ಶ್ರದ್ಧಾ ಕಪೂರ್ ಮದುವೆನಾ? ಹಿಂಟ್‌ ನೀಡಿದ್ದಾರೆ ನಟಿಯ ಅಪ್ತರು!

Suvarna News   | Asianet News
Published : Aug 30, 2021, 02:14 PM IST

ಬಾಲಿವುಡ್‌ನ ನಟಿ ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಇದೆ. ಅಂದಹಾಗೆ, ಶ್ರದ್ಧಾ ತನ್ನ ವೈಯಕ್ತಿಕ ಜೀವನವನ್ನು ಬಹಳ ರಹಸ್ಯವಾಗಿಡುತ್ತಾರೆ. ಇತ್ತೀಚೆಗೆ, ಶ್ರದ್ಧಾ ಶೀಘ್ರದಲ್ಲೇ ಖ್ಯಾತ ಛಾಯಾಗ್ರಾಹಕ ರೋಹನ್ ಶ್ರೇಷ್ಠಾ ಅವರನ್ನು ವಿವಾಹವಾಗಲಿದ್ದಾರೆ ಎಂಬ ವದಂತಿಗಳಿವೆ. ಈ ಬಗ್ಗೆ ಶ್ರದ್ಧಾರ ಅಪ್ತರೂ ಕೂಡು ಸುಳಿವು ನೀಡಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ. 

PREV
19
ಶ್ರದ್ಧಾ ಕಪೂರ್ ಮದುವೆನಾ? ಹಿಂಟ್‌ ನೀಡಿದ್ದಾರೆ ನಟಿಯ ಅಪ್ತರು!

ಇತ್ತೀಚೆಗೆ ಶ್ರದ್ಧಾ ಕಪೂರ್ ಬ್ರೈಡಲ್‌ ಫೋಟೋಶೂಟ್ ಕೂಡ ಮಾಡಿಸಿದ್ದಾರೆ, ಅದರಲ್ಲಿ ಅವರು ತುಂಬಾ ಸುಂದರವಾಗಿ ಕಾಣುತ್ತಿದ್ದಾರೆ. ಆಕೆ ಡಾರ್ಕ್‌ ರೆಡ್‌ ಬಣ್ಣದ ಲೆಹೆಂಗಾ ಮತ್ತು ಭಾರೀ ಆಭರಣಗಳನ್ನು ಧರಿಸಿದ್ದಾರೆ. ಈ ಫೋಟೋಗಳನ್ನು ನೋಡಿದ ನಂತರ ನಟಿಯ ಮದುವೆಯ ಬಗ್ಗೆ ಇನ್ನಷ್ಟು ಊಹಾಪೋಹಾಗಳು ಹುಟ್ಟಿಕೊಂಡಿವೆ. 

29

ವಾಸ್ತವವಾಗಿ,ನಟಿ ರೋಹನ್ ಜೊತೆ ಹೆಚ್ಚಾಗಿ ಕಾಣಿಸುತ್ತಾರೆ ಮತ್ತು ಈ ಕಾರಣದಿಂದಾಗಿ ಅವರ ಸಂಬಂಧದ ಬಗ್ಗೆ ರೂಮರ್ಸ್‌ ಹಾರಿದಾಡುತ್ತಿವೆ. ಮಾಲ್ಡೀವ್ಸ್‌ನಲ್ಲಿ ರೋಹನ್ ಶ್ರೇಷ್ಠಾ ಜೊತೆ ಶ್ರದ್ಧಾ ಕಾಣಿಸಿಕೊಂಡ ನಂತರ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

39

ಶ್ರದ್ಧಾ ಅವರ ಕಸಿನ್‌ ಪ್ರಿಯಾಂಕ್ ಶರ್ಮಾ ಮತ್ತು ಆಕೆಯ ಚಿಕ್ಕಮ್ಮ ಪದ್ಮಿನಿ ಕೊಲ್ಹಾಪುರಿ ವಿವಾಹದ ಬಗ್ಗೆ ಹಿಂಟ್‌ ನೀಡಿದ್ದಾರೆ. ಶ್ರದ್ಧಾ ಕಪೂರ್ ಮದುವೆಗೆ ಸಂಬಂಧಿಸಿದಂತೆ, ನಟಿಯ ಕಸಿನ್‌ ಪ್ರಿಯಾಂಕ್ ಶರ್ಮಾ ಅವರು ಶ್ರದ್ಧಾ ಮತ್ತು ರೋಹನ್ ವಿವಾಹದ ಸುದ್ದಿ ಬಗ್ಗೆ ಪ್ರತಿಕ್ರಿಯಿಸಲು ಬಯಸುವುದಿಲ್ಲ. ಆದರೆ ನಾವು ಭವಿಷ್ಯದ ಬಗ್ಗೆ ಮಾತನಾಡಿದರೆ, ಮದುವೆ ಉತ್ತಮ ಆಯ್ಕೆ, ಎಂದಿದ್ದಾರೆ.


 

49

ಅದೇ ಸಮಯದಲ್ಲಿ, ಪದ್ಮಿನಿ ಕೊಲ್ಹಾಪುರಿ ಕೂಡ ಸಂತೋಷವನ್ನು ವ್ಯಕ್ತಪಡಿಸಿದರು ಮತ್ತು ಇಬ್ಬರ ಮದುವೆಯ ಪ್ರಶ್ನೆಯು ಬಹಳ ವಿಚಿತ್ರವಾಗಿದೆ. ಆದರೆ ಅದು ಸಂಭವಿಸಿದಲ್ಲಿ ಎಲ್ಲರಿಗೂ ಸುದ್ದಿ ಸಿಗುತ್ತದೆ ಎಂದು ಹೇಳಿದರು.

59

ಇದು ಮಾತ್ರವಲ್ಲ, ವರುಣ್ ಧವನ್ ನತಾಶಾ ದಲಾಲ್ ಅವರ ಮದುವೆಯ ಸಮಯದಲ್ಲಿ ಶ್ರದ್ಧಾ, ನವ ದಂಪತಿಯನ್ನು ಅಭಿನಂದಿಸಿದಾಗ, ಈಗ ನೀವೂ ಮದುವೆಗೆ ಸಿದ್ಧರಾಗಿ ಎಂದು ಕಮೆಂಟ್ ಮಾಡಿದ್ದರು. ಆಗ ಶ್ರದ್ಧಾ ರಿಲೆಷನ್‌ಶಿಪ್‌ನಲ್ಲಿದ್ದಾರೆ ಎಂಬುದು ಮತ್ತಷ್ಟು ದೃಢಪಟ್ಟಿತು.

69

ಅಂತರ್ಜಾಲದಲ್ಲಿ ಯಾವ ರೀತಿಯ ವರದಿಗಳು ಹರಿದಾಡುತ್ತಿವೆ ಎಂದು ಅವರಿಗೆ ತಿಳಿದಿಲ್ಲ. ಇದು ಅವಳ ಮದುವೆಗೆ ಸಂಬಂಧಿಸಿದ್ದು .ರೋಹನ್ ಶ್ರೇಷ್ಠಾ ಮಾತ್ರ ಅಲ್ಲ  ಅವಳು ಬಂದು ಅವಳು ಯಾರನ್ನಾದರೂ ಆರಿಸಿಕೊಂಡಿದ್ದೇನೆ ಮತ್ತು ಆತನೊಂದಿಗೆ ಜೀವನ ನೆಡೆಸಲು  ಬಯಸಿದ್ದಾಳೆ ಎಂದು ಹೇಳಿದರೆ, ಖಂಡಿತವಾಗಿಯೂ ಮಗಳ ಪರವಾಗಿ ನಿಲ್ಲುತ್ತೇನೆ. ಅವಳು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದಲ್ಲೂ ಶ್ರದ್ಧಾ ಜೊತೆ ಇರುತ್ತೇನೆ, ಎಂದು ಸಂದರ್ಶನದಲ್ಲಿ ಶಕ್ತಿ ಕಪೂರ್‌ ಮಗಳ ಮದುವೆ ರೂಮರ್‌ ಬಗ್ಗೆ ಪ್ರತಿಕ್ರಿಯಿಸಿದ್ದರು.

79

ಕಪೂರ್‌ ಮತ್ತು ಶ್ರೇಷ್ಠಾ ಫ್ಯಾಮಿಲಿ ಸ್ನೇಹಿತರು. 'ರೋಹನ್ ಒಳ್ಳೆಯ ಹುಡುಗ. ಅವನು ಬಾಲ್ಯದಿಂದ ಮನೆಗೆ ಬರುತ್ತಾನೆ. ರೋಹನ್ ತಂದೆ ರಾಕೇಶ್ ಶ್ರೇಷ್ಠಾ  ಜೊತೆ ಹಲವು ಫೋಟೋಶೂಟ್ ಮಾಡಿದ್ದು ಮಾತ್ರವಲ್ಲ, ನಾವು ಒಟ್ಟಿಗೆ ಡಿನ್ನರ್‌ ಮತ್ತು ಡ್ರಿಂಕ್ಸ್‌ಗಾಗಿ ಹೊರ ಹೋಗುತ್ತಿದ್ದೆವು, ಎಂದು ಶಕ್ತಿ ಕಪೂರ್‌ ಹೇಳಿದ್ದರು.

89

ಶ್ರದ್ಧಾ ಕಪೂರ್ ಒಬ್ಬ ನಟಿ ಮಾತ್ರವಲ್ಲದೆ ಗಾಯಕಿಯೂ ಹೌದು. ಶ್ರದ್ಧಾ ಲೈವ್ ಶೋಗಳ ಜೊತೆಗೆ ಫ್ಯಾಷನ್ ಶೋಗಳಲ್ಲೂ ಕಾಣಿಸಿಕೊಳ್ಳುತ್ತಾರೆ. ಕೆಲವು ವರ್ಷಗಳ ಹಿಂದೆ, ಶ್ರದ್ಧಾ ತಮ್ಮ ವಿಶೇಷ ಫ್ಯಾಷನ್ ಲೈನ್ ಎಮರಾವನ್ನು ಅಮೆಜಾನ್ ಜೊತೆಗೂಡಿ ಆರಂಭಿಸಿದರು.

99

ತೀನ್‌ ಪತ್ತಿ ಸಿನಿಮಾದ ನಂತರ, ಶ್ರದ್ಧಾ ಕಪೂರ್ ನಿರ್ದೇಶಕ ಪುನೀತ್ ಮಲ್ಹೋತ್ರಾ ಅವರ ಲವ್ ಕಾ ದಿ ಎಂಡ್ ಚಿತ್ರ ಮಾಡಿದರು. ಆದರೆ ಮೋಹಿತ್ ಸೂರಿ ನಿರ್ದೇಶನದ ಆಶಿಕಿ 2 ಸಿನಿಮಾದಿಂದ ಎಲ್ಲರ ಗಮನ ಸೆಳೆದರು.  ಅವರು ಏಕ್ ವಿಲನ್, ಹೈದರ್, ಎಬಿಸಿಡಿ 2, ಬಾಘಿ, ಹಾಫ್ ಗರ್ಲ್‌ಫ್ರೆಂಡ್, ಹಸೀನಾ ಪಾರ್ಕರ್ ಮುಂತಾದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.

click me!

Recommended Stories