ದಿಢೀರ್ ತಬ್ಬಿಕೊಂಡು ಚುಂಬಿಸಲು ಮುಂದಾದ ನಿರ್ದೇಶಕ,ನಟಿ ಸರ್ವಿನ್ ಚಾವ್ಲಾ ಹೇಳಿದ ಸಿನಿ ಘಟನೆ

Published : Jun 01, 2025, 06:25 PM IST

ಕಚೇರಿ ಡೂರ್ ತೆಗೆದಿದ್ದೇ ತಡ, ನಿರ್ದೇಶಕ ದಿಢೀರ್ ತಬ್ಬಿಕೊಂಡು ಚುಂಬಿಸಲು ಮುಂದಾದ. ಅಂದು ಆ ನಿರ್ದೇಶಕನ ಕಚೇರಿಯಲ್ಲಿ ನಡೆದಿದ್ದೇನು? ಖ್ಯಾತ ನಟಿ ಸರ್ವೀನ್ ಚಾವ್ಲಾ ಬಾಲಿವುಡ್ ಕಾಸ್ಟಿಂಗ್ ಕೌಚ್ ಕುರಿತು ತೆರೆದಿಟ್ಟಿದ್ದಾರೆ.

PREV
15

ಬಾಲಿವುಡ್ ಸಿನಿಮಾ ಇಂಡಸ್ಟ್ರಿಯಲ್ಲಿ ಕಳೆದ ಹಲವು ವರ್ಷಗಳಿಂದ ನಟಿ ಸರ್ವೀನ್ ಚಾವ್ಲಾ ಸಕ್ರಿಯವಾಗಿದ್ದಾರೆ. ವೆಬ್ ಸೀರಿಸ್, ಟಿವಿ ಶೋ, ಸಿನಿಮಾ ಸೇರಿದಂತೆ ಹಲವು ವೇದಿಕೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇದೀಗ ಕ್ರೈಮ್ ಜಸ್ಟೀಸ್ ಸೀನ್ 4 ಮೂಲಕ ಮತ್ತೆ ಪ್ರೇಕ್ಷಕರ ಹಿಡಿದಿಟ್ಟುಕೊಳ್ಳಲು ಬಂದಿದ್ದಾರೆ. ಈ ಸೀಸನ್ 4 ಪ್ರಮೋಶನ್ ವೇಳೆ ಸರ್ವೀನ್ ಚಾವ್ಲಾ ಬಾಲಿವುಡ್ ನಿರ್ದೇಶಕನೊಬ್ಬನ ಚುಂಬನ ಘಟನೆ ಬಿಚ್ಟಿಟ್ಟಿದ್ದಾರೆ. ಇಷ್ಟೇ ಅಲ್ಲ ರಾತ್ರಿ ಮಲಗಬೇಕು ಎಂದು ಬೇಡಿಕೆ ಇಟ್ಟ ನ್ಯಾಷನಲ್ ಅವಾರ್ಡ್ ವಿನ್ನಿಂಗ್ ನಿರ್ದೇಶಕನ ಘಟನೆಯನ್ನು ನಟಿ ತೆರೆದಿಟ್ಟಿದ್ದಾರೆ.

25

ಕ್ರೈಮ್ ಸೀಸನ್ 4 ಪ್ರಮೋಶನ್ ವೇಳೆ ನಡೆಸಿದ ಸಂದರ್ಶನದಲ್ಲಿ ಸರ್ವೀನ್ ಚಾವ್ಲಾ ಈ ಮಾಹಿತಿ ಬಹಿರಂಗಪಡಿಸಿದ್ದಾರೆ. ಸಿನಿಮಾ ಕತೆ, ಅವಕಾಶ ಕುರಿತು ನಿರ್ದೇಶಕ ಆಫರ್ ನೀಡಿದ್ದರು. ಸಿನಿಮಾ ಕೂಡ ಸೆಟ್ಟೇರಿತ್ತು. ನಾಯಕನ ಆಯ್ಕೆ ಸೇರದಂತೆ ಹಲವು ಪೋಷಕ ಪಾತ್ರಗಳ ಆಯ್ಕೆ ನಡೆಯುತ್ತಿತ್ತು. ಇದೇ ವೇಳೆ ತನಗೂ ಆಫರ್ ಬಂದಿತ್ತು ಎಂದು ಸರ್ವೀನ್ ಚಾವ್ಲಾ ಹೇಳಿದ್ದಾರೆ. ಹೀಗಾಗಿ ನಿರ್ದೇಶಕನ ಕಚೇರಿಗೆ ತೆರಳಿದ್ದೆ. ದೊಡ್ಡ ಕಚೇರಿಯ ಬಾಗಿಲು ತರೆಯುತ್ತಿದ್ದಂತೆ ನಿರ್ದೇಶಕ ದಿಢೀರ್ ತಬ್ಬಿಕೊಂಡು ಚುಂಬಿಸಲು ಮುಂದಾಗಿದ್ದಾನೆ ಎಂದು ಸರ್ವೀನ್ ಚಾವ್ಲಾ ಹೇಳಿದ್ದಾರೆ.

35

ಆದರೆ ನಿರ್ದೇಶಕನ ದೂರ ತಳ್ಳಿ ಏನು ಮಾಡುತ್ತೀದ್ದೀರಿ? ಎಂದು ಪ್ರಶ್ನಿಸಿದ ನಟಿಗೆ ಅವಕಾಶ, ಕರಿಯರ್ ಎಂದೆಲ್ಲಾ ನಿರ್ದೇಶಕ ಸೂಚ್ಯವಾಗಿ ಹೇಳಿದ್ದಾನೆ. ಅವಕಾಶಕ್ಕಾಗಿ ಈ ರೀತಿ ಮಾಡುವ ನಟಿ ನಾನಲ್ಲ ಎಂದು ನಿರ್ದೇಶಕನ ದೂರ ತಳ್ಳಿ ಕಚೇರಿಯಿಂದ ಹೊರಟೆ ಎಂದು ನಟಿ ಸರ್ವೀನ್ ಚಾವ್ಲಾ ಹೇಳಿದ್ದಾರೆ. ಈ ಘಟನೆ ನನಗೆ ಆಘಾತ ನೀಡಿತ್ತು. ಅವಕಾಶ ಕಳೆದುಕೊಂಡೆ. ಆದರೆ ನನ್ನ ನಿರ್ಧಾರದ ಬಗ್ಗೆ ಹೆಮ್ಮೆ ಇದೆ ಎಂದು ಸರ್ವೀನ್ ಚಾವ್ಲಾ ಹೇಳಿದ್ದಾರೆ.

45

ಇದೇ ವೇಳೆ ನ್ಯಾಷನಲ್ ಅವಾರ್ಡ್ ವಿನ್ನಿಂಗ್ ನಿರ್ದೇಶಕನೊಬ್ಬ ಬೇಡಿಕೆಯನ್ನು ನಟಿ ಸರ್ವೀನ್ ಚಾವ್ಲಾ ಬಿಚ್ಚಿಟ್ಟಿದ್ದಾರೆ.ಆ ನಿರ್ದೇಶಕನಿಗೆ ಹಿಂದಿ ಬರುತ್ತಿರಲಿಲ್ಲ. ಹೀಗಾಗಿ ಮತ್ತೊಬ್ಬ ಸಹಾಯಕ ನನ್ನ ಬಳಿ ಹೇಳಿದ ಮಾತು ಆಘಾತ ತಂದಿತ್ತು. ನಿರ್ದೇಶಕ ನಿಮ್ಮ ಜೊತೆ ಕೆಲ ಸಮಯ ಕಳೆಯಬೇಕು ಎಂದಿದ್ದಾರೆ ಎಂದ. ನ್ಯಾಷನಲ್ ಅವಾರ್ಡ್ ನಿರ್ದೇಶಕನ ಮಾತು ಏನಾಗಿರಬಹುದು ಎಂದು ಊಹಿಸಲು ಹೆಚ್ಚು ಸಮಯ ಬೇಕಾಗಲಿಲ್ಲ. ನೇರವಾಗಿ ಆತನ ಬಳಿ ಕೇಳಿದ, ನಿರ್ದೇಶಕನು ನನ್ನ ಜೊತೆ ಮಲಗಲು ಕೇಳುತ್ತಿದ್ದಾನಾ? ಸಾಧ್ಯವಿಲ್ಲ ಎಂದು ಹೇಳು ಎಂದು ಆತನ ಗದರಿಸಿ ಕಳುಹಿಸಿದ್ದೆ ಎಂದು ಸರ್ವೀನ್ ಹೇಳಿದ್ದಾರೆ.

55

ಬಾಲಿವುಡ್‌ನಲ್ಲಿ ಈ ರೀತಿ ಕೆಲ ಘಟನೆಗಳು ನಡೆದಿದೆ. ಆದರೆ ವೃತ್ತಿ ಜೀವನ, ಅವಕಾಶ, ಆರ್ಥಿಕತೆ ಎಲ್ಲವನ್ನು ಕೆಲವರು ದಾಳವಾಗಿ ಬಳಸಿಕೊಳ್ಳುತ್ತಾರೆ. ಈ ಸವಾಲುಗಳನ್ನು ಮೆಟ್ಟಿ ನಿಂತಿದ್ದೇನೆ. ಯಾರ ಮಾತಿಗೂ ಬಗ್ಗಿಲ್ಲ. ನನಗೆ ಸರಿ ಅನಿಸಿದ್ದು ಮಾಡಿದ್ದೇನೆ. ಇಷ್ಟವಾದ ಪಾತ್ರಗಳನ್ನು ಒಪ್ಪಿಕೊಂಡಿದ್ದೇನೆ. ಇದೀಗ ಹಲವು ವೇದಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ಕರಿಯರ್ ಹಿಂದಿರುಗಿ ನೋಡಿದರೆ ಖುಷಿ ಇದೆ ಎಂದು ಸರ್ವೀನ್ ಚಾವ್ಲಾ ಹೇಳಿದ್ದಾರೆ.

Read more Photos on
click me!

Recommended Stories