ಚರಣ್-ಬುಚ್ಚಿಬಾಬು ಕಾಂಬೊ ಸಿನಿಮಾ
ರಾಮ್ ಚರಣ್ ಮತ್ತು ಬುಚ್ಚಿಬಾಬು ಕಾಂಬಿನೇಷನ್‌ನ ಸಿನಿಮಾ ಶೂಟಿಂಗ್ ಶುರುವಾಗಿದೆ. ಉಪ್ಪೆನ ಸೂಪರ್ ಹಿಟ್ ನಂತರ ಬುಚ್ಚಿಬಾಬು ಸ್ಕ್ರಿಪ್ಟ್‌ಗಾಗಿ ಮೂರು ವರ್ಷ ಕಾಯುತ್ತಿದ್ದರು.
ಶಿವಣ್ಣನ ಪಾತ್ರ
ಸ್ಯಾಂಡಲ್‌ವುಡ್ ಸೂಪರ್ ಸ್ಟಾರ್ ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮ್ ಚರಣ್‌ಗೆ ಸ್ಫೂರ್ತಿ ನೀಡುವ ಪಾತ್ರವಿದು ಎನ್ನಲಾಗಿದೆ.
ಜಾನ್ವಿ ಕಪೂರ್ ನಾಯಕಿ
ರಾಮ್ ಚರಣ್ ಸಿನಿಮಾದಲ್ಲಿ ಶಿವಣ್ಣ ಜಾನ್ವಿ ಕಪೂರ್‌ಗೆ ತಂದೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಜಾನ್ವಿಗೆ ಭಾರೀ ಸಂಭಾವನೆ ನೀಡಿ ಆಯ್ಕೆ ಮಾಡಲಾಗಿದೆ.
2025 ರಲ್ಲಿ ಸಿನಿಮಾ ಬಿಡುಗಡೆ?
ಈ ಸಿನಿಮಾ 2025 ರಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಚಿತ್ರಕ್ಕೆ 'ಪೆದ್ದಿ' ಎಂದು ಹೆಸರಿಡುವ ಸಾಧ್ಯತೆಯಿದೆ. ಆರಂಭದಲ್ಲಿ ತಮಿಳು ನಟ ವಿಜಯ್ ಸೇತುಪತಿ ಅವರನ್ನು ಈ ಪಾತ್ರಕ್ಕೆ ಪರಿಗಣಿಸಲಾಗಿತ್ತು. ಆದರೆ ವಯಸ್ಸಾದ ಕಾರಣದಿಂದ ನಿರಾಕರಿಸಿದರು.
ಸುಕುಮಾರ್ ಟಿಪ್ಸ್
ಇತ್ತೀಚೆಗಷ್ಟೇ ರಜನಿಕಾಂತ್ ಅವರ ಜೈಲರ್ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಅರ್ಭಟಿಸಿದ್ದ ಶಿವರಾಜ್‌ಕುಮಾರ್ ಅವರು ಇತರ ಪ್ರಾದೇಶಿಕ ಭಾಷೆಯ ಚಿತ್ರಗಳಲ್ಲಿ ಹೆಚ್ಚು ಶಕ್ತಿಶಾಲಿ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಬಾಲಕೃಷ್ಣ ಅವರ ಗೌತಮಿಪುತ್ರ ಶಾತಕರ್ಣಿ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಅವರು ತೆಲುಗು ಚಿತ್ರ ಕಣ್ಣಪ್ಪನಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಆಕ್ಷನ್-ಹೀರೋ ಇಮೇಜ್‌ಗೆ ಶಿವಣ್ಣ ಹೆಸರುವಾಸಿಯಾಗಿದ್ದಾರೆ, ಕನ್ನಡ ಚಿತ್ರವಲ್ಲ ತಲುಗು, ತಮಿಳು ಎಲ್ಲ ಭಾಷೆಗಳ ಚಿತ್ರದಲ್ಲೂ ಅವರ ಪಾತ್ರಗಳು ಸದ್ದು ಮಾಡುತ್ತಿದೆ. ಇದೀಗ ಗ್ಲೋಬಲ್ ಸ್ಟಾರ್ ರಾಮ ಚರಣ್ ಜೊತೆಗೆ ಪಾತ್ರ ಹಂಚಿಕೊಳ್ಳುತ್ತಿರುವದು ಸಿನಿ ಪ್ರೇಕ್ಷರಲ್ಲಿ ಭಾರೀ ನಿರೀಕ್ಷೆ ಹುಟ್ಟಿಸಿದೆ.
ಆಕ್ಷನ್ ಡ್ರಾಮಾ
ಸುಕುಮಾರ್ ಈ ಸ್ಕ್ರಿಪ್ಟ್‌ಗೆ ಸಲಹೆಗಳನ್ನು ನೀಡಿದ್ದಾರೆ ಎನ್ನಲಾಗಿದೆ. ಚಿರಂಜೀವಿ ಕೂಡ ಸ್ಕ್ರಿಪ್ಟ್ ಕೇಳಿ ಸಲಹೆ ನೀಡಿದ್ದಾರಂತೆ. ಉಪ್ಪೆನ ಒಂದು ಪ್ರೇಮಕಥೆಯಾದರೆ, ರಾಮ್ ಚರಣ್‌ರ ಈ ಚಿತ್ರ ಆಕ್ಷನ್ ಡ್ರಾಮಾ. ಹಲವು ಖ್ಯಾತ ಬರಹಗಾರರು ಸ್ಕ್ರಿಪ್ಟ್‌ನಲ್ಲಿ ಕೆಲಸ ಮಾಡಿದ್ದಾರೆ.