ನೂ ನಾನು ಹೇಟ್‌ಮಾಡ್ತಿದ್ದೆ. ಹೊಟ್ಟೆ, ತೊಡೆ ತೋರಿಸಬೇಡ ಅಂತ ಹೇಳಿದ್ದೆ. ಗರ್ಭಿಣಿ ಅಲ್ಲ ಅಂದ್ರೂ ನಾನು ಅವಳ ಹೊಟ್ಟೆ ಮೆಸೇಜ್‌ಮಾಡಬೇಕು ಅಂತ ಹೇಳುತ್ತಿದ್ದಳು” ಎಂದು ಶ್ರೀವಿಷ್ಣು ಹೇಳಿದ್ದಾರೆ.

47

“ನೀನು ನನಗೆ ಸರ್ಪ್ರೈಸ್‌ ಕೊಡಬೇಕು ಅಂತ ಅಷ್ಮಿತಾ ಹೇಳಿದ್ದಳು. ಆಗ ನಾನು ಅವಳಿಗೆ ಗುಲಾಬಿ ಹೂವು ಕೊಟ್ಟೆ. ನನ್ನ ಮಗಳ ಆಣೆಗೂ ಇದೆಲ್ಲವೂ ಸತ್ಯ. ನೀನು ನನ್ನ ಹೆಸರಿನಲ್ಲಿ ಟ್ಯಾಟೂ ಹಾಕಿಸಿಕೊಳ್ಳಬೇಕು ಅಂತ ಅವಳು ಹೇಳುತ್ತಿದ್ದಳು. ಟ್ಯಾಟೂ ಹಾಕಿಸಿಕೊಂಡ್ರೆ ಮಾತ್ರ ಲವ್‌ ಇದೆ ಅಂತ ಅರ್ಥವೇ?” ಎಂದು ಶ್ರೀವಿಷ್ಣು ಹೇಳಿದ್ದಾರೆ.

57

“ಕಂಟೆಂಟ್‌ಗೋಸ್ಕರ ಅವಳು ಏನು ಬೇಕಿದ್ರೂ ಮಾಡ್ತಾಳೆ. ಇದು ನನಗೆ ಇಷ್ಟವಿಲ್ಲ. ನಾನು ಈ ವಿಷಯದಲ್ಲಿ ಬೆಂಬಲ ಕೊಡಲ್ಲ ಅಂತ ಅಷ್ಮಿತಾಗೆ ಸಿಟ್ಟು. ನಮಗೆ ಮೂರು ಮಕ್ಕಳಾಗಿವೆ, ನಾಲ್ಕನೇ ಮಗು ಅಂತ ಅಷ್ಮಿತಾ ಹೇಳಿದ್ದಳು. ನನಗೆ ಅದೆಲ್ಲ ಇಷ್ಟ ಇರಲಿಲ್ಲ” ಎಂದು ಶ್ರೀವಿಷ್ಣು ಹೇಳಿದ್ದಾರೆ.

67

ಈ ಹಿಂದೆಯೂ ಈ ಜೋಡಿ ಡಿವೋರ್ಸ್‌ ತಗೊಳ್ಳುವ ಆಲೋಚನೆ ಮಾಡಿರೋದನ್ನು ಸಂದರ್ಶನದಲ್ಲಿ ಹೇಳಿತ್ತು. ಆಮೇಲೆ ಮನಸ್ತಾಪ ಮರೆತು ಒಂದಾಗಿತ್ತು.

77

ಶ್ರೀ ವಿಷ್ಣು ಕಾಂಟ್ರವರ್ಸಿ ಸೃಷ್ಟಿಯಾದಾಗ ಅಷ್ಮಿತಾ ತುಂಬು ಗರ್ಭಿಣಿ. ಆಮೇಲೆ ಅವರೇ ಕಾರ್‌ ಓಡಿಸಿಕೊಂಡು ಆಸ್ಪತ್ರೆಗೆ ಹೋಗಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಹೆರಿಗೆ ಬಳಿಕವೂ ಅವರೇ ಕಾರ್‌ ಓಡಿಸಿಕೊಂಡು ಮನೆಗೆ ಬಂದಿದ್ದರು. ಈ ವಿಡಿಯೋವನ್ನು ಅವರೇ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories