ಈ ಸಂದರ್ಭದಲ್ಲಿ, ‘ನನಗೆ ಮೋಹನ್ ಬಾಬು ಹಾಗೂ ವಿಷ್ಣು ಮಂಚು ಒಳ್ಳೆಯ ಸ್ನೇಹಿತರು. ‘ಕಣ್ಣಪ್ಪ’ ಚಿತ್ರದಲ್ಲಿ ಬರುವ ಈಶ್ವರನ ಪಾತ್ರಕ್ಕೆ ಮೊದಲು ನನಗೇ ಕೇಳಲಾಗಿತ್ತು. ಕಾರಣಾಂತರಗಳಿಂದ ನಾನು ಆ ಪಾತ್ರದಲ್ಲಿ ನಟಿಸಲು ಆಗಿಲ್ಲ. ಸಂಭಾವನೆ ವಿಚಾರಕ್ಕಲ್ಲ’ ಎಂದು ಶಿವಣ್ಣ ಹೇಳಿದರು. ಶಿವರಾಜ್ ಕುಮಾರ್ ನಟಿಸಬೇಕಿದ್ದ ಈಶ್ವರ ಪಾತ್ರವನ್ನು ಬಾಲಿವುಡ್ ನಟ ಅಕ್ಷಯ್ ಕುಮಾರ್ ಮಾಡಿದ್ದಾರೆ.