ಮಂಚು ವಿಷ್ಣು ಅವರ ಕನಸಿನ ಯೋಜನೆ 'ಕಣ್ಣಪ್ಪ'. ಮೋಹನ್ ಬಾಬು ನಟಿಸಿ, ನಿರ್ಮಿಸಿರುವ ಈ ಚಿತ್ರ ಪೌರಾಣಿಕ ಕಥಾಹಂದರ ಹೊಂದಿದೆ. ಮುಖೇಶ್ ಕುಮಾರ್ ಸಿಂಗ್ ನಿರ್ದೇಶನದ ಈ ಚಿತ್ರದಲ್ಲಿ ಪ್ರಭಾಸ್, ಅಕ್ಷಯ್ ಕುಮಾರ್, ಮೋಹನ್ ಲಾಲ್, ಕಾಜಲ್, ಶರತ್ ಕುಮಾರ್, ಬ್ರಹ್ಮಾನಂದಂ ಮುಂತಾದವರಿದ್ದಾರೆ. ಈ ತಿಂಗಳ 27 ರಂದು ಬಿಡುಗಡೆಯಾಗಲಿದೆ.