ಅಮಿತಾಬ್ ಬಚ್ಚನ್ ಬಾಡಿಗಾರ್ಡ್‌ಗೆ 1.5 ಕೋಟಿ ರೂ ಸಂಭಾವನೆಯಾ?

First Published | Aug 29, 2021, 4:54 PM IST

ಮುಂಬೈ ಪೊಲೀಸ್ ಇಲಾಖೆಯ ಕಾನ್‌ಸ್ಟೇಬಲ್ ಜಿತೇಂದ್ರ ಶಿಂಧೆ ಅವರು ಹಲವು ವರ್ಷಗಳಿಂದ ಅಮಿತಾಬ್ ಬಚ್ಚನ್  ಬಾಡಿಗಾರ್ಡ್‌ ಆಗಿದ್ದಾರೆ. ಈ ದಿನಗಳಲ್ಲಿ  ಅವರ ಸಂಬಳ ಸುದ್ದಿಯಲ್ಲಿದೆ. ಅವರ ಸಂಬಳ ಕೇಳಿದರೆ ಶಾಕ್‌ ಆಗುವುದು ಗ್ಯಾರಂಟಿ. ಇಲ್ಲಿದೆ ವಿವರ.

ಮುಂಬೈ ಪೊಲೀಸ್ ಇಲಾಖೆಯ ಕಾನ್ಸ್‌ಟೇಬಲ್ ಜಿತೇಂದ್ರ ಶಿಂಧೆ ಅವರನ್ನು ಹಲವು ವರ್ಷಗಳಿಂದ ಅಮಿತಾಬ್ ಬಚ್ಚನ್‌ನ ಅಂಗರಕ್ಷಕರಾಗಿ ನೇಮಿಸಲಾಗಿದೆ.  ಜಿತೇಂದ್ರ ಶಿಂಧೆ  ಅವರ ಒಂದು ವರ್ಷದ ಸಂಬಳದ ಬಗ್ಗೆ ಆನ್‌ಲೈನ್‌ನಲ್ಲಿ ಪ್ರಕಟವಾದ ಇತ್ತೀಚಿನ ವರದಿಗಳು ಗಮನ ಸೆಳೆಯುತ್ತಿವೆ.
 

ಅಮಿತಾಬ್‌ ಬಾಡಿಗಾರ್ಡ್‌ 1.5 ಕೋಟಿ ಸಂಬಳ ಪಡೆಯುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಜಿತೇಂದ್ರ ಶಿಂಧೆ ಅವರನ್ನು ನಗರ ಪೊಲೀಸ್ ಆಯುಕ್ತ ಹೇಮಂತ್ ನಾಗ್ರಾಲೆ ಅವರು ಗುರುವಾರ ಡಿ ಬಿ ಮಾರ್ಗ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದಾರೆ.

Latest Videos


ಐಪಿಎಸ್ ಅಧಿಕಾರಿಯೊಬ್ಬರು ಸಂದರ್ಶನವೊಂದರಲ್ಲಿ 'ಅಮಿತಾಬ್ ಬಚ್ಚನ್ ಅವರೊಂದಿಗಿನ ಒಡನಾಟದಿಂದಾಗಿ ಜಿತೇಂದ್ರ ಶಿಂಧೆ ಅವರನ್ನು ಸ್ಥಳಾಂತರಿಸದಂತೆ ಮುಂಬೈ ಪೊಲೀಸರ ಮೇಲೆ ಒತ್ತಡ ಹೆಚ್ಚುತ್ತಿದೆ' ಎಂದು ಹೇಳಿದರು.

ಶಿಂಧೆ ಅವರು 2015 ರಿಂದ ಬಚ್ಚನ್ ಜೊತೆ ಕೆಲಸ ಮಾಡುತ್ತಿದ್ದಾರೆ ಮತ್ತು ಅವರನ್ನು ನಿಯಮದಂತೆ  ವರ್ಗಾವಣೆ ಮಾಡಲಾಗಿದೆ.  ಪೊಲೀಸ್ ಕಾನ್‌ಸ್ಟೇಬಲ್‌ಗಳಿಗೆ 5 ವರ್ಷಗಳಿಗಿಂತ ಹೆಚ್ಚಿನ ಹುದ್ದೆಯಲ್ಲಿ ಮುಂದುವರಿಯಲು ಅವಕಾಶವಿಲ್ಲ ಎಂದು ಅವರು ಹೇಳಿದರು.

ಅಮಿತಾಬ್ ಬಚ್ಚನ್  ಬಾಡಿಗಾರ್ಡ್‌ ಕಾನ್ಸ್‌ಟೇಬಲ್ ಜಿತೇಂದ್ರ ಶಿಂಧೆ  ಸಂಬಳದ ವರದಿಗಳು ಆನ್‌ಲೈನ್‌ನಲ್ಲಿ ಬಂದ ನಂತರ, ಮುಂಬೈ ಪೊಲೀಸರು ಶಿಂಧೆ ಅವರು ಬಚ್ಚನ್‌ನಿಂದ ಅಥವಾ ಬೇರೆಯವರಿಂದ ಹಣ ಸಂಪಾದಿಸುತ್ತಿದ್ದಾರೆಯೇ ಎಂದು ಪರೀಕ್ಷಿಸಲು ಆದೇಶಿಸಿದರು. 

ಇಂಡಿಯಾ ಟುಡೇಯಲ್ಲಿ ಪ್ರಕಟವಾದ ವರದಿಯ ಪ್ರಕಾರ, ಶಿಂಧೆ ಅವರು ಇತರ ಸೆಲೆಬ್ರಿಟಿಗಳಿಗೆ ಖಾಸಗಿ ಅಂಗರಕ್ಷಕರನ್ನು ನೀಡುವ ಭದ್ರತಾ ಏಜೆನ್ಸಿಯನ್ನು ಹೊಂದಿದ್ದಾರೆ. ಶಿಂಧೆ ಅವರ ಹೆಸರಿನಲ್ಲಿ ಅವರ ಪತ್ನಿ ಏಜೆನ್ಸಿ ನಡೆಸುತ್ತಿದ್ದಾರೆ ಮತ್ತು ಅಮಿತಾಬ್ ಬಚ್ಚನ್ ಅವರಿಗೆ 1.5 ಕೋಟಿ ರೂಪಾಯಿಗಳನ್ನು ನೀಡಿಲ್ಲ ಎಂದು  ಪೊಲೀಸ್ ಅಧಿಕಾರಿಗಳಿಗೆ ಹೇಳಿದ್ದಾರೆ.
 

ಜಿತೇಂದ್ರ ಅವರು ಬಿಗ್ ಬಿ ನೆರಳಿನಂತಿದ್ದಾರೆ. ಅವರು ಬಿಗ್ ಬಿ ಯನ್ನು ಕಾರ್ಯಕ್ರಮಗಳಲ್ಲಿ ಅಥವಾ ಸೆಟ್‌ಗಳಲ್ಲಿ ಅಭಿಮಾನಿಗಳು ಮತ್ತು ಸಾರ್ವಜನಿಕರಿಂದ ಯಾವಾಗಲೂ ರಕ್ಷಿಸುತ್ತಾರೆ. ಸುದ್ದಿ ವರದಿಯ ಪ್ರಕಾರ, ಜಿತೇಂದ್ರ ಶಿಂಧೆ ಅವರನ್ನು ದಕ್ಷಿಣ ಮುಂಬೈನ ಪೊಲೀಸ್ ಠಾಣೆಗೆ ಟ್ರಾನ್ಸ್‌ಫರ್‌ ಮಾಡಲಾಗಿದೆ.

click me!