ಈ ಕೆಲಸವನ್ನ ನನ್ನ ಗಂಡನ ಜೊತೆ ಎಂದಿಗೂ ಮಾಡಲ್ಲ: ಪಡೆಯಪ್ಪ ನಟಿ ರಮ್ಯಾ ಕೃಷ್ಣ

Published : Mar 07, 2024, 06:54 PM IST

ಹಿರಿಯ ನಟಿ ರಮ್ಯಾ ಕೃಷ್ಣನ್ ಈಗಲೂ ತನ್ನ ನಟನೆಯಿಂದ ಅಭಿಮಾನಿಗಳ ಹೃದಯ ಗೆಲ್ಲುತ್ತಿದ್ದಾರೆ. ಯಾವುದೇ ಪಾತ್ರವಾದ್ರೂ ಸೈ ಎನ್ನುತ್ತಾರೆ. 90ರ ದಶಕದಲ್ಲಿ ಸೌತ್ ಇಂಡಸ್ಟ್ರಿಯ ಟಾಪ್ ಹೀರೋಗಳ ಜೊತೆ ರಮ್ಯಾ ಕೃಷ್ಣನ್ ನಟಿಸಿದ್ದಾರೆ. ಈಗಲೂ ನಟಿ ಅದೇ ಫಿಟ್ನೆಸ್ ಕಾಯ್ದುಕೊಂಡಿದ್ದಾರೆ.

PREV
17
ಈ ಕೆಲಸವನ್ನ ನನ್ನ ಗಂಡನ ಜೊತೆ ಎಂದಿಗೂ ಮಾಡಲ್ಲ: ಪಡೆಯಪ್ಪ ನಟಿ ರಮ್ಯಾ ಕೃಷ್ಣ

1970 ರ ಸೆಪ್ಟೆಂಬರ್ 15 ರಂದು ಚೆನ್ನೈನಲ್ಲಿ ಜನಿಸಿದ ರಮ್ಯಾ ಕೃಷ್ಣ ಇಂದು ಸುಪ್ರಸಿದ್ಧ ನಟಿ. ಅನೇಕ ಹಿಂದಿ ಮತ್ತು ದಕ್ಷಿಣ ಭಾರತದ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಸೌತ್ ಚಿತ್ರಗಳಲ್ಲಿ ತಮ್ಮ ಪವರ್ ಫುಲ್ ನಟನೆಯ ಮೂಲಕ ಜನಮನ ಗೆದ್ದಿರುವ ರಮ್ಯಾ ಬಾಲಿವುಡ್‌ನಲ್ಲೂ ವಿಶೇಷ ಛಾಪು ಮೂಡಿಸಿದ್ದಾರೆ.  

27

1992 ರಿಂದ 2000ರವರೆಗೆ ರಮ್ಯಾ ಕೃಷ್ಣನ್​ ಸ್ಟಾರ್ ನಟಿಯಾಗಿ ಮಿಂಚಿದ್ರು. ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ ಸ್ಟಾರ್ ನಟರ ಜೊತೆ ನಟಿಸಿದ್ದಾರೆ. ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

37

ಪ್ರತಿಯೊಬ್ಬ ಚಲನಚಿತ್ರ ನಿರ್ಮಾಪಕರೂ ರಮ್ಯಾ ಕೃಷ್ಣ ಅವರ ನಟನೆಯಿಂದ ಪ್ರಭಾವಿತರಾಗುತ್ತಾರೆ. ರಮ್ಯಾ ಜೊತೆ ಒಮ್ಮೆ ಕೆಲಸ ಮಾಡಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ರಮ್ಯಾ ಒಬ್ಬ ವ್ಯಕ್ತಿ ಜೊತೆ ಎಂದಿಗೂ ಕೆಲಸ ಮಾಡಿಲ್ಲ. 

47

ರಮ್ಯಾ ಕೃಷ್ಣ ತಾನು ಅಪಾರವಾಗಿ ಪ್ರೀತಿಸುವ ತನ್ನ ಪತಿಯೊಂದಿಗೆ ಕೆಲಸ ಮಾಡಲು ಎಂದಿಗೂ ಬಯಸುವುದಿಲ್ಲ ಎನ್ನಲಾಗಿದೆ. ರಮ್ಯಾ ಕೃಷ್ಣ ಅವರ ಪತಿ ತೆಲುಗು ಚಿತ್ರರಂಗದ ಖ್ಯಾತ ನಿರ್ದೇಶಕ ಕೃಷ್ಣ ವಂಶಿ. ನಿರ್ದೇಶಕ ಕೃಷ್ಣ ವಂಶಿ ಜೊತೆ ರಮ್ಯಾ ಕೃಷ್ಣ ಕೆಲಸ ಮಾಡಲು ಬಯಸುವುದಿಲ್ಲವಂತೆ.  

57

ಸಿನಿಮಾದಲ್ಲಿ ಒಟ್ಟಿಗೆ ಕೆಲಸ ಮಾಡುವಾಗಲೇ ಪರಸ್ಪರ ಪ್ರೀತಿಸುತ್ತಿದ್ದ ರಮ್ಯಾ ಕೃಷ್ಣ ಮತ್ತು ಕೃಷ್ಣ ವಂಶಿ 2003 ರಲ್ಲಿ ವಿವಾಹವಾದರು. ಮದುವೆಯಾದ ಕೆಲವು ವರ್ಷಗಳ ನಂತರ, ಕೃಷ್ಣ ವಂಶಿ ಮತ್ತು ರಮ್ಯಾ ಕೃಷ್ಣ ಒಟ್ಟಿಗೆ ಕೆಲಸ ಮಾಡದಿರಲು ನಿರ್ಧರಿಸಿದರಂತೆ. 

67

ಪ್ರಭಾಸ್ ಅಭಿನಯದ ಬಾಹುಬಲಿ ಸಿನಿಮಾದಲ್ಲಿ ಶಿವಗಾಮಿಯಾಗಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ರಮ್ಯಾ ಕೃಷ್ಣನ್​ಗೆ ಮತ್ತೆ ಸಾಲು ಸಾಲು ಸಿನಿಮಾ ಆಫರ್ ಗಳು ಬರುತ್ತಿವೆ. ಸಿನಿಮಾಗಳ ಜೊತೆಗೆ ರಮ್ಯಾ ಕೃಷ್ಣನ್ ವೆಬ್ ಸೀರಿಸ್ ಗಳಲ್ಲೂ ನಟಿಸುತ್ತಿದ್ದಾರೆ. 

77

90ರ ದಶಕದಲ್ಲಿ ನಟಿ ರಮ್ಯಾ ಕೃಷ್ಣನ್​ ಪಡ್ಡೆ ಹುಡುಗರ ಕನಸಿನ ರಾಣಿಯಾಗಿದ್ರು. ಬ್ಯೂಟಿಫುಲ್ ರಮ್ಯಾ ಕೃಷ್ಣಗೆ ದಕ್ಷಿಣ ಭಾರತದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ಶಿವಗಾಮಿಯಾಗಿ ಬಾಹುಬಲಿ ಸಿನಿಮಾದಲ್ಲಿ ನಟಿಸಿದ ರಮ್ಯಾ ಕೃಷ್ಣನ್ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

Read more Photos on
click me!

Recommended Stories