ಶ್ರದ್ಧಾ ಕಪೂರ್ ಹೆತ್ತವರ ಲವ್‌ ಸ್ಟೋರಿ ಯಾವುದೇ ಸಿನಿಮಾಗೂ ಕಡಿಮೆ ಇಲ್ಲ!

Suvarna News   | Asianet News
Published : Mar 04, 2021, 04:30 PM IST

ಬಾಲಿವುಡ್ ನಟಿ ಮತ್ತು ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್  ತಮ್ಮ 34 ನೇ ಬರ್ತ್‌ಡೇ ಅನ್ನು  ಆಚರಿಸಿಕೊಂಡಿದ್ದಾರೆ. ಮಾರ್ಚ್ 3, 1987 ರಂದು ಮುಂಬೈನಲ್ಲಿ ಜನಿಸಿದ ಶ್ರದ್ಧಾ ಕಪೂರ್  ವೃತ್ತಿಜೀವನದಲ್ಲಿ ಇದುವರೆಗೆ ಸುಮಾರು 20 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರದ್ಧಾ ತಂದೆ ಶಕ್ತಿ ಕಪೂರ್‌ ಬಾಲಿವುಡ್‌ನ ನಟ ಎನ್ನುವುದು ಎಲ್ಲರಿಗೂ ತಿಳಿದಿದೆ.  ಆದರೆ ಅವರ ತಾಯಿ ಶಿವಾಂಗಿ ಕಪೂರ್ ಕೂಡ ನಟಿಯಾಗಿದ್ದರು ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಶ್ರದ್ಧಾರ  ಪೋಷಕರ ಲವ್‌ಸ್ಟೋರಿ ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ.  

PREV
110
ಶ್ರದ್ಧಾ ಕಪೂರ್ ಹೆತ್ತವರ ಲವ್‌ ಸ್ಟೋರಿ ಯಾವುದೇ ಸಿನಿಮಾಗೂ ಕಡಿಮೆ ಇಲ್ಲ!

ಶಿವಾಂಗಿ 1980 ರ   'ಕಿಸ್ಮತ್' ಸಿನಿಮಾದ ಮೂಲಕ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ ಮತ್ತು ರಂಜಿತಾ ಮುಖ್ಯ ಪಾತ್ರದಲ್ಲಿದ್ದರು. ಶಕ್ತಿ ಕಪೂರ್ ಕೂಡ ಈ ಚಿತ್ರದಲ್ಲಿ ನಟಿಸಿದ್ದಾರೆ. 

210

ಚಿತ್ರದ ಸೆಟ್‌ನಲ್ಲಿ ಇಬ್ಬರು ಮೊದಲು ಭೇಟಿಯಾಗಿದ್ದು. ಸೆಟ್‌ನಲ್ಲಿ ಶಿವಂಗಿ ಮತ್ತು ಶಕ್ತಿ ಕಪೂರ್ ಅವರ ಸ್ನೇಹ ನಿಧಾನವಾಗಿ ಪ್ರೇಮಕ್ಕೆ ತಿರುಗಿತು. 

310

ಈ ಕಪಲ್‌ ಮದುವೆಯಾಗಲು ನಿರ್ಧರಿಸಿದಾಗ ಅವರಿಗೆ ಎದುರಾದ ಅತಿದೊಡ್ಡ ಅಡಚಣೆಯೆಂದರೆ ಮನೆಯವರು. ಶಿವಾಂಗಿ  ಪೋಷಕರು ಈ ಮದುವೆಗೆ ಒಪ್ಪಲಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಇಬ್ಬರೂ ಓಡಿಹೋಗಿ 1982 ರಲ್ಲಿ ವಿವಾಹವಾದರು.

410

ಶಿವಾಂಗಿ ಮದುವೆಯಾದಾಗ ಕೇವಲ 18 ವರ್ಷದವರಾಗಿದ್ದರು. ಮದುವೆಯ ನಂತರ ಶಿವಾಂಗಿ ಚಿತ್ರಗಳಲ್ಲಿ ಕೆಲಸ ಮಾಡುವುದನ್ನು ನಿಲ್ಲಿಸಿ ಫ್ಯಾಮಿಲಿಯಲ್ಲಿ ಬ್ಯುಸಿಯಾದರು. 

510

ಮುಂಬೈನಲ್ಲಿ ಜನಿಸಿದ ಶ್ರದ್ಧಾ ಕಪೂರ್ ಅವರ ತಾಯಿ ಶಿವಾಂಗಿಯ ತಂದೆ ಪಂಧರಿನಾಥ್ ಕೊಲ್ಹಾಪುರೆ ಮತ್ತು ತಾಯಿ ಅನುಪಮಾ ಕೊಲ್ಹಾಪುರೆ. ಶಿವಾಂಗಿ ತನ್ನ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಬಾಲಿವುಡ್‌ನಲ್ಲಿ ಹಿನ್ನೆಲೆ ಗಾಯಕಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರ ಇಬ್ಬರು ಸಹೋದರಿಯರು, ಪದ್ಮಿನಿ ಕೊಲ್ಹಾಪುರೆ ಮತ್ತು ತೇಜಸ್ವಿನಿ ಕೊಲ್ಹಾಪುರೆ.

610

ಶಿವಂಗಿ ಮತ್ತು ಶಕ್ತಿ ಕಪೂರ್ ಅವರ ಮಕ್ಕಳಾದ ಶ್ರದ್ಧಾ ಕಪೂರ್ ಮತ್ತು ಮಗ ಸಿದ್ಧಾಂತ್ ಇಬ್ಬರೂ ಸಿನಿಮಾರಂಗದಲ್ಲಿ ಹೆಸರು ಗಳಿಸುತ್ತಿದ್ದಾರೆ.

710

ಶ್ರದ್ಧಾ ಕಪೂರ್ ಬಾಲಿವುಡ್‌ನ ಫೇಮಸ್‌ ನಟಿಯಾಗಿದ್ದರೆ, ಅವರ ಹಿರಿಯ ಸಹೋದರ ಸಿದ್ಧಾಂತ್ ಕಪೂರ್ ನಟ ಮತ್ತು ಸಹಾಯಕ ನಿರ್ದೇಶಕರಾಗಿದ್ದಾರೆ.

810

'ಹಸೀನಾ ಪಾರ್ಕರ್' ಚಿತ್ರದಲ್ಲಿ ಅಣ್ಣ ತಂಗಿ ಇಬ್ಬರು ಒಟ್ಟಿಗೆ ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ ಶ್ರದ್ಧಾ ದಾವೂದ್ ಸಹೋದರಿ ಹಸೀನಾ ಪಾತ್ರದಲ್ಲಿದ್ದರೆ, ಸಿದ್ಧಾಂತ್ ದಾವೂದ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

910

ಶ್ರದ್ಧಾ ಕಪೂರ್ ಇದುವರೆಗೆ 20 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಇವುಗಳಲ್ಲಿ ಟೀನ್ ಪ್ಯಾಟಿ, ಲವ್ ಕಾ ದಿ ಎಂಡ್, ಆಶಿಕ್ವಿ 2, ಗೋರಿ ತೇರೆ ಪ್ಯಾರ್ ಮೇ, ಏಕ್ ವಿಲನ್, ಹೈಡರ್, ಫಿಂಗರ್, ಎಬಿಸಿಡಿ 2, ಬಾಗಿ, ಎ ಫ್ಲೈಯಿಂಗ್ ಜಾಟ್‌, ರಾಕ್ ಅನ್ 2, ಒಕೆ ಜಾನು, ಹಾಫ್ ಗರ್ಲ್ಫ್ರೆಂಡ್, ಹಸೀನಾ ಪಾರ್ಕರ್, ಸ್ಟ್ರೀ, ಬತ್ತಿ ಗುಲ್ ಮೀಟರ್  ಚಾಲು, ಸಾಹೋ, ಚಿಚೋರ್, ಸ್ಟ್ರೀಟ್ ಡ್ಯಾನ್ಸರ್ ಮತ್ತು ಬಾಗಿ 3 ಶ್ರದ್ಧಾ ನಟಿಸಿದ ಸಿನಿಮಾಗಳು.

1010

ಶ್ರದ್ಧಾ ಕಪೂರ್ ಶೀಘ್ರದಲ್ಲೇ ನಿರ್ದೇಶಕ ವಿಶಾಲ್ ಫ್ಯೂರಿಯಾ ಅವರ 'ನಾಗಿನ್' ಮತ್ತು ಅಮರ್ ಕೌಶಿಕ್ ನಿರ್ದೇಶನದ 'ಸ್ಟ್ರೀ 2' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದ ಮೊದಲ ಭಾಗವು  ಸೂಪರ್‌ ಹಿಟ್‌ ಆಗಿತ್ತು.

click me!

Recommended Stories